ಸಚಿವ ಸ್ಥಾನಕ್ಕೆ ಎನ್.ಮಹೇಶ್ ರಾಜೀನಾಮೆಯಿಂದ ಬಿಜೆಪಿಗೇನು ಲಾಭ..?

ಬೆಂಗಳೂರು: ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸ್ಥಾನಕ್ಕೆ ಎನ್ ಮಹೇಶ್ ಅವರು ರಾಜೀನಾಮೆ ನೀಡಿದ್ದಾರೆ. ಇದು ಬಿಜೆಪಿಗೆ ಲಾಭವಾಗಲಿದೆ ಅಂತ ಹೆಳಲಾಗುತ್ತಿದೆ.

ಮಹೇಶ್ ರಾಜೀನಾಮೆಗೂ ಮುನ್ನ ಬಿಜೆಪಿ ನಾಯಕರ ಸರ್ಕಾರ ಬೀಳಿಸುವ ಮಾತನಾಡಿದ್ದು, ಆಪರೇಷನ್ ಕಮಲಕ್ಕೆ ಬಿಜೆಪಿ ಹೈಕಮಾಂಡ್ ರೆಡ್‍ಸಿಗ್ನಲ್ ಕೊಟ್ಟಿದ್ಯಾ ಅಥವಾ ಗ್ರೀನ್ ಸಿಗ್ನಲ್ ಕೊಟ್ಟಿದ್ಯಾ ಎಂಬ ಪ್ರಶ್ನೆಯೊಂದು ಇದೀಗ ಮೂಡಿದೆ.


ನವೆಂಬರ್‍ನಲ್ಲಿ ಮತ್ತೊಂದು ಆಪರೇಷನ್ ಆಪರೇಟಿಂಗ್ ಗೆ ಬಿಜೆಪಿ ಸಿದ್ಧತೆ ನಡೆಸುತ್ತಿದೆ. ಈ ಮೂಲಕ ಬಿಜೆಪಿ ಬೈ ಎಲೆಕ್ಷನ್ ಫಲಿತಾಂಶದ ಬಳಿಕ ಅಖಾಡಕ್ಕೆ ಇಳಿಯುತ್ತಂತೆ. ಈ ವಿಚಾರವನ್ನು ರಾಜ್ಯ ಬಿಜೆಪಿ ನಾಯಕರು ಈಗಾಗಲೇ ಹೈಕಮಾಂಡ್‍ಗೂ ಮಾಹಿತಿ ರವಾನಿಸಿದ್ದಾರೆ. ರಾಜ್ಯ ನಾಯಕರ ಪ್ಲ್ಯಾನ್‍ನಂತೆ ನಾವು ಅಂತಾ ಹೈಕಮಾಂಡ್ ಗ್ರೀನ್‍ಸಿಗ್ನಲ್ ಕೊಟ್ಟಿದ್ದು, ಆಪರೇಷನ್ ಟೀಂ ಮೆಂಬರ್ಸ್ ನವೆಂಬರ್‍ನಲ್ಲಿ ಮತ್ತೆ ಕಾರ್ಯಾಚರಣೆ ನಡೆಸಲು ಬಿಎಸ್‍ವೈ ಸೂಚಿಸಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.

ಹಾಗಾದ್ರೆ ಬಿಎಸ್‍ಪಿ ಮಹೇಶ್ ರಾಜೀನಾಮೆ ನಂತ್ರ ಬಿಜೆಪಿ ಲೆಕ್ಕಚಾರ ಏನು ಅಂತ ನೋಡೋದಾದ್ರೆ:
> ಬೈ ಎಲೆಕ್ಷನ್ ಫಲಿತಾಂಶವನ್ನು ಕಾದುನೋಡಿ, ಬಳಿಕ ಆಪರೇಷನ್ ಶುರು ಮಾಡೋದು
> ಸಂಪುಟ ವಿಸ್ತರಣೆಯ ವಿಳಂಬವನ್ನೇ ಮತ್ತೊಮ್ಮೆ ಬಳಸಿಕೊಂಡು ಕೈ ಶಾಸಕರಿಗೆ ಗಾಳ
> ಕೇಂದ್ರ ಮಟ್ಟದಲ್ಲಿ ಮಾಯಾಜಾಲದೊಂದಿಗೆ ಬಿಎಸ್‍ಪಿ ಬೆಂಬಲ ಪಡೆಯುವ ತಂತ್ರ..?
> ಶಿವಮೊಗ್ಗ, ಬಳ್ಳಾರಿ ಲೋಕಸಭಾ ಉಪಚುನಾವಣೆ ಗೆಲ್ಲುವ ಮೂಲಕ ಕೈ ವೀಕ್ ಮಾಡೋದು


> ನವೆಂಬರ್ ಅಂತ್ಯದಲ್ಲಿ ಶಾಸಕರು ರಾಜೀನಾಮೆ ಕೊಟ್ಟರೆ ಲೋಕಸಭೆ ಜತೆಗೆ ಚುನಾವಣೆ ಲೆಕ್ಕಚಾರ
> ಹಾಗಾಗಿ ನವೆಂಬರ್ ಎರಡನೇಯ ವಾರದಿಂದ ಆಪರೇಷನ್ ಸೆಕೆಂಡ್ ಛಾನ್ಸ್ ಆರಂಭಿಸುವುದು
> ಈ ಬಾರಿ ಗಾಳಕ್ಕೆ ಸಿಕ್ಕ ಮೀನುಗಳನ್ನ ಒಟ್ಟುಗೂಡಿಸಲು ಪ್ರತ್ಯೇಕ ಮೂರು ಟೀಂ ರಚಿಸುವುದಾಗಿದೆ.

ಒಟ್ಟಿನಲ್ಲಿ ಮಹೇಶ್ ರಾಜೀನಾಮೆ ನಂತರ ಇದೀಗ ರಾಜ್ಯ ಬಿಜೆಪಿ ಚುನಾವಣೆ ಗೆಲ್ಲಲು ಮತ್ತಷ್ಟು ಕಸರತ್ತು ನಡೆಸುತ್ತಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *