ಹೇಮಾವತಿ ಕೆನಾಲ್ ಕದನ – ಡಿಕೆಶಿ ಸಂಬಂಧಿ ನಂಗೆ ಫೋನ್ ಮಾಡಿ ಧಮ್ಕಿ ಹಾಕಿದ್ದಾರೆ: ರಾಜೇಂದ್ರ ರಾಜಣ್ಣ

ಬೆಂಗಳೂರು: ಹೇಮಾವತಿ ಕೆನಾಲ್ ವಿಚಾರದಲ್ಲಿ ಡಿಕೆಶಿ (DK Shivakumar) ಸಂಬಂಧಿ ಕುಣಿಗಲ್ ಶಾಸಕ ರಂಗನಾಥ್ (Kunigal Ranganath) ನಂಗೆ ಫೋನ್ ಮಾಡಿ ಧಮ್ಕಿ ಹಾಕಿದ್ದಾರೆ ಎಂದು ಎಂಎಲ್‌ಸಿ ರಾಜೇಂದ್ರ ರಾಜಣ್ಣ (Rajendra Rajanna) ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಮಧುಗಿರಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಅವರು, ಕುಣಿಗಲ್ ಕಾಂಗ್ರೆಸ್ ಶಾಸಕ ಡಾ.ರಂಗನಾಥ್ ನನಗೆ ಫೋನ್ ಮಾಡಿ ಧಮ್ಕಿ ಹಾಕಿದ್ದಾರೆ. 2 ತಿಂಗಳಿಂದ ಕುಣಿಗಲ್ ಕ್ಷೇತ್ರದವರು ಲಿಂಕ್ ಕೆನಾಲ್ ವಿಚಾರವಾಗಿ ಫೋನ್ ಮಾಡುತ್ತಿದ್ದರು. ಲಿಂಕ್ ಕೆನಾಲ್ ಕಾಮಗಾರಿ ನಾನು ಹಾಗೂ ಸಚಿವರು ನಿಲ್ಲಿಸುತ್ತೇವೆ. ನೀವು ತಡೆಯುತ್ತೀರಾ? ನಮ್ಮ ತಾಲೂಕಿಗೆ ನೀರು ಬರುವುದನ್ನು ನೀವು ಅಪ್ಪ, ಮಗ ಯಾಕೆ ಅಡಚಣೆ ಮಾಡ್ತೀರಾ? ಎಂದು ಧಮ್ಕಿ ಹಾಕಿದ್ದಾರೆ ಎಂದು ಹೇಳಿದರು.ಇದನ್ನೂ ಓದಿ: ತೊಗರಿ ಹೊಟ್ಟಿನಲ್ಲಿ ಬಚ್ಚಿಟ್ಟಿದ್ದ 7 ಲಕ್ಷಕ್ಕೂ ಅಧಿಕ ಮೌಲ್ಯದ ಗಾಂಜಾ ಪತ್ತೆ ಹಚ್ಚಿದ ಶ್ವಾನ


ಡಿಕೆಶಿ ಕನಸಿನ ಕೂಸು ಹೇಮಾವತಿ ಎಕ್ಸ್‌ಪ್ರೆಸ್‌ ಕೆನಾಲ್ (Hemavathi Express Canal) ಪರೋಕ್ಷವಾಗಿ ವಿರೋಧಿಸಿದ ಅವರು, ಲಿಂಕ್ ಕೆನಾಲ್‌ನ್ನು ನಾವು ತಡೆದಿಲ್ಲ. ಟೆಂಡರ್ ಆಗಿದೆ ಕಾಮಗಾರಿ ನಡೆಯುತ್ತಿದೆ. ಹೇಮಾವತಿ ಎಕ್ಸ್‌ಪ್ರೆಸ್‌ ಕೆನಾಲ್‌ನಿಂದ ಮಧುಗಿರಿ ಹಾಗೂ ಕೊರಟಗೆರೆ ತಾಲೂಕಿಗೆ ತೊಂದರೆ ಆಗುತ್ತದೆ. ನಮ್ಮ ಕುಡಿಯುವ ನೀರನ್ನು ನೀವು ದಾರಿ ಮಧ್ಯದಲ್ಲೇ ತೆಗೆದುಕೊಂಡರೆ ನಮ್ಮ ಪರಿಸ್ಥಿತಿ ಏನಾಗಬೇಕು? ಎಂದು ಕಿಡಿಕಾರಿದರು.

ಇನ್ನೂ ಸಹಕಾರಿ ಸಚಿವರಿಂದ ಸಹಕಾರ ಸಿಗುತ್ತಿಲ್ಲ ಎಂದು ಸದನದಲ್ಲಿ ಆರೋಪಿಸಿದ್ದ ಕುಣಿಗಲ್ ಶಾಸಕ ರಂಗನಾಥ್‌ಗೆ ಪ್ರತಿಕ್ರಿಯಿಸಿದ ಅವರು, ನಿಮ್ಮ ಸಂಬಂಧಿ ಪ್ರಭಾವಿ ಸಚಿವರಿದ್ದಾರೆ ಎಂದು ಹೇಳಿ ನೀವು ನೀರು ತೆಗೆದುಕೊಂಡು ಹೋಗಬಹುದಾ? ಎಕ್ಸ್‌ಪ್ರೆಸ್‌ ಕೆನಾಲ್ ವಿಚಾರದಲ್ಲಿ ಜಿಲ್ಲೆಗೆ ಆಗುವ ಅನ್ಯಾಯವನ್ನು ರಾಜಣ್ಣ ಅವರು ಕ್ಯಾಬಿನೆಟ್‌ನಲ್ಲಿ ಹೇಳಿದ್ದಾರೆ. ಅದನ್ನೇ ನೆಪ ಮಾಡಿಕೊಂಡು ನಮ್ಮ ಮೇಲೆ ಮಾತನಾಡೋದು ಸರಿನಾ? ಎಂದು ಟಾಂಗ್ ಕೊಟ್ಟರು.

ಡಿಕೆಶಿ ಪ್ರತಿಕ್ರಿಯೆ ಏನು?
ಹೇಮಾವತಿ ಕೆನಾಲ್ (Hemavathi Canal) ವಿಚಾರದಲ್ಲಿ ರಾಜೇಂದ್ರ ಏನು ಬೇಕಾದರು ಮಾತನಾಡಲಿ, ಕಳೆದ 20-30 ವರ್ಷದಿಂದ ವೈ.ಕೆ ರಾಮಯ್ಯ ಕಾಲದಿಂದ ಎಲ್ಲಾ ನಡೆಯುತ್ತಿದೆ. ಕುಮಾರಸ್ವಾಮಿ (HD Kumaraswamy) ಸರ್ಕಾರದಲ್ಲೇ ಪಾಸ್ ಮಾಡಿದ್ದೆವು. ರೈತರಿಗೆ ನೀರು ಸಿಗಬೇಕಾದ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ ಎಂದಿದ್ದಾರೆ.ಇದನ್ನೂ ಓದಿ: ‘ನಿನ್ನ ಪ್ರತಿಯೊಂದು ಹೆಜ್ಜೆಯಲ್ಲೂ ನನ್ನ ಪಾಲಿರಲಿ’ ಎನ್ನುತ್ತಿದ್ದಾರೆ ಸಪ್ತಮಿ ಗೌಡ