ಬಾಲಯ್ಯ ಸಿನಿಮಾದಲ್ಲಿ ಸೊಂಟ ಬಳುಕಿಸಲು 5 ಕೋಟಿ ಕೇಳಿದ್ರಾ? ತಮನ್ನಾ ಸ್ಪಷ್ಟನೆ

ಸೌತ್ ಬ್ಯೂಟಿ ತಮನ್ನಾ ಭಾಟಿಯಾ (Tamanna Bhatia) ಅವರು ಸದಾ ವಿಜಯ್ ವರ್ಮಾ (Vijay Varma) ಜೊತೆಗಿನ ಡೇಟಿಂಗ್ ವಿಷ್ಯವಾಗಿ ಸುದ್ದಿಯಲ್ಲಿರುತ್ತಿದ್ದರು. ಇದೀಗ ತಮ್ಮ ಸಿನಿಮಾ ಸಂಭಾವನೆ ವಿಚಾರವಾಗಿ ಗಾಸಿಪ್ ಹಬ್ಬಿದ್ದಕ್ಕೆ ತಮನ್ನಾ ಗರಂ ಆಗಿದ್ದಾರೆ. ಬಾಲಯ್ಯ (Balayya) ಸಿನಿಮಾದಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಲು 5 ಕೋಟಿ ರೂ. ಡಿಮ್ಯಾಂಡ್ ಮಾಡಿದ್ದರು ಎನ್ನಲಾದ ಸುದ್ದಿಗೆ ನಟಿ ರಿಯಾಕ್ಟ್ ಮಾಡಿದ್ದಾರೆ. ಇದನ್ನೂ ಓದಿ:ಭಾವಿಪತಿಗೆ ಸಿಹಿಮುತ್ತು ಕೊಟ್ಟು, ನಿಶ್ಚಿತಾರ್ಥದ ಸುದ್ದಿ ಹಂಚಿಕೊಂಡ ಅನುರಾಗ್‌ ಕಶ್ಯಪ್‌ ಪುತ್ರಿ

ಬಹುಭಾಷಾ ನಟಿಯಾಗಿ ಸದ್ದು ಮಾಡ್ತಿರುವ ತಮನ್ನಾ ಭಾಟಿಯಾ ಅವರು ‘ಕೆಜಿಎಫ್’ (KGF) ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ನಾಯಕಿಯಾಗಿಯೂ ಗೆದ್ದಿದ್ದಾರೆ. ಇತ್ತೀಚೆಗೆ ನಂದಮೂರಿ ಬಾಲಯ್ಯ ಅವರ 108ನೇ ಚಿತ್ರಕ್ಕೆ 5 ಕೋಟಿ ರೂ ಸಂಭಾವನೆ ಡಿಮ್ಯಾಂಡ್ ಮಾಡಿದ್ರು ಎಂಬ ಸುದ್ದಿಗೆ ನಟಿ ತಮನ್ನಾ ಸ್ಪಷ್ಟನೆ ನೀಡಿದ್ದಾರೆ. ಈ ಮೂಲಕ ಗಾಸಿಪ್‌ಗೆಲ್ಲಾ ಬ್ರೇಕ್ ಹಾಕಿದ್ದಾರೆ.

ಬಾಲಯ್ಯ ನಟನೆಯ 108ನೇ ಸಿನಿಮಾಗೆ ಅನಿಲ್ ರವಿಪುಡಿ ನಿರ್ದೇಶಕ. ಈ ಸಿನಿಮಾದಲ್ಲಿನ ಒಂದು ಐಟಂ ಸಾಂಗ್‌ನಲ್ಲಿ ಕುಣಿಯುವಂತೆ ತಮನ್ನಾಗೆ ಆಫರ್ ನೀಡಲಾಗಿದೆ ಎಂದು ಗಾಳಿ ಸುದ್ದಿ ಹಬ್ಬಿತ್ತು. ಅಷ್ಟೇ ಅಲ್ಲದೇ, ಆ ಹಾಡಿನಲ್ಲಿ ಡ್ಯಾನ್ಸ್ ಮಾಡಲು ತಮನ್ನಾ ಅವರು ಬರೋಬ್ಬರಿ 5 ಕೋಟಿ ರೂಪಾಯಿ ಸಂಭಾವನೆ ಕೇಳಿದ್ದಾರೆ ಎಂದು ಕೂಡ ಗಾಸಿಪ್ ಮಂದಿ ಮಾತನಾಡಿಕೊಂಡಿದ್ದರು. ಅದು ತಮನ್ನಾ ಗಮನಕ್ಕೂ ಬಂದಿದ್ದು, ಸ್ಪಷ್ಟನೆ ನೀಡಿದ್ದಾರೆ.

ನಿರ್ದೇಶಕ ಅನಿಲ್ ರವಿಪುಡಿ ಅವರ ಜೊತೆ ಕೆಲಸ ಮಾಡುವುದನ್ನು ನಾನು ಯಾವಾಗಲೂ ಎಂಜಾಯ್ ಮಾಡಿದ್ದೇನೆ. ಅದೇ ರೀತಿ ನಂದಮೂರಿ ಬಾಲಕೃಷ್ಣ ಅವರ ಬಗ್ಗೆಯೂ ನನಗೆ ಸಾಕಷ್ಟು ಗೌರವ ಇದೆ. ಆದರೆ ಅವರ ಸಿನಿಮಾದಲ್ಲಿನ ಹಾಡಿನಲ್ಲಿ ನಾನು ಇರುವುದಾಗಿ ಗಾಸಿಪ್ ಹಬ್ಬಿರುವುದು ನನಗೆ ಬೇಸರ ಮೂಡಿಸಿದೆ. ಆಧಾರ ಇಲ್ಲದ ಆರೋಪ ಮಾಡುವುದಕ್ಕೂ ಮುನ್ನ ನೀವು ಸ್ವಲ್ಪ ರಿಸರ್ಚ್ ಮಾಡಿಕೊಳ್ಳಿ ಎಂದು ನಟಿ ಖಡಕ್ ರಿಯಾಕ್ಷನ್ ಕೊಟ್ಟಿದ್ದಾರೆ.