ಕೃಷ್ಣನ ಅವತಾರದಲ್ಲಿ ಯುವತಿ ವೈರಲ್ – ವಿಡಿಯೋದ ಅಸಲಿಯತ್ತು ಏನು?

ತಿರುವನಂತಪುರಂ: ಭಾರತದ ಹಲವೆಡೆ ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು. ಈ ಮಧ್ಯೆ ಯುವತಿಯೊಬ್ಬರು ಕೃಷ್ಣನ ವೇಷದಲ್ಲಿ ನೃತ್ಯ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆದರೆ ಇದು ಈ ವರ್ಷದ ವಿಡಿಯೋ ಅಲ್ಲ ಎಂದು ಯುವತಿ ಸ್ಪಷ್ಟನೆ ನೀಡಿದ್ದಾರೆ.

ವೈರಲ್ ವಿಡಿಯೋದಲ್ಲಿ ಇರುವ ಯುವತಿಯ ಹೆಸರು ವೈಷ್ಣವ ಕೆ. ಸುನೀಲ್. ಮೂಲತಃ ಕೇರಳ ನಿವಾಸಿಯಾಗಿರುವ ಇವರು ಕಳೆದ ವರ್ಷ ಕೃಷ್ಣನ ಉಡುಪು ಧರಿಸಿ ನೃತ್ಯ ಮಾಡುವ ಮೂಲಕ ಮಡಿಕೆಯನ್ನು ಒಡೆಯುವ ಪ್ರಯತ್ನ ಮಾಡುತ್ತಿದ್ದರು. ಈ ವೇಳೆ ಸ್ಥಳೀಯರು ಅವರ ವಿಡಿಯೋ ಸೆರೆ ಹಿಡಿದಿದ್ದರು. ಆದರೆ ಈ ವಿಡಿಯೋ ಈಗ ವೈರಲ್ ಆಗುತ್ತಿದ್ದು, ಹಲವರು ತಮ್ಮ ವಾಟ್ಸಾಪ್‍ನಲ್ಲಿ ಸ್ಟೇಟಸ್ ಹಾಕಿಕೊಳ್ಳುತ್ತಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ವೈಷ್ಣವ ಕೆ. ಸುನೀಲ್, “ಗುರುವಾಯೂರು ದೇವಸ್ಥಾನದಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಿಸಿದ್ದ ವಿಡಿಯೋ ಇದು. ಇದು ಕಳೆದ ವರ್ಷದ ವಿಡಿಯೋ ಆಗಿದ್ದು, ಈಗ ವೈರಲ್ ಆಗುತ್ತದೆ ಎಂದುಕೊಂಡರಲಿಲ್ಲ. ನಾನು ಮೂರು ವರ್ಷದಿಂದ ಗುರುವಾಯೂರು ದೇವಸ್ಥಾನದಲ್ಲಿ ಡ್ಯಾನ್ಸ್ ಮಾಡುತ್ತಿದ್ದೇನೆ. ನಾನು ಗುರುವಾಯೂರು ನಿವಾಸಿಯಾಗಿದ್ದು, ಕೃಷ್ಣನ ಭಕ್ತೆ” ಎಂದು ತಿಳಿಸಿದ್ದಾರೆ.

ಕೇರಳದ ಪ್ರಸಿದ್ಧ ಗುರುವಾಯೂರು ದೇವಸ್ಥಾನದಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಈ ವೇಳೆ ಚಿಕ್ಕ ಮಕ್ಕಳು ಕೃಷ್ಣನ ವೇಷ ಧರಿಸಿ ಹಬ್ಬವನ್ನು ಆಚರಿಸುತ್ತಾರೆ. ಹೀಗೆ ಕಳೆದ ವರ್ಷ ಚಿಕ್ಕ ಮಕ್ಕಳ ಜೊತೆ ವೈಷ್ಣವ ಕೂಡ ನೃತ್ಯ ಮಾಡಿದ್ದು, ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಅಲ್ಲದೆ ಯುವತಿಯ ಎಕ್ಸ್ ಪ್ರೆಶನ್ ಗೆ ಜನ ಫಿದಾ ಆಗಿದ್ದಾರೆ.

https://www.youtube.com/watch?time_continue=39&v=4r29WrG6JbY

Comments

Leave a Reply

Your email address will not be published. Required fields are marked *