ವಿಜಯನಗರ: ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಕಾರ್ ಮತ್ತು ಬೈಕ್ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಸಾವಿಗೀಡಾಗಿದ್ದಾನೆ.
ಹನುಮಂತ(58) ಮೃತನಾಗಿದ್ದಾನೆ. ಈತ ಮೂಲತಃ ಹೊಸಪೇಟೆ ತಾಲೂಕಿನ ಸೀತಾರಾಮ್ ತಾಂಡಾದ ನಿವಾಸಿಯಾಗಿದ್ದಾನೆ. ಬೈಕ್ ಹತ್ತಿ ಸಂಬಂಧಿಕರ ಮನೆಗೆ ಹೊರಟವ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ನಡು ರಸ್ತೆಯಲ್ಲೇ ಶಿಶುವಿನ ತಲೆ ಕಂಡು ಭಯಭೀತರಾದ ಜನ

ಕೂಡ್ಲಿಗಿಯ ತಮ್ಮ ಸಂಬಂಧಿಕರ ಮನೆಗೆ ಹೋಗಿ ವಾಪಸ್ ಬರಬೇಕಾದ ಸಮಯದಲ್ಲಿ ಹಿಂಬದಿಯಿಂದ ಬಂದ ಕಾರ ಬೈಕ್ ಸವಾರನಿಗೆ ಗುದ್ದಿದೆ. ಈ ಪರಿಣಾಮ ಬೈಕ್ ಸವಾರ ಹನುಮಂತ ಗಂಭೀರವಾಗಿ ಗಾಯಗೊಂಡಿದ್ದಾನೆ. ಹಿನ್ನೆಲೆಯಲ್ಲಿ ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಇದನ್ನೂ ಓದಿ: ನಾಗರಹಾವಿನೊಂದಿಗೆ ಹುಡುಗಾಟವಾಡಿ ಮಸಣ ಸೇರಿದ ವೃದ್ಧ

ಅಪಘಾತದಲ್ಲಿ ಗಾಯಗೊಂಡಿದ್ದ ಹನುಮಂತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ವಿಮ್ಸ್‌ಗೆ ರವಾನೆ ಮಾಡಲಾಗಿತ್ತು, ಚಿಕಿತ್ಸೆಗೆ ಸ್ಪಂದಿಸದೇ ವಿಮ್ಸ್‌ನಲ್ಲಿ ಸಾವಿಗೀಡಾಗಿದ್ದಾನೆ. ಈ ಸಂಬಂಧ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply