ಸಚಿವ ಜಾರ್ಜ್ ಪುತ್ರ ರಾಣಾಗೆ ರಿಲೀಫ್ – ನುಗು ಅಭಯಾರಣ್ಯ ರಸ್ತೆಯಲ್ಲಿ ರಾತ್ರಿ ಸಂಚಾರಕ್ಕೆ ಹೈಕೋರ್ಟ್ ಅಸ್ತು

ಬೆಂಗಳೂರು: ರಾತ್ರಿ ಹೊತ್ತು ತಮ್ಮ ಜಮೀನಿಗೆ ನುಗು ವನ್ಯಜೀವಿ ಅಭಯಾರಣ್ಯದಲ್ಲಿನ ರಸ್ತೆ ಬಳಸಲು ಸಚಿವ ಕೆ.ಜೆ ಜಾರ್ಜ್ ಪುತ್ರ ರಾಣಾ ಜಾರ್ಜ್‌ಗೆ ಹೈಕೋರ್ಟ್‌ ಅನುಮತಿ ನೀಡಿದೆ.

ರಾತ್ರಿ ಹೊತ್ತು ತಮ್ಮ ಜಮೀನಿಗೆ ತೆರಳಲು ಅಭಯಾರಣ್ಯದಲ್ಲಿ ಹಾದುಹೋಗಲು ಅನುಮತಿ ನೀಡುವಂತೆ ರಾಣಾ ಜಾರ್ಜ್ ಹೈಕೋರ್ಟ್‌ ಮೊರೆ ಹೋಗಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ, ವನ್ಯಜೀವಿಗಳಿಗೆ ತೊಂದರೆಯಾಗದಂತೆ ಸಂಚಾರ ನಡೆಸುವಂತೆ ಆದೇಶಿಸಿದೆ.

ರಾಣಾ ಜಾರ್ಜ್‌ ಅವರ ಜಮೀನು, ಹೆಚ್‌ಡಿ ಕೋಟೆಯ ಶಂಬುಗೌಡನಹಳ್ಳಿ ಮತ್ತು ಲಕ್ಕಸೋಗೆ ಗ್ರಾಮಗಳಲ್ಲಿದೆ. ಇಲ್ಲಿಗೆ ನುಗು ವನ್ಯಜೀವಿ ಅಭಯಾರಣ್ಯದ ರಸ್ತೆ ಮಾರ್ಗ ಮೂಲಕ ರಾತ್ರಿ-ಹಗಲು ಓಡಾಡಲು ಅನುಮತಿ ಕೋರಲಾಗಿತ್ತು. ರಾತ್ರಿ, ಹಗಲು ಸಂಚಾರಕ್ಕೆ ಅನುಮತಿಸಲು ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶಿಸಿದೆ.