ಇಟಲಿಯಲ್ಲಿ ರಣ್‍ವೀರ್, ದೀಪಿಕಾ ಮದುವೆ ಫಿಕ್ಸ್-ಬಾಲಿವುಡ್ ಹಿರಿಯ ನಟನಿಂದ ಶುಭಾಶಯ

ಮುಂಬೈ: ಬಾಲಿವುಡ್ ಹಾಟ್ ಆ್ಯಂಡ್ ರೊಮ್ಯಾಂಟಿಕ್ ಜೋಡಿ ರಣ್‍ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಮದುವೆ ಇದೇ ನವೆಂಬರ್ 20ರಂದು ಇಟಲಿಯಲ್ಲಿ ನಡೆಯಲಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ. ಪತ್ರಿಕೆ ವರದಿ ಹಿನ್ನೆಲೆಯಲ್ಲಿ ಬಾಲಿವುಡ್ ಹಿರಿಯ ನಟ ಕಬಿರ್ ಬೇಡಿ ಇಬ್ಬರಿಗೂ ಶುಭಕೋರಿದ್ದಾರೆ.

ಕಳೆದ ಒಂದು ವರ್ಷದಿಂದ ದೀಪಿಕಾ ಮತ್ತು ರಣ್‍ವೀರ್ ಮದುವೆ ಸುದ್ದಿಗಳು ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿವೆ. ಸದ್ಯ ತಾರಾ ಜೋಡಿ ಇಟಲಿಯ ಕೋಮೋ ಸಿಟಿಯಲ್ಲಿ ಮದುವೆ ನಡೆಯಲಿದ್ದು, ನಂತರ ಬೆಂಗಳೂರು ಅಥವಾ ದೆಹಲಿ ಅಥವಾ ಮುಂಬೈನಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಸಲು ಕುಟುಂಬ ಸಿದ್ಧತೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ. ದೀಪಿಕಾ ಮತ್ತು ರಣ್‍ವೀರ್ ಇಬ್ಬರ ನೆಚ್ಚಿನ ತಾಣವಾಗಿರುವ ಕೋಮೋ ಸಿಟಿಯಲ್ಲಿ ಮದುವೆಯ ಸಿದ್ಧತೆಗಳು ನಡೆದಿವೆ.

ಮದುವೆಯಲ್ಲಿ ಕೇವಲ ಕುಟುಂಬಸ್ಥರು ಮತ್ತು ಆಪ್ತರು ಭಾಗಿಯಾಗಲಿದ್ದಾರೆ. ಮೂಲಗಳ ಪ್ರಕಾರ ಮದುವೆಯಲ್ಲಿ 30ಕ್ಕಿಂತ ಅಧಿಕ ಸದಸ್ಯರು ಪಾಲ್ಗೊಳ್ಳುವುದಿಲ್ಲವಂತೆ. ತುಂಬಾ ಖಾಸಗಿಯಾಗಿ ಮದುವೆ ನಡೆಯಲಿದ್ದು, ಆದ್ರೆ ಈ ಬಗ್ಗೆ ದೀಪಿಕಾ ಅಥವಾ ರಣ್‍ಬೀರ್ ಎಲ್ಲಿಯೂ ಅಧಿಕೃತವಾಗಿ ಹೇಳಿಕೊಂಡಿಲ್ಲ. ರಾಮ್‍ಲೀಲಾ ಚಿತ್ರದ ಬಳಿಕ ತೆರೆಯ ಮೇಲೆ ಮಿಂಚು ಹರಿಸಿರುವ ಜೋಡಿ ನಿಜ ಜೀವನದಲ್ಲಿ ಒಂದಾಗುತ್ತಿದ್ದಾರೆ. ಕೆಲವು ದಿನಗಳಿಂದ ರಣ್‍ವೀರ್ ಮತ್ತು ದೀಪಿಕಾ ಜೊತೆ ಜೊತೆಯಾಗಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಇತ್ತೀಚೆಗೆ ರಣ್‍ವೀರ್ ಸಿಂಗ್ ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ, ವೈಯಕ್ತಿಕ ಮತ್ತು ವೃತ್ತಿ ಜೀವನವನ್ನು ಬ್ಯಾಲೆನ್ಸ್ ಮಾಡಲು ಪ್ರಯತ್ನಿಸುತ್ತಿದ್ದೇನೆ. ನನ್ನ ಮುಂದಿನ ಜೀವನದ ತಯಾರಿಯಲ್ಲಿಯೂ ನಾನಿದ್ದೇನೆ ಅಂತಾ ಹೇಳಿದ್ರು. ಇಬ್ಬರೂ ಸ್ಟಾರ್ ಗಳು ತಮ್ಮ ಮುಂದಿನ ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ. ಎರಡು ಕುಟುಂಬಗಳಿಂದ ದಿನಾಂಕ ಅಂತಿಮವಾದ ಕೂಡಲೇ ಇಬ್ಬರ ಮದುವೆ ಆಗಲಿದೆ. ರಾಮ್‍ಲೀಲಾ, ಬಾಜೀರಾವ್ ಮಸ್ತಾನಿ ಹಾಗು ಪದ್ಮಾವತ್ ಸಿನಿಮಾಗಳಲ್ಲಿ ರಣ್‍ವೀರ್ ಮತ್ತು ದೀಪಿಕಾ ಕೆಮಿಸ್ಟ್ರಿ ತೆರೆಯ ಮೇಲೆ ಮೋಡಿ ಮಾಡಿತ್ತು. ದೀಪಿಕಾ ತಮ್ಮ ಮುಂದಿನ ಚಿತ್ರ `ಲವ್ 4 ಎವರ್’ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ರಣ್‍ವೀರ್ ಸಿಂಗ್ ಗುಲ್ಲಿ ಬಾಯ್ ಸಿನಿಮಾದ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Comments

Leave a Reply

Your email address will not be published. Required fields are marked *