ಕರಾವಳಿ ಉಗ್ರರ ಅಡ್ಡೆಯಾಗದಂತೆ ತಡೆಯಿರಿ- ಎನ್‍ಐಎ ಕೇಂದ್ರ ಸ್ಥಾಪನೆಗೆ ಹಿಂದೂ ಜಾಗರಣ ವೇದಿಕೆ ಒತ್ತಾಯ

Hindu Jagarana Vedike protest for NIA office

ಉಡುಪಿ: ಕರಾವಳಿಯಲ್ಲಿ ಎನ್‍ಐಎ ಕೇಂದ್ರ ಸ್ಥಾಪಿಸುವ ಮೂಲಕ ಉಗ್ರರ ಅಡ್ಡೆ ಆಗದಂತೆ ತಡೆಯಿರಿ ಎಂದು ಹಿಂದೂ ಜಾಗರಣ ವೇದಿಕೆ ಒತ್ತಾಯಿಸಿದೆ.

ಜಿಲ್ಲೆಯಾದ್ಯಂತ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟಿಸಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಉಡುಪಿಯ ರಜತಾದ್ರಿ ಕಟ್ಟಡದ ಬಳಿ ಪ್ರತಿಭಟಿಸಿದ ಹಿಂಜಾವೇ ಕರಾವಳಿಯಲ್ಲಿ ಭಯೋತ್ಪಾದನಾ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಸಮುದ್ರ ತಟದಲ್ಲಿ ರಕ್ಷಣೆ ಭದ್ರಪಡಿಸಲು ವಿಶೇಷ ನೀತಿ ರಚಿಸಬೇಕಿದೆ. ಲವ್ ಜಿಹಾದ್ ಮತ್ತು ಉಗ್ರಗಾಮಿ ಚಟುವಟಿಕೆಗಳಿಗೆ ನಿಕಟ ಸಂಪರ್ಕವಿದೆ. ಲವ್ ಜಿಹಾದ್ ಕೃತ್ಯ ತಡೆಗಟ್ಟಲು ಉತ್ತರಪ್ರದೇಶ ಮಾದರಿಯ ಕಾನೂನು ರಚನೆ ಮಾಡಿ ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿನ ಭಾರತೀಯರ ರಕ್ಷಣೆಗೆ ಕೇಂದ್ರ ಸರ್ಕಾರ ಸಿದ್ಧ: ಜೋಶಿ

ಮತಾಂತರಗೊಂಡಿರುವ ಹಿಂದೂ ಯುವತಿಯರ ಸದ್ಯದ ಸ್ಥಿತಿಗತಿಗಳ ಬಗ್ಗೆ ತನಿಖೆ ನಡೆಸಬೇಕು. ಉಗ್ರಗಾಮಿ ಚಟುವಟಿಕೆಗಳಿಗೆ ಆರ್ಥಿಕ ಮತ್ತು ನೈತಿಕ ಬೆಂಬಲ ನೀಡುವವರ ಬಗ್ಗೆ ತನಿಖೆ ನಡೆಸಬೇಕು. ಮಂಗಳೂರಿನಲ್ಲಿ ಎನ್‍ಐಎ ತನಿಖಾ ಸಂಸ್ಥೆಯ ಕಚೇರಿ ತೆರೆಯಬೇಕು ಎಂದು ಪ್ರತಿಭಟನಾಕಾರರು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಅಪರ ಜಿಲ್ಲಾಧಿಕಾರಿಯವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

Comments

Leave a Reply

Your email address will not be published. Required fields are marked *