ಭಾರತ ಹಿಂದೂ ರಾಷ್ಟ್ರವಲ್ಲ, ಮುಸ್ಲಿಂ ರಿಪಬ್ಲಿಕ್ ಕೂಡಾ ಅಲ್ಲ ಜಾತ್ಯಾತೀತ ರಾಷ್ಟ್ರ – ಹಿಜಬ್ ಬಿಡಲು ಸಾಧ್ಯವಿಲ್ಲ

ಬೆಂಗಳೂರು: ಭಾರತ ಹಿಂದೂ ರಾಷ್ಟ್ರವಲ್ಲ, ಮುಸ್ಲಿಂ ರಿಪಬ್ಲಿಕ್ ಕೂಡಾ ಅಲ್ಲ. ಇದು ಜಾತ್ಯಾತೀತ ರಾಷ್ಟ್ರ ಇದು ನಮ್ಮ ಜೀವನ ಮರಣದ ಪ್ರಶ್ನೆ. ಮುಸ್ಲಿಂ ವಿದ್ಯಾರ್ಥಿನಿಯರ ಶಿಕ್ಷಣದ ಪ್ರಶ್ನೆ ಹಾಗಾಗಿ ಹಿಜಬ್ ಬಿಡಲು ಸಾಧ್ಯವಿಲ್ಲ ಎಂದು ಅರ್ಜಿದಾರರ ಪರ ವಕೀಲ ಎ,ಎಂ.ಧರ್ ವಾದ ಮಂಡಿಸಿದ್ದಾರೆ.

ಹಿಜಬ್ ವಿವಾದ ಸಂಬಂಧ ಇವತ್ತು 10ನೇ ದಿನ ಸಿಜೆ ರಿತುರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಮತ್ತು ಜೆಎಮ್ ಖಾಜಿ ನೇತೃತ್ವದ ಹೈಕೋರ್ಟ್ ಪೂರ್ಣಪೀಠದಲ್ಲಿ ವಿಚಾರಣೆ ನಡಿಯಿತು. ಇದನ್ನೂ ಓದಿ: ಕೇಸರಿ ಶಾಲು, ಹಿಜಬ್ ತೆಗೆಸಿದಂತೆ ಟರ್ಬನ್ ತೆಗೆಸಿ – ರಾಜಧಾನಿಯಲ್ಲಿ ಟರ್ಬನ್ ಸಂಘರ್ಷ

ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಎ.ಎಂ.ಧರ್, ಕುರಾನ್‍ನಲ್ಲಿ ಇರುವಂತೆ ಹಿಜಬ್ ಅತ್ಯಂತ ಪವಿತ್ರ ಮತ್ತು ಕಡ್ಡಾಯ. ಕ್ರೈಸ್ತ ಧರ್ಮದಲ್ಲೂ ಕೂಡ ತಲೆಯ ಮೇಲೆ ಬಟ್ಟೆ ಹಾಕಿಕೊಳ್ಳುವ ಕ್ರಮವಿದೆ. ಕುರಾನ್‍ನಲ್ಲಿ ತಿಳಿಸಿರುವಂತೆ ಮಹಿಳೆಯರು ತಲೆ ಕೂದಲು ಮತ್ತು ಎದೆ ಭಾಗವನ್ನು ಮುಚ್ಚುಕೊಳ್ಳುವುದು ಅನಿವಾರ್ಯ ಹಾಗಾಗಿ ನಾವು ಇದೀಗ ಬರೀ ಹಿಜಬ್‍ಗೆ ಅವಕಾಶ ಕೇಳುತ್ತಿದ್ದೇವೆ ಬುರ್ಖಾ ಧರಿಸಲು ಅಲ್ಲ. ಈ ಬಗ್ಗೆ ಕೋರ್ಟ್ ಸೂಕ್ಷ್ಮವಾಗಿ ಪರಿಗಣಿಸಿ ತೀಪು ಕೋಡಬೇಕಾಗಿ ಕೇಳಿಕೊಂಡರು.

ಬಳಿಕ ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲೆ ಕೀರ್ತಿ ಸಿಂಗ್ ಹಿಜಬ್ ಧರಿಸುವುದು ಮೂಲಭೂತ ಹಕ್ಕು. ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಿಯಾಗಬಾರದು ಎಂದು ವಾದ ಮಂಡಿಸಿದರು. ಬಳಿಕ ದೇವದತ್ ಕಾಮತ್ ವಾದ ಮಂಡಿಸಿ ಹಿಜಬ್ ಇಸ್ಲಾಂನಲ್ಲಿ ಅತ್ಯಗತ್ಯ, ಹೀಗಾಗಿ ವಿದ್ಯಾರ್ಥಿನಿಯರಿಗೆ ಅವಕಾಶ ಮಾಡಿಕೊಡಬೇಕು. ಅವರ ಶೈಕ್ಷಣಿಕ ಹಕ್ಕನ್ನು ರಕ್ಷಿಸಬೇಕಾಗಿದೆ ಎಂದರು. ಇದನ್ನೂ ಓದಿ: ಉಕ್ರೇನ್ ಮೇಲೆ ರಷ್ಯಾ ಯುದ್ಧ; ಗಗನಕ್ಕೇರಿದ ತೈಲ, ಚಿನ್ನದ ಬೆಲೆ – ಭಾರತದ ಶೇರು ಮಾರುಕಟ್ಟೆಯಲ್ಲಿ ತಲ್ಲಣ

ಹೈಕೋರ್ಟ್ ಸೂಚನೆ ಮೇರೆಗೆ ಮುಚ್ಚಿದ ಲಕೋಟೆಯಲ್ಲಿ ಸಿಎಫ್‍ಐ ಕುರಿತ ವರದಿಯನ್ನು ಅಡ್ವೋಕೇಟ್ ಜನೆರಲ್ ಕೋರ್ಟ್‍ಗೆ ಸಲ್ಲಿಸಿದ್ದಾರೆ. ಮೊನ್ನೆಯ ವಿಚಾರಣೆ ವೇಳೆ ಹಿಜಬ್ ವಿವಾದಕ್ಕೆ ಸಿಎಫ್‍ಐ ಕಾರಣ ಎಂದು ಸರ್ಕಾರ ದೂಷಿಸಿತ್ತು. ಹೀಗಾಗಿ ಸಿಎಫ್‍ಐ ಚಟುವಟಿಕೆಗಳ ಬಗ್ಗೆ ಗುಪ್ತಚರ ಮಾಹಿತಿ ಸಲ್ಲಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ನ್ಯಾಯಪೀಠ ಸೂಚಿಸಿತ್ತು. ಶುಕ್ರವಾರ ವಿಚಾರಣೆ ಪೂರ್ಣಗೊಳಿಸುವುದಾಗಿ ನ್ಯಾಯಪೀಠ ತಿಳಿಸಿದ್ದು, ಉಳಿದ ಅರ್ಜಿಗಳ ವಿಚಾರಣೆಯನ್ನು ನಾಳೆ ನಡೆಸುವುದಾಗಿ ತಿಳಿಸಿದೆ.

Comments

Leave a Reply

Your email address will not be published. Required fields are marked *