ಹಿಜಬ್ ಗಲಾಟೆ ಹುಬ್ಬಳ್ಳಿ ಕಾಲೇಜುಗಳಿಗೆ ರಜೆ ಘೋಷಣೆ- ಕಾಲೇಜು ಸುತ್ತಲೂ 144 ಸೆಕ್ಷನ್ ಜಾರಿ

ಹುಬ್ಬಳ್ಳಿ: ನಗರದ ಕಾಲೇಜುಗಳಲ್ಲಿ ಹಿಜಬ್ ಹೋರಾಟ ಕಾಲಿಡುತ್ತಿದ್ದಂತೆ, ಪೊಲೀಸ್ ಮತ್ತು ಶಿಕ್ಷಣ ಇಲಾಖೆ ಜಾಗೃತಗೊಂಡಿದೆ. ಕಾಲೇಜ್‍ಗಳಿಗೆ ರಜೆ ಘೋಷಣೆಯ ಜೊತೆಗೆ ಹುಬ್ಬಳ್ಳಿಯ ಜೆಸಿ ನಗರದ ಕಾಲೇಜ್ ಸುತ್ತಮುತ್ತ 144 ಸೆಕ್ಷನ್ ಜಾರಿ ಮಾಡಲಾಗಿದೆ.

ಬಿಗುವಿನ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದಂತೆ ಕಾಲೇಜಿಗೆ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಕಮಿಷನರ್ ಲಾಭುರಾಮ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಪಬ್ಲಿಕ್ ಟಿವಿಗೆ ಮಾತನಾಡಿದ ಅವರು ಈಗಾಗಲೇ 144 ಸೆಕ್ಷನ್ ಜಾರಿ ಮಾಡಿದ್ದೇವೆ. ಸುತ್ತಮುತ್ತಲಿನ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಕಾಲೇಜು ಆಡಳಿತ ಮಂಡಳಿ ರಜೆ ಘೋಷಣೆ ಮಾಡಿ ಒಳ್ಳೆಯ ನಿರ್ಧಾರ ತೆಗೆದುಕೊಂಡಿದೆ. ಸದ್ಯ ಯಾವುದೇ ಅಹಿತಕರ ಘಟನೆ ನಡೆಯದಂತೆ ಕುಜಾಗೃತ ಕ್ರಮ ಕೈಗೊಳ್ಳಲಾಗಿದೆ. ಕೋರ್ಟ್ ಆದೇಶವನ್ನು ಪ್ರತಿಯೊಬ್ಬರೂ ಪಾಲಿಸಬೇಕು ಅಂತ ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ಮನವಿ ಮಾಡಿದ್ದಾರೆ.  ಇದನ್ನೂ ಓದಿ: ಇಂದು ಸಂಜೆಯಿಂದ ಲಘು ವಾಹನಗಳ ಸಂಚಾರಕ್ಕೆ ಪೀಣ್ಯ ಫ್ಲೈಓವರ್‌ ಮುಕ್ತ

ಹುಬ್ಬಳ್ಳಿಗೆ ಕಾಲಿಟ್ಟ ಹಿಜಬ್ ಹೋರಾಟ: ಇಷ್ಟು ದಿನ ತಣ್ಣಗಿದ್ದ ಹಿಜಬ್ ಕಿಚ್ಚು ಈಗ ಏಕಾಏಕಿ ಉಲ್ಬಣಗೊಂಡಿದೆ. ನಗರದ ಜೆಸಿ ನಗರದಲ್ಲಿರೋ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಹಿಜಾಬ್‍ಗಾಗಿ ವಿದ್ಯಾರ್ಥಿನಿಯರು ಹಠ ಹಿಡಿದು ಪ್ರತಿಭಟನೆ ನಡೆಸಿದರು. ಇಂದು ಕಾಲೇಜುಗಳು ಮರು ಆರಂಭವಾಗಿರುವ ಹಿನ್ನೆಲೆ ವಿದ್ಯಾರ್ಥಿಗಳು ಹಿಜಬ್ ಧರಿಸಿಕೊಂಡು ಕಾಲೇಜಿಗೆ ಬಂದಿದ್ದರು. ಇದರಿಂದಾಗಿ ವಿದ್ಯಾರ್ಥಿನಿಯರಿಗೆ ಕಾಲೇಜ್ ಒಳಗಡೆ ಬಿಡಲು ಪ್ರಾಂಶುಪಾಲರು ಅನುಮತಿ ನೀಡಿಲ್ಲ. ಗೇಟ್ ಬಳಿಯೇ ತಡೆದು ಹಿಜಬ್ ತೆಗೆದು ತರಗತಿಗಳಿಗೆ ಬರಲು ಸೂಚನೆ ನೀಡಿದರು. ಇದಕ್ಕೆ ಒಪ್ಪದ ವಿದ್ಯಾರ್ಥಿಗಳು ಗೇಟ್ ಮುಂಬಾಗದಲ್ಲಿ ನಿಂತು ಪ್ರತಿಭಟನೆಗೆ ಮುಂದಾಗಿದ್ದಾರೆ. ದನ್ನೂ ಓದಿ:  ಸಚಿವ ಈಶ್ವರಪ್ಪ ನಿವಾಸಕ್ಕೆ ಯೂತ್ ಕಾಂಗ್ರೆಸ್ ಮುತ್ತಿಗೆ

ವಿದ್ಯಾರ್ಥಿನಿಯರು ನ್ಯಾಯ ಸಿಗುವವರೆಗೂ ಹೋರಾಟ ಮಾಡುವುದಾಗಿ ಪಟ್ಟು ಹಿಡಿದರು. ಅಲ್ಲದೆ ವಿದ್ಯಾರ್ಥಿಗಳಿಗೆ ಕೆಲ ಮುಸ್ಲಿಂ ಸಂಘಟನೆಗಳ ಮತ್ತು ಪಾಲಕರ ಸಹಕಾರ ಸಿಕ್ಕ ಹಿನ್ನೆಲೆ ಸ್ಥಳದಲ್ಲಿ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಯಿತು.

Comments

Leave a Reply

Your email address will not be published. Required fields are marked *