ಮಂಡ್ಯ: ಹಿಂದೂ-ಮುಸ್ಲಿಂ ಎಂದು ಕಿತ್ತಾಡುತ್ತಿರುವವರ ನಡುವೆ ಹಿಂದೂ ಯುವಕ ಮತ್ತು ಮುಸ್ಲಿಂ ಧರ್ಮಕ್ಕೆ ಸೇರಿದ ಯುವತಿ ಸರಳವಾಗಿ ಮದುವೆಯಾಗುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಜನಪರ ಚಳುವಳಿಯಲ್ಲಿ ತೊಡಗಿಸಿಕೊಂಡಿದ್ದ ಮಂಡ್ಯ ಜಿಲ್ಲೆಯ ಯುವಕ ಶಿವಕುಮಾರ್ ಗುಳಘಟ್ಟ ಮತ್ತು ಬಳ್ಳಾರಿ ಮೂಲದ ನಸ್ರೀನ್ ಶುಕ್ರವಾರ ಮಂಡ್ಯದ ಹಿಂದಿ ಭವನದಲ್ಲಿ ಒಬ್ಬರಿಗೊಬ್ಬರು ಹಾರ ಬದಲಾಯಿಸಿಕೊಳ್ಳುವ ಮೂಲಕ ಸರಳವಾಗಿ ವಿವಾಹವಾದರು.
ಒಲವಿನ ಮದುವೆ ಎಂಬ ಸರಳ ಸೂತ್ರದಡಿಯಲ್ಲಿ ಮದುವೆಯಾದ ನವ ಜೋಡಿ, ಅಂತರ್ ಧರ್ಮೀಯ ಮದುವೆ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.




Leave a Reply