– 1,200 ಅಡಿಗೂ ಹೆಚ್ಚು ವಿಸ್ತೀರ್ಣದ ಕಟ್ಟಡಕ್ಕೂ ಓಸಿ ವಿನಾಯ್ತಿ
– ಅಸ್ತಿತ್ವದಲ್ಲಿರುವ ಕಟ್ಟಡಗಳಿಗೆ ರಿಲ್ಯಾಕ್ಸೇಷನ್
ಬೆಂಗಳೂರು: ಓಸಿ (Occupancy Certificate) ಸಮಸ್ಯೆಯಿಂದ ಲಕ್ಷಾಂತರ ಮನೆಗಳಿಗೆ ವಿದ್ಯುತ್ ಸಂಪರ್ಕ (Electricity Connection) ಇಲ್ಲದಂತಾಗಿದೆ. ಹೀಗಾಗಿ ಸಮಸ್ಯೆ ಬಗೆಹರಿಸಿ ವಿದ್ಯುತ್ ಸಂಪರ್ಕ ನೀಡಲು ಸಿಎಂ, ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ. ಸೋಮವಾರ ಸಭೆ ಬಳಿಕ ಓಸಿ ಇಲ್ಲದೇ ವಿದ್ಯುತ್ ಸಂಪರ್ಕಕ್ಕೆಕ್ಕೆ ಗ್ರೀನ್ ಸಿಗ್ನಲ್ ಸಿಗುವ ಸಾಧ್ಯತೆ ಇದೆ.
ಹೌದು. ಬೆಂಗಳೂರು ನಗರ (Bengaluru City) ವ್ಯಾಪ್ತಿಯಲ್ಲಿ 1,200 ಚದರಡಿಗಿಂತ ಹೆಚ್ಚಿನ ವಿಸ್ತೀರ್ಣದ ಕಟ್ಟಡಗಳಿಗೆ ಸ್ವಾಧೀನಾನುಭವ ಪತ್ರ ಪಡೆಯುವುದರಿಂದ ವಿನಾಯ್ತಿ ನೀಡಬೇಕಾ? ಎಂಬ ವಿಷಯದ ಬಗ್ಗೆ ಕಳೆದ ಕ್ಯಾಬಿನೆಟ್‌ನಲ್ಲಿ ಚರ್ಚೆನಡೆಸಲಾಗಿತ್ತು. ಬೆಸ್ಕಾಂನಿಂದ ಓಸಿ ಇಲ್ಲದೇ ಇದ್ದ ಲಕ್ಷಾಂತರ ಮನೆಗಳಿಗೆ ವಿದ್ಯುತ್ ಸಂಪರ್ಕ ಇರಲಿಲ್ಲ, ಇದರಿಂದ ಲಕ್ಷಾಂತರ ಮನೆಗಳಿಗೆ ವಿದ್ಯುತ್ ಸಂಪರ್ಕ ಇಲ್ಲಂದಂತಾಗುತ್ತದೆ. ಹೀಗಾಗಿ ವಿದ್ಯುತ್ ಸಂಪರ್ಕಕ್ಕಾಗಿ ಓಸಿ ವಿನಾಯಿತಿ ನೀಡಲು ಸೋಮವಾರ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಥವಾ ಸಿಎಂ ನೇತೃತ್ವದಲ್ಲಿ ಸಭೆ ನಡೆಯುವ ಸಾಧ್ಯತೆ ಇದೆ.

ಇನ್ನೂ ಓಸಿಯಿಂದ ಬೆಸ್ಕಾಂ ವ್ಯಾಪ್ತಿಯಲ್ಲಿ 3 ಲಕ್ಷಕ್ಕೂ ಅಧಿಕ ಮನೆಗಳಿಗೆ ವಿದ್ಯುತ್ ಸಂಪರ್ಕ ಸಿಗಲಿದೆ. ಬೆಂಗಳೂರಿನಲ್ಲಿ ವಿದ್ಯುತ್ ಸಂಪರ್ಕಕ್ಕಾಗಿ 53 ಸಾವಿರ ಅರ್ಜಿ ಸಲ್ಲಿಕೆಯಾಗಿದೆ. 53 ಸಾವಿರ ಅರ್ಜಿಗಳಿಂದ 3 ಲಕ್ಷಕ್ಕೂ ಅಧಿಕ ಮನೆಗಳಿಗೆ ಸಂಪರ್ಕ ಸಿಗಲಿದೆ. ಅಸ್ತಿತ್ವದಲ್ಲಿ ಇರುವ ಕಟ್ಟಡಗಳಿಂದ ವಿದ್ಯುತ್ ಸಂಪರ್ಕಕ್ಕಾಗಿ 53 ಸಾವಿರ ಅರ್ಜಿ, ಕಮರ್ಷಿಯಲ್ ಮತ್ತು ರೆನ್ಸಿಡೆನ್ಷಿಯಲ್, 30*40 ಚದರ ಅಡಿ ನಿವೇಶನದ ವಿದ್ಯುತ್ ಸಂಪರ್ಕಕ್ಕೆ 33 ಸಾವಿರ ಅರ್ಜಿ ಸಲ್ಲಿಕೆಯಾಗಿದೆ. 1,200 ಚದರ ಅಡಿ ನಿವೇಶನಗಳಿಂದ 25,000 ಸಾವಿರ ಅರ್ಜಿಗೆ ರಿಲ್ಯಾಕ್ಸೇಷನ್ ಸಿಗಲಿದೆ.
