ತನ್ನ ನೋಟ್ ಬ್ಯಾನ್ ಐಡಿಯಾವನ್ನು ರಿವಿಲ್ ಮಾಡಿದ್ರು ರಾಹುಲ್ ಗಾಂಧಿ

ನವದೆಹಲಿ: ತಾನು ಪ್ರಧಾನಿಯಾಗಿದ್ದರೆ ನೋಟು ನಿಷೇಧವನ್ನು ಹೇಗೆ ಜಾರಿಗೊಳಿಸುತ್ತಿದ್ದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ಮಲೇಷ್ಯಾದ ಸಂವಾದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ರಾಹುಲ್, ಸಭಿಕರೊಬ್ಬರ ಪ್ರಶ್ನೆಗೆ ಯಾರೂ ನಿರೀಕ್ಷಿಸದ ಉತ್ತರ ನೀಡಿದ್ದಾರೆ.

ನಾನು ಪ್ರಧಾನಿಯಾಗಿದ್ದು, ಒಂದೊಮ್ಮೆ ಯಾರಾದರೂ ನೋಟು ನಿಷೇಧ ಕುರಿತ ಕಡತವನ್ನು ನನಗೆ ನೀಡಿದ್ದರೆ ಅದನ್ನು ಕಸದ ತೊಟ್ಟಿಗೆ ಎಸೆಯುತ್ತಿದ್ದೆ. ಈ ಮೂಲಕ ನೋಟು ನಿಷೇಧವನ್ನು ಜಾರಿಗೊಳಿಸುತ್ತಿದ್ದೆ ಎಂದು ಹೇಳಿದ್ದಾರೆ.

ರಾಹುಲ್ ಮತ್ತು ಕಾಂಗ್ರೆಸ್ ಪಕ್ಷ ಮೋದಿ ಸರ್ಕಾರದ ನೋಟು ನಿಷೇಧ ಕುರಿತು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಈ ಕ್ರಮವನ್ನು ದುರಂತ ಎಂದು ಬಣ್ಣಿಸಿದ್ದಾರೆ. ಅಲ್ಲದೇ ನೋಟ ನಿಷೇಧ ಮೊದಲ ವರ್ಷದ ಆಚರಣೆಯನ್ನು `ಬ್ಲಾಕ್ ಡೇ’ ಎಂದು ಪ್ರತಿಭಟನೆ ನಡೆಸಿತ್ತು.

2016ರ ನವೆಂಬರ್ 8 ರಂದು ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಕಪ್ಪುಹಣವನ್ನು ತಡೆಗಟ್ಟಲು 500, 1 ಸಾವಿರ ರೂ. ನೋಟುಗಳನ್ನು ನಿಷೇಧಿಸುವ ತೀರ್ಮಾನವನ್ನು ಸರ್ಕಾರ ಕೈಗೊಂಡಿದೆ ಎಂದು ತಿಳಿಸಿದ್ದರು.

Comments

Leave a Reply

Your email address will not be published. Required fields are marked *