ಹಿಜಬ್, ಬುರ್ಕಾ ಪುರುಷ ದಬ್ಬಾಳಿಕೆಯ ಸಂಕೇತ: ತಸ್ಲೀಮಾ ನಸ್ರೀನ್

ಢಾಕಾ: ಹಿಜಬ್, ಬುರ್ಕಾ ಅಥವಾ ನಿಖಾಬ್ ದಬ್ಬಾಳಿಕೆಯ ಸಂಕೇತ ಎಂದು ಬಾಂಗ್ಲಾದೇಶದ ಲೇಖಕಿ ತಸ್ಲೀಮಾ ನಸ್ರೀನ್ ಹೇಳಿಕೆ ನೀಡಿದ್ದಾರೆ.

ಹಿಜಬ್ ಕುರಿತ ವಿವಾದ ಕರ್ನಾಟಕದಲ್ಲಿ ಹುಟ್ಟಿ ದೇಶಾದ್ಯಂತ ಹರಡಿದೆ. ಈ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ ಲೇಖಕಿ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಶಿಕ್ಷಣದ ಹಕ್ಕು ಧರ್ಮದ ಹಕ್ಕು ಎಂಬುದು ನಾನು ನಂಬುತ್ತೇನೆ. ಕೆಲವು ಮುಸ್ಲಿಮರು ಹಿಜಬ್ ಅತ್ಯಗತ್ಯ ಎಂದು ಭಾವಿಸುತ್ತಾರೆ. ಇನ್ನೂ ಕೆಲವರು ಅದು ಅನಿವಾರ್ಯವಲ್ಲ ಎಂದು ಭಾವಿಸುತ್ತಾರೆ. ಆದರೆ 7ನೇ ಶತಮಾನದಲ್ಲಿ ಕೆಲವು ಸ್ತ್ರೀ ದ್ವೇಷವಾದಿಗಳು ಹಿಜಬ್ ಪರಿಚಯಿಸಿದರು. ಏಕೆಂದರೆ ಆ ಸಮಯದಲ್ಲಿ ಮಹಿಳೆಯರನ್ನು ಲೈಂಗಿಕ ವಸ್ತುಗಳಂತೆ ಪರಿಗಣಿಸಲಾಗುತ್ತಿತ್ತು ಎಂದಿದ್ದಾರೆ. ಇದನ್ನೂ ಓದಿ: ಉಡುಪಿಯಲ್ಲಿ ಹಿಜಬ್ ಹೋರಾಟಕ್ಕೆ ಪರೀಕ್ಷೆ ಬಲಿ

ಮಹಿಳೆಯರನ್ನು ನೋಡಿದರೆ ಪುರುಷರಿಗೆ ಲೈಂಗಿಕ ಪ್ರಚೋದನೆ ಉಂಟಾಗುತ್ತದೆ ಎಂಬ ಕಾರಣಕ್ಕೆ ಹಿಜಬ್ ಪರಿಚಯವಾಗಿತ್ತು. ಹೀಗಾಗಿ ಮಹಿಳೆಯರು ಹಿಜಬ್ ಅಥವಾ ಬುರ್ಕಾ ಧರಿಸಬೇಕಾಯಿತು ಹಾಗೂ ಪರುಷರಿಂದ ತಮ್ಮನ್ನು ಮರೆಮಾಡಿಕೊಳ್ಳಬೇಕಾಯಿತು ಎಂದು ತಿಳಿಸಿದರು. ಇದನ್ನೂ ಓದಿ: ನಮಗೆ ಆಜಾದಿ ಬೇಕು ಅಂತಾ ಘೋಷಣೆ ಕೂಗ್ತಿಯಾ? ನಿನ್ನನ್ನು ಅಟ್ಟಾಡಿಸಿ ಹೊಡೀತಿವಿ: ಸೀಮಾ ಇನಾಂದಾರ್‌ಗೆ ಜೀವ ಬೆದರಿಕೆ

ಇದು 21 ನೇ ಶತಮಾನ, ಆಧುನಿಕ ಸಮಾಜ. ಮಹಿಳೆಯರು ಪುರುಷರೊಂದಿಗೆ ಸಮಾನರು ಎಂಬುದನ್ನು ನಾವು ಕಲಿತಿದ್ದೇವೆ. ಆದ್ದರಿಂದ ಹಿಜಬ್, ನಿಖಾಬ್ ಅಥವಾ ಬುರ್ಕಾ ದಬ್ಬಾಳಿಕೆಯ ಸಂಕೇತಗಳಾಗಿವೆ ಎಂದಿದ್ದಾರೆ.

Comments

Leave a Reply

Your email address will not be published. Required fields are marked *