ಅಜ್ಮೀರ್ ದರ್ಗಾ ದೇವಾಲಯವಾಗಿತ್ತು – ಸಮೀಕ್ಷೆಗೆ ಹಿಂದೂ ಸಂಘಟನೆ ಆಗ್ರಹ

ಜೈಪುರ: ರಾಜಸ್ಥಾನದ ಅಜ್ಮೀರ್‌ನಲ್ಲಿರುವ ಸೂಫಿ ಸಂತ ಮೊಯಿನುದ್ದೀನ್ ಚಿಸ್ತಿ ಅವರ ಸಮಾಧಿ ಒಂದು ಕಾಲದಲ್ಲಿ ದೇವಾಲಯವಾಗಿತ್ತು ಎಂದು ಹಿಂದೂ ಸಂಘಟನೆ ವಾದಿಸುತ್ತಿದ್ದು, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ(ಎಎಸ್‌ಐ)ಗೆ ಸಮೀಕ್ಷೆ ನಡೆಸುವಂತೆ ಒತ್ತಾಯಿಸುತ್ತಿದೆ.

ಕಾಶಿಯ ಜ್ಞಾನವಾಪಿ ಮಸೀದಿ, ಮಥುರಾದ ಶಾಹೀ ಈದ್ಗಾ ಮಸೀದಿಯ ಬಳಿಕ ಇದೀಗ ರಾಜಸ್ಥಾನದ ಅಜ್ಮೀರ್ ದರ್ಗಾ ಬಗ್ಗೆ ವಿವಾದ ಎದ್ದಿದೆ. ಹಿಂದೂ ಸಂಘಟನೆ ಮಹಾರಾಣಾ ಪ್ರತಾಪ್ ಸೇನೆಯ ರಾಜವರ್ಧನ್ ಸಿಂಗ್ ಪರ್ಮಾರ್ ಅವರು ದರ್ಗಾದ ಗೋಡೆಗಳು ಹಾಗೂ ಕಿಟಕಿಗಳ ಮೇಲೆ ಹಿಂದೂ ಚಿಹ್ನೆಗಳು ಇವೆ ಎಂದು ವಾದಿಸಿದ್ದಾರೆ. ಇದನ್ನೂ ಓದಿ: ದಾಳಿ ವೇಳೆ ಸಿಬಿಐ ನನ್ನ ವೈಯಕ್ತಿಕ ದಾಖಲೆಗಳನ್ನು ವಶಪಡಿಸಿಕೊಂಡಿದೆ – ಕಾರ್ತಿ ಚಿದಂಬರಂ ಆರೋಪ

ಈ ಬಗ್ಗೆ ಪ್ರತಿಕ್ರಿಸಿದ ಅಂಜುಮನ್ ಸೈಯದ್ ಝಡ್ಗಾನ್‌ನ ಅಧ್ಯಕ್ಷ ಮೊಯಿನ್ ಚಿಸ್ತಿ, ದರ್ಗಾದಲ್ಲಿ ಯಾವುದೇ ಹಿಂದೂ ಅಥವಾ ಸ್ವಸ್ತಿಕ್ ಚಿನ್ಹೆಗಳು ಇಲ್ಲ ಎಂಬುದನ್ನು ನಾನು ಜವಾಬ್ದಾರಿಯುತವಾಗಿ ಹೇಳುತ್ತಿದ್ದೇನೆ. ಈ ದರ್ಗಾ ಸುಮಾರು 850 ವರ್ಷಗಳಿಂದ ಇದೆ. ಪ್ರತಿ ವರ್ಷ ಲಕ್ಷಾಂತರ ಹಿಂದೂ ಹಾಗೂ ಮುಸ್ಲಿಮರು ಇಲ್ಲಿಗೆ ಭೇಟಿ ನೀಡುತ್ತಾರೆ. ಇಲ್ಲಿಯವರೆಗೆ ಅಂತಹ ಯಾವುದೇ ಪ್ರಶ್ನೆ ಉದ್ಭವಿಸಿರಲಿಲ್ಲ. ಹಿಂದೂ ಸಂಘಟನೆಯವರು ನಿರಾಧಾರ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಮ್ರಿನ್ ಭಟ್‌ ಹತ್ಯೆಗೈದಿದ್ದ ಇಬ್ಬರು ಸೇರಿ ನಾಲ್ವರು ಲಷ್ಕರ್ ಉಗ್ರರ ಹತ್ಯೆ

ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಅವರ ಸಮಾಧಿ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿರುವುದು ಎಂದರೆ, ಇಲ್ಲಿ ಅವರ ಧರ್ಮವನ್ನು ಲೆಕ್ಕಿಸದೇ ಪ್ರಾರ್ಥನೆ ಸಲ್ಲಿಸುವ ಕೋಟ್ಯಂತರ ಜನರ ಭಾವನೆಯನ್ನು ನೋಯಿಸುತ್ತಿರುವುದು ಎಂದರ್ಥ. ಇಂತಹ ವಿವಾದಕ್ಕೆ ಸರ್ಕಾರ ಸ್ಪಂದಿಸಬೇಕು ಎಂದು ಆಗ್ರಹಿಸಿದರು. ಇತ್ತ ಅಜ್ಮೀರ್ ದರ್ಗಾ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಕಾರ್ಯದರ್ಶಿ ವಾಹಿದ್ ಹುಸೇನ್ ಚಿಸ್ತಿ, ಇದು ಕೋಮು ಸೌಹಾರ್ದತೆಯನ್ನು ಕದಡುವ ಪ್ರಯತ್ನವಾಗಿದೆ ಎಂದು ಹೇಳಿದರು.

Comments

Leave a Reply

Your email address will not be published. Required fields are marked *