SC, ST ಮೀಸಲಾತಿ ಸುಗ್ರೀವಾಜ್ಞೆ ಮೂಲಕ ಜನರನ್ನು ಬಿಜೆಪಿ ಬೇಕುಫ್ ಮಾಡುತ್ತಿದೆ: ಸುರ್ಜೆವಾಲಾ

ನವದೆಹಲಿ: ಎಸ್‍ಸಿ (SC) ಎಸ್‍ಟಿ (ST) ಮೀಸಲಾತಿ (Reservation) ವಿಚಾರದಲ್ಲಿ ರಾಜ್ಯ ಬಿಜೆಪಿ (BJP) ಸರ್ಕಾರ ಕರ್ನಾಟಕದ (Karnataka) ಜನರನ್ನು ಬೇಕುಫ್ ಮಾಡುತ್ತಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ರಣದೀಪ್ ಸಿಂಗ್‌ ಸುರ್ಜೆವಾಲಾ (Randeep Singh Surjewala) ವಾಗ್ದಾಳಿ ನಡೆಸಿದ್ದಾರೆ.

ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೂಡಲೇ ಸಂವಿಧಾನ ತಿದ್ದುಪಡಿ ಮೂಲಕ ಮೀಸಲಾತಿ ಅಧಿಕೃತಗೊಳಿಸಬೇಕು. ಎಸ್‍ಸಿ, ಎಸ್‍ಟಿಗೆ ಮೀಸಲಾತಿ ನೀಡಿರುವುದನ್ನು ಕಾಂಗ್ರೆಸ್ (Congress) ಬೆಂಬಲಿಸುತ್ತದೆ. ನಮ್ಮ ಸರ್ಕಾರ ಇದ್ದಾಗಲೆ ನಾಗಮೋಹನ್ ದಾಸ್ ವರದಿಗೆ ಸೂಚಿಸಲಾಗಿತ್ತು, ಆದರೆ ಬಿಜೆಪಿ ಸುಗ್ರೀವಾಜ್ಞೆ ಮೂಲಕ ಜನರನ್ನು ಮೂರ್ಖರನ್ನಾಗಿಸಲು ಪ್ರಯತ್ನಿಸುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ವರದಿಯನ್ನು ಬಿಜೆಪಿ ಯಾಕೆ ಅನುಷ್ಠಾನಕ್ಕೆ ತರಲಿಲ್ಲ? ಮುಂದಿನ ಐದು ತಿಂಗಳಲ್ಲಿರುವ ಚುನಾವಣಾ ಆಧರಿಸಿ ಈ ನಿರ್ಧಾರ ತೆಗೆದುಕೊಂಡಿದೆ. ಇದನ್ನೂ ಓದಿ: ಸಕ್ಕರೆ ರಫ್ತಿನ ಮೇಲಿನ ನಿರ್ಬಂಧ ಇನ್ನೊಂದು ವರ್ಷ ವಿಸ್ತರಣೆ

ಈಗಲೂ ಕಾಲ ಮಿಂಚಿಲ್ಲ, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ. ಸುಗ್ರೀವಾಜ್ಞೆ ಹೊರಡಿಸುವ ಅಗತ್ಯ ಏನಿದೆ. ಮೋದಿ (Narendra Modi) ಸರ್ಕಾರದ ಜೊತೆಗೆ ಮಾತನಾಡಿ, ಶೆಡ್ಯೂಲ್ ಒಂಭತ್ತರಲ್ಲಿ ತಂದು ಅನುಷ್ಠಾನಕ್ಕೆ ತರಲಿ. ಇದಕ್ಕೆ ಸಂಸತ್‍ನಲ್ಲಿ ಕಾಂಗ್ರೆಸ್ ಬೆಂಬಲ ಇರಲಿದೆ. ಇದನ್ನು ಬಿಟ್ಟು ಸುಗ್ರೀವಾಜ್ಞೆ ಮೂಲಕ ಜನರ ಕಣ್ಣೊರೆಸುವ ಪ್ರಯತ್ನ ಬೇಡ, ಸುಗ್ರೀವಾಜ್ಞೆಯ ಶಕ್ತಿ ಎಷ್ಟು ಎಂದು ಜನರಿಗೆ ತಿಳಿದಿದೆ ಎಂದರು. ಇದನ್ನೂ ಓದಿ: ಗೂಳಿಗೆ ಡಿಕ್ಕಿ ಹೊಡೆದು ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಜಖಂ – ತಿಂಗಳಲ್ಲಿ 3ನೇ ದುರ್ಘಟನೆ

ಬಿಜೆಪಿ ಜಾತಿಗಳನ್ನು ಒಡೆದು ಅಧಿಕಾರಕ್ಕೆ ಬರುತ್ತಿದೆ. ಲಿಂಗಾಯತ, ಕುರುಬ, ಒಕ್ಕಲಿಗ, ಮುಸ್ಲಿಂ ಹೀಗೆ ಒಂದೊಂದು ಜಾತಿಯ ವಿರುದ್ಧ ಮತ್ತೊಂದು ಜಾತಿ ಧರ್ಮವನ್ನು ಎತ್ತಿ ಕಟ್ಟಿ ರಾಜಕೀಯ ಮಾಡುತ್ತಿದೆ. ಎಲ್ಲ ರಾಜ್ಯಗಳಲ್ಲೂ ಬಿಜೆಪಿ ಇದೇ ತಂತ್ರ ಬಳಸುತ್ತಿದೆ. ಪಂಚಮಸಾಲಿ ಮೀಸಲಾತಿ ಹೋರಾಟದ ವಿಚಾರದಲ್ಲಿ ಸರ್ಕಾರದ ನಿರ್ಧಾರ ಏನು ಎಂಬ ಬಗ್ಗೆ ತಿಳಿಸಲಿ, ನಂತರ ನಮ್ಮ ನಿರ್ಧಾರವನ್ನು ತಿಳಿಸುತ್ತೇವೆ ಎಂದು ಅಭಿಪ್ರಾಯಪಟ್ಟರು.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *