ನಂದಿ ಗಿರಿಧಾಮದಲ್ಲಿ ಆರಂಭವಾಯ್ತು ಹೈಟೆಕ್ ಅತಿಥಿ ಗೃಹ

– ಪ್ರವಾಸೋದ್ಯಮ ಇಲಾಖೆ ವತಿಯಿಂದ ಕಟ್ಟಡ ನಿರ್ಮಾಣ

ಚಿಕ್ಕಬಳ್ಳಾಪುರ: ವಿಶ್ವ ವಿಖ್ಯಾತ ನಂದಿ ಗಿರಿಧಾಮದಲ್ಲಿ ಇದೀಗ ಹೈಟೆಕ್ ಮಾದರಿಯ ಅತ್ಯಾಕರ್ಷಕ ನೂತನ ಅತಿಥಿ ಗೃಹಗಳು ಪ್ರವಾಸಿಗರ ಸೌಲಭ್ಯಕ್ಕೆ ಲಭ್ಯವಾಗಲಿವೆ. ನಂದಿಗಿರಿಧಾಮದ ಗಾಂಧಿ ನಿಲಯದ ಪಕ್ಕದಲ್ಲಿ ಪ್ರವಾಸೋದ್ಯಮ ಇಲಾಖೆ ವತಿಯಿಂದ ಸರಿ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣ ಮಾಡಲಾಗಿದೆ.

ಕಟ್ಟಡದಲ್ಲಿ 14 ಕೊಠಡಿಗಳು ಪ್ರವಾಸಿಗರ ಬಳಕೆಗೆ ಲಭ್ಯವಾಗಲಿದ್ದು, ಬೃಹತ್ ಸಭಾಂಗಣ ಕೂಡ ಇದೆ. ನಂದಿ ಗಿರಿಧಾಮದಲ್ಲಿ ತಂಗಲು ಸಮರ್ಪಕ ಕೊಠಡಿಗಳ ವ್ಯವಸ್ಥೆ ಇಲ್ಲದೆ ಪ್ರವಾಸಿಗರು ಪರದಾಡುವಂತಾಗಿತ್ತು. ಇದನ್ನ ಮನಗಂಡ ಪ್ರವಾಸೋದ್ಯಮ ಇಲಾಖೆ ಇದೀಗ ನೂತನ ಕಟ್ಟಡ ನಿರ್ಮಾಣ ಮಾಡಿ ಪ್ರವಾಸಿಗರ ಸೌಲಭ್ಯಕ್ಕೆ ಅನೂಕೂಲ ಮಾಡಿಕೊಟ್ಟಿದೆ.

ಅಂದ ಹಾಗೆ ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಡಾ.ಕೆ ಸುಧಾಕರ್ ನೂತನ ಕಟ್ಟಡದ ಉದ್ಘಾಟನೆಯನ್ನ ನೇರವೇರಿಸಿದ್ರು. ಪ್ರವಾಸೋದ್ಯಮ ಇಲಾಖೆಯ ಅಧಿಕೃತ ವೆಬ್ ಸೈಟ್ ನಲ್ಲಿ ಅನ್‍ಲೈನ್ ಮೂಲಕ ಕೊಠಡಿಗಳನ್ನ ಕಾಯ್ದಿರಿಬಹುದಾಗಿದ್ದು. ಒಂದು ಕೊಠಡಿಗೆ ದಿನಕ್ಕೆ 2000 ರೂಪಾಯಿ ಬಾಡಿಗೆ ನಿಗದಿ ಮಾಡಲಾಗಿದೆ ಅಂತ ಆಧಿಕಾರಿಗಳು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *