ವಾಹನ ಸಿಗದೇ ತಾಯಿಯ ಶವವನ್ನು 80ಕಿ.ಮೀ. ಬೈಕ್ ಮೇಲೆ ಹೊತ್ತೊಯ್ದ ಮಗ

ಭೋಪಾಲ್: ಒಂದೇ ಸಿರಿಂಜ್ ಬಳಸಿ 30 ವಿದ್ಯಾರ್ಥಿಗಳಿಗೆ ಲಸಿಕೆ ಹಾಕಿದ ಕೆಲವೇ ದಿನಗಳಲ್ಲಿ ಮಧ್ಯಪ್ರದೇಶದ ಸಾಗರ್‌ನಲ್ಲಿ ಮತ್ತೊಂದು ವೈದ್ಯಕೀಯ ನಿರ್ಲಕ್ಷ್ಯದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ

ಶಹ್ದೋಲ್ ಜಿಲ್ಲೆಯ ಜಿಲ್ಲಾಸ್ಪತ್ರೆಯಲ್ಲಿ ಅಂಬುಲೆನ್ಸ್ ಸಿಗದ ಹಿನ್ನೆಲೆ ವ್ಯಕ್ತಿಯೋರ್ವ ತನ್ನ ತಾಯಿಯ ಶವವನ್ನು ಬೈಕ್ ಮೇಲೆ ಇಟ್ಟುಕೊಂಡು ಸುಮಾರು 80 ಕಿ.ಮೀ. ಸಾಗಿದ್ದಾರೆ. ಖಾಸಗಿ ವಾಹನದಲ್ಲಿ ತನ್ನ ತಾಯಿಯ ಶವವನ್ನು ಸಾಗಿಸಲು 5,000 ರೂ. ಕೇಳಿದ್ದು, ಅಷ್ಟು ಹಣ ಒದಗಿಸಲು ಸಾಧ್ಯವಾಗದೇ ವ್ಯಕ್ತಿ ತನ್ನ ಬೈಕ್‍ನಲ್ಲಿಯೇ ಸಾಗಿಸಿದ್ದಾರೆ ಎನ್ನಲಾಗಿದೆ.  ಇದನ್ನೂ ಓದಿ: ಹವಾಮಾನ ಇಲಾಖೆ ನೀಡುವ ಮಳೆಯ ಲೆಕ್ಕವಾದರೂ ತಪ್ಪಬಹುದು ಜೆಡಿಎಸ್ ನಾಯಕರ ಕಣ್ಣೀರಿನ ಮಳೆ ತಪ್ಪದು: ಬಿಜೆಪಿ

ತೀವ್ರ ಎದೆನೋವಿನಿಂದಾಗಿ ಅನುಪ್ಪುರ್ ಜಿಲ್ಲೆಯ ಶಾಹದೋಲ್ ವೈದ್ಯಕೀಯ ಕಾಲೇಜಿಗೆ ತಮ್ಮ ತಾಯಿಯನ್ನು ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಸಾವನ್ನಪ್ಪಿದ್ದಾರೆ. ನಂತರ ಅವರ ಶವವನ್ನು ಸಾಗಿಸಲು ಆಸ್ಪತ್ರೆಯವರು ಅಂಬುಲೆನ್ಸ್ ವ್ಯವಸ್ಥೆಯನ್ನು ಕೂಡ ಮಾಡಲಿಲ್ಲ ಎಂದು ಮಗ ಜೈಮಾಂತ್ರಿ ಯಾದವ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಫಾಝಿಲ್ ಹತ್ಯೆ ಪ್ರಕರಣ- ಪರಾರಿಯಾಗುವ ರಸ್ತೆ ಮಾರ್ಗ ಬದಲಿಸಲು ಹೇಳಿರುವ ರೌಡಿ ಸುಹಾಸ್

100 ರೂಪಾಯಿಗೆ ಮರದ ಚಪ್ಪಡಿ ಖರೀದಿಸಿದ ಇಬ್ಬರು ಪುತ್ರರು ತಮ್ಮ ತಾಯಿಯ ಶವವನ್ನು ಬೈಕ್‍ಗೆ ಕಟ್ಟಿಕೊಂಡು 80 ಕಿ.ಮೀ ಸವಾರಿ ಮಾಡುವ ಮೂಲಕ ಅನುಪ್ಪುರ್ ಜಿಲ್ಲೆಯ ಗುಡಾರು ಗ್ರಾಮಕ್ಕೆ ತೆರಳಿದರು. ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *