– ಮತ್ತೆ ಯಜ್ಞಕ್ಕೆ ಧಾರ್ಮಿಕ ಪಂಡಿತರ ಮೊರೆ
ಬೆಂಗಳೂರು: ಕರ್ನಾಟಕ ಪ್ರವಾಹ ಭೀತಿಯಲ್ಲಿದೆ. ಎಂದೂ ಕಂಡರಿಯದ ಮಳೆ ಬಂದಿದೆ. ಈ ಮಹಾಮಳೆಯ ಹಿಂದೆ ಮಹಾರಹಸ್ಯವೊಂದಿದೆ ಅಂತಾ ಖ್ಯಾತ ಜ್ಯೋತಿಷಿಗಳೊಬ್ಬರು ಹೇಳಿದ್ದಾರೆ.
ಹನ್ನೆರಡು ವರ್ಷಕ್ಕೊಮ್ಮೆ ಬರುವ ಪುಣ್ಯದಿನದಂದು ಕಳೆದ ವರ್ಷ ಕಾವೇರಿ ತಟದಲ್ಲಿ ಪುಷ್ಕರ ಯಾಗ ನಡೆದಿತ್ತು. ವರುಣನನ್ನು ಒಲಿಸಿಕೊಳ್ಳುವ ಗಂಗೆಯನ್ನು ಧರೆಗಿಳಿಸುವ ಈ ಪುಣ್ಯ ಪುಷ್ಕರದಿಂದಲೇ ಈ ಮಳೆಯಾಗಿದೆ. ಈ ಸಂದರ್ಭದಲ್ಲಿ ಕುಮಾರಸ್ವಾಮಿ ಕೂಡ ದೇಗುಲಗಳಿಗೆ ಭೇಟಿ ಕೊಟ್ಟಿದ್ದರು. ಇದರಿಂದಲೇ ಬರದಿಂದ ಕಂಗೆಟ್ಟ ರಾಜ್ಯದಲ್ಲಿ ಈ ವರ್ಷ ಮಳೆಯಾಗಿದೆ ಅಂತಾ ಅಂದಿನ ಯಾಗದ ನೇತೃತ್ವ ವಹಿಸಿದ್ದ ವಿದ್ವಾನ್ ಗಣೇಶ್ ತಿಳಿಸಿದ್ದಾರೆ.

ಈ ವರ್ಷ ಸೆಪ್ಟೆಂಬರ್ ನಲ್ಲಿ ಪುಷ್ಕರದ ಅಂತ್ಯಯಾಗ ನಡೆಯಲಿದ್ದು ಸರ್ಕಾರ ಕಾವೇರಿ ತಟದಲ್ಲಿ ಮತ್ತೆ ಪೂಜೆ ನಡೆಸಬೇಕು. ಆಗ ಮುಂದಿನ ವರ್ಷವೂ ಬರದಿಂದ ತಪ್ಪಿಸಿಕೊಳ್ಳಬಹುದು ಅಂತಾ ಜ್ಯೋತಿಷಿಗಳು ಸರ್ಕಾರಕ್ಕೆ ಮನವಿ ಸಲ್ಲಿಸಲು ತಯಾರಾಗಿದ್ದಾರೆ.
ಆದರೆ ಕಳೆದ ವರ್ಷ ಬರದಿಂದ ಕಂಗೆಟ್ಟು ಅಂದಿನ ಜಲಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್ ಪ್ರಜನ್ಯ ಹೋಮ ಮಾಡಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದರು. ಈಗ ಮಳೆ ಬರುತ್ತಿರುವ ಸಂದರ್ಭದಲ್ಲಿ ಈ ಹೋಮ ನಡೆಸಲು ಸರ್ಕಾರ ಮುಂದಾಗುತ್ತಾ ಅನ್ನೋದು ಸದ್ಯದ ಕುತೂಹಲವಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Leave a Reply