ಮಂಗ್ಳೂರಲ್ಲಿ ಹೈಅಲರ್ಟ್ – ಆಳ ಸಮುದ್ರಕ್ಕೆ ತೆರಳದಂತೆ ಮೀನುಗಾರರಿಗೆ ಸೂಚನೆ

ಮಂಗಳೂರು: ಭಾರತದ ಮೇಲೆ ಪಾಕ್ ಪಾಪಿಗಳು ಒಂದಲ್ಲೊಂದು ಕಿಡಿಗೇಡಿ ಕೃತ್ಯ ಮಾಡ್ತಾನೆ ಇದ್ದಾರೆ. ಹೀಗಾಗಿ ದೇಶದ ಪಶ್ಚಿಮ ಕರಾವಳಿ ಉದ್ದಕ್ಕೂ ಹೈಅಲರ್ಟ್ ಘೋಷಿಸಲಾಗಿದೆ. ಮೀನುಗಾರರು ಆಳ ಸಮುದ್ರಕ್ಕೆ ತೆರಳದಂತೆ ಸೂಚನೆ ನೀಡಲಾಗಿದೆ.

ಗಡಿಭಾಗದಲ್ಲಿ ಭಾರತೀಯ ಸೇನೆ ಹೆಚ್ಚು ನಿಯೋಜನೆಗೊಂಡಂತೆ ಇತ್ತ ಯಾವುದೇ ಪರಿಸ್ಥಿತಿ ಎದುರಿಸಲು ಸಿದ್ಧವಿರುವಂತೆ ದೇಶದ ಪಶ್ಚಿಮ ಕರಾವಳಿಯಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಇದೇ ವೇಳೆ, ಪಶ್ಚಿಮ ಕರಾವಳಿಯ ಅರಬ್ಬೀ ಸಮುದ್ರದಲ್ಲಿ ನೌಕಾ ಪಡೆ ಸೇರಿದಂತೆ ಕರಾವಳಿ ತಟರಕ್ಷಣಾ ಪಡೆ ಮತ್ತು ಕೋಸ್ಟ್ ಗಾರ್ಡ್ ಗಸ್ತು ತಿರುಗಲು ಆರಂಭಿಸಿದೆ. ರಾಜ್ಯದ ಕರಾವಳಿಯ ಮೀನುಗಾರರು ಆಳ ಸಮುದ್ರ ಮೀನುಗಾರಿಕೆ ತೆರಳದಂತೆ ಸೂಚನೆ ನೀಡಲಾಗಿದೆ.

ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಕರಾವಳಿಯಿಂದ ಸಾವಿರಾರು ಬೋಟ್‍ಗಳು ಆಳಸಮುದ್ರಕ್ಕೆ ಮೀನುಗಾರಿಕೆಗೆ ತೆರಳುತ್ತವೆ. ಇದೀಗ ನೌಕಾ ಪಡೆಗಳ ಬೃಹತ್ ಹಡಗುಗಳು ಸಂಚಾರ ಆರಂಭಿಸಿರುವುದರಿಂದ ಆಳಸಮುದ್ರ ಮೀನುಗಾರಿಕೆಗೆ ಕಡಿವಾಣ ಹಾಕಲಾಗಿದೆ. ಯಾವುದೇ ರೀತಿಯ ಸಂಶಯಾಸ್ಪದ ಬೋಟ್ ಕಂಡುಬಂದಲ್ಲಿ ಕೂಡಲೇ ಮಾಹಿತಿ ನೀಡುವಂತೆ ಮೀನುಗಾರರಿಗೆ ಸೂಚನೆ ನೀಡಲಾಗಿದೆ ಎಂದು ಮೀನುಗಾರಿಕಾ ಇಲಾಖೆ ಉಪನಿರ್ದೇಶಕ ಚಿಕ್ಕಣ್ಣ ನಾಯ್ಕ್ ತಿಳಿಸಿದ್ದಾರೆ.

ಇದೇ ವೇಳೆ, ಕರಾವಳಿ ಜಿಲ್ಲೆಗಳ ಒಳಭಾಗದಲ್ಲಿಯೂ ಪೊಲೀಸರನ್ನು ಅಲರ್ಟ್ ಮಾಡಲಾಗಿದ್ದು, ಉಗ್ರರ ಸ್ಲೀಪರ್ ಸೆಲ್ ಬಗ್ಗೆ ನಿಗಾ ಇಡಲು ಸೂಚನೆ ನೀಡಲಾಗಿದೆ. ಅಲ್ಲದೆ ಪೊಲೀಸರು ಹೆಚ್ಚುವರಿ ಚೆಕ್ ಪೋಸ್ಟ್ ಗಳನ್ನು ಹಾಕಿದ್ದು, ತಪಾಸಣೆ ಬಿಗಿಗೊಳಿಸಿದ್ದಾರೆ. ರಾಜ್ಯದ ಕರಾವಳಿಯ ಮೂರೂ ಜಿಲ್ಲೆಗಳ ಪೊಲೀಸರು ಈ ಬಗ್ಗೆ ನಿಗಾ ಇಟ್ಟಿದ್ದಾರೆ. ಇದನ್ನೂ ಓದಿ: ಮಲ್ಪೆ ಬಂದರಿನಲ್ಲಿ ನಾಪತ್ತೆಯಾಗಿದ್ದ ಮೀನುಗಾರರು ದುಬೈನಲ್ಲಿ ಪತ್ತೆ?

ಏರ್ ಸ್ಟ್ರೈಕ್‍ನಿಂದಾಗಿ ತೀವ್ರ ಮುಖಭಂಗ ಅನುಭವಿಸಿದ್ದರೂ ಕುತಂತ್ರಿ ಪಾಕಿಸ್ತಾನ ಬುದ್ಧಿ ಕಲಿತಿಲ್ಲ. ನೇರವಾಗಿ ಭಾರತವನ್ನು ಎದುರಿಸಲು ಸಾಧ್ಯವಾಗದೇ ಇದೀಗ, ವಿಷ ಬಾಂಬ್‍ಗೆ ಮುಂದಾಗಿದೆ. ಭಾರತದ ಸೈನಿಕರ ಹತ್ಯೆಗೆ ಹಪಹಪಿಸುತ್ತಿರುವ ಪಾಕಿಸ್ತಾನ, ಇದೀಗ ಯೋಧರ ಆಹಾರದಲ್ಲಿ ವಿಷ ಬೆರೆಸಲು ಕುತಂತ್ರ ಮಾಡಿದೆ. ಇತ್ತ ಪುಲ್ವಾಮಾ ದಾಳಿ ಬಳಿ ಗಡಿಯಲ್ಲಿ ಯುದ್ಧದ ಸ್ಥಿತಿ ನಿರ್ಮಾಣವಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Comments

Leave a Reply

Your email address will not be published. Required fields are marked *