ನೀನು ನನ್ನ ಮಗ ಎಂದು ಹೇಳಲು ಹೆಮ್ಮೆ ಪಡುತ್ತೇನೆ: ಬಿಗ್ ಬಿ

ಮುಂಬೈ: ನೀನು ನನ್ನ ಮಗ ಎಂದು ಹೇಳಲು ಹೆಮ್ಮೆ ಪಡುತ್ತೇನೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಬರೆದುಕೊಂಡು ತಮ್ಮ ಮಗ ಅಭಿಷೇಕ್ ಬಚ್ಚನ್ ಅವರನ್ನು ಪ್ರಶಂಸಿದ್ದಾರೆ.

ಅಭಿಷೇಕ್ ನಟನೆಯ ‘ಬಾಬ್ ಬಿಸ್ವಾಸ್’ ಸಿನಿಮಾದ ಟ್ರೇಲರ್ ನಿನ್ನೆ ಬಿಡುಗಡೆ ಮಾಡಲಾಗಿದ್ದು, ಈ ಟ್ರೇಲರ್ ನಲ್ಲಿ ಅಭಿ ನಟನೆ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗುತ್ತಿದ್ದಾರೆ. ಈ ಹಿನ್ನೆಲೆ ಮಗ ನಟನೆ ನೋಡಿ ಖುಷ್ ಆದ ಬಿಗ್ ಬಿ ಇನ್‍ಸ್ಟಾದಲ್ಲಿ ‘ಬಾಬ್ ಬಿಸ್ವಾಸ್’ ಸಿನಿಮಾದ ಟ್ರೇಲರ್ ಪೋಸ್ಟ್ ಮಾಡಿ, ನೀನು ನನ್ನ ಮಗ ಎಂದು ಹೇಳಲು ಹೆಮ್ಮೆ ಪಡುತ್ತೇನೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಚುನಾವಣೆಯಲ್ಲಿ ಗೆಲ್ಲುವವರೆಗೂ ರಾಜ್ಯ ವಿಧಾನಸಭೆಗೆ ಕಾಲಿಡಲ್ಲ: ಎನ್.ಚಂದ್ರಬಾಬು ನಾಯ್ಡು ಪ್ರತಿಜ್ಞೆ

 

View this post on Instagram

 

A post shared by Amitabh Bachchan (@amitabhbachchan)

ಪ್ರಸ್ತುತ ಈ ಚಿತ್ರವು ಡಿ.5 ರಂದು ಓಟಿಟಿಯಲ್ಲಿ ರಿಲೀಸ್ ಆಗುತ್ತಿದ್ದು, ಅಭಿ ಈ ಚಿತ್ರದಲ್ಲಿ ಬಾಬ್ ಬಿಸ್ವಾಸ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಬಾಬ್ ಬಿಸ್ವಾಸ್ ಕೋಮಾದಿಂದ ಬಂದ ಮೇಲೆ ಹಳೆಯ ನೆನಪುಗಳನ್ನು ಮರೆತು ಹೋಗಿರುತ್ತಾನೆ. ಆಗ ಹೇಗೆ ಜನರು ಆತ ಮರೆತು ಹೋಗಿರುವುವನ್ನು ಉಪಯೋಗ ಪಡೆದುಕೊಳ್ಳುತ್ತಾರೆ ಎಂಬುದೆ ಈ ಚಿತ್ರದ ಕಥೆ. ಟ್ರೇಲರ್ ನಲ್ಲಿಯೇ ಸಖತ್ ಥ್ರಿಲ್ಲಿಂಗ್ ಇರುವ ಈ ಮೂವೀ ಪೂರ್ತಿ ಹೇಗೆ ಇರಬಹುದು ಎಂಬ ಕುತೂಹಲ ಎಲ್ಲರಲ್ಲಿಯೂ ಮೂಡಿದೆ. ಅದರಲ್ಲಿಯೂ ಮುಗ್ಧತೆಯಿಂದ ಅಭಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.

ದಿಯಾ ಅನ್ನಪೂರ್ಣ ಘೋಷ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರ ಶಾರೂಖ್ ಖಾನ್ ಅವರ ರೆಡ್ ಚಿಲ್ಲಿಸ್ ಎಂಟರ್ಟೈನ್ಮೆಂಟ್ ಅಡಿ ನಿರ್ಮಾಣವಾಗುತ್ತಿದೆ. ಅಭಿ ಜೊತೆಗೆ, ಬಾಬ್ ಬಿಸ್ವಾಸ್ ಚಿತ್ರಾಂಗದಾ ಸಿಂಗ್, ಬಂಗಾಳಿ ನಟರಾದ ಪರಣ್ ಬಂಡೋಪಾಧ್ಯಾಯ ಮತ್ತು ರಜತವ ದತ್ತಾ ಕೂಡ ನಟಿಸಿದ್ದಾರೆ. ಇದನ್ನೂ ಓದಿ: ಓಟಿಟಿ ಪ್ರವೇಶಿಸಲು ಸಿದ್ಧರಾದ ನಾಗಚೈತನ್ಯ

ಇತ್ತೀಚೆಗೆ ಇವರು ಓಟಿಟಿಯಲ್ಲಿಯೇ ‘ಬ್ರೀತ್ ಇಂಟು ದಿ ಶಾಡೋ’ ಸರಣಿಯಲ್ಲಿ ನಟಿಸಿದ್ದರು. ಆ ಸರಣಿಯಲ್ಲಿಯೂ ಅಭಿ ಭಿನ್ನವಾಗಿದ್ದು, ಸೈ ಎನಿಸಿಕೊಂಡಿದ್ದರು. ಈ ಸರಣಿಯಲ್ಲಿ ಕನ್ನಡದ ನಟಿ ನಿತ್ಯ ಮೆನನ್ ಅಭಿಗೆ ಜೋಡಿಯಾಗಿ ನಟಿಸಿದ್ದರು.

Comments

Leave a Reply

Your email address will not be published. Required fields are marked *