ಪಾಕಿಸ್ತಾನದ ಮರ‍್ರೆಯಲ್ಲಿ ಭಾರೀ ಹಿಮಪಾತ – 10 ಮಕ್ಕಳು ಸೇರಿ 22 ಮಂದಿ ಬಲಿ

ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಸಿದ್ಧ ಪ್ರವಾಸಿ ತಾಣ ಮರ‍್ರೆಯಲ್ಲಿ ಭಾರೀ ಹಿಮಪಾತದಿಂದಾಗಿ, ಪ್ರವಾಸಿಗರು ಹಿಮಾವೃತವಾದ ತಮ್ಮ ವಾಹನಗಳಲ್ಲೇ ಸಿಲುಕಿದ್ದಾರೆ. ನಿನ್ನೆಯಿಂದ ಒಟ್ಟು 22 ಮಂದಿ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಾವಿರಾರು ಪ್ರವಾಸಿಗರು ರಾವಲ್ಪಿಂಡಿ ಜಿಲ್ಲೆಯ ಮರ‍್ರೆಗೆ ತೆರಳಿದ್ದು, ತಮ್ಮ ವಾಹನಗಳನ್ನು ಹಿಮದ ರಾಶಿಯಿಂದ ತೆಗೆಯಲಾಗದೇ ಸಿಲುಕಿಕೊಂಡಿದ್ದಾರೆ. ಸದ್ಯ ಪಾಕಿಸ್ತಾನ ಸರ್ಕಾರ ಮರ‍್ರೆ ಪ್ರವಾಸವನ್ನು ನಿರ್ಬಂಧಿಸಿದೆ. ಇದನ್ನೂ ಓದಿ: ಹಿಮಪಾತದಿಂದ 8 ಪ್ರವಾಸಿಗರ ದುರ್ಮರಣ – ತುರ್ತು ಪರಿಸ್ಥಿತಿ ಘೋಷಿಸಿದ ಪಾಕಿಸ್ತಾನ

ಮರ‍್ರೆಯಲ್ಲಿ ಸಿಲುಕಿಕೊಂಡಿರುವ ಸಾವಿರಾರು ಪ್ರವಾಸಿಗರನ್ನು ರಕ್ಷಿಸಲು ಪಂಜಾಬ್ ಮುಖ್ಯಮಂತ್ರಿ ಉಸ್ಮಾನ್ ಬುಜ್ಜರ್, ರಕ್ಷಣಾ ಪಡೆಗಳಿಗೆ ಸೂಚನೆ ನೀಡಿದ್ದಾರೆ. ಇದರೊಂದಿಗೆ ಪೊಲೀಸ್ ಠಾಣೆ ಹಾಗೂ ಆಡಳಿತ ಕಚೇರಿಗಳಲ್ಲಿ ತುರ್ತು ಪರಿಸ್ಥಿತಿ ಹೇರಿದೆ. ಇದನ್ನೂ ಓದಿ: ಅಂಡರ್‌ಗ್ರೌಂಡ್‌ನಲ್ಲಿ ಕಂತೆ ಕಂತೆ ನೋಟು ಬಚ್ಚಿಟ್ಟಿದ್ದ ಉದ್ಯಮಿ – ಇವನ ಆಸ್ತಿ ಬಗ್ಗೆ ಮಾಹಿತಿ ನೀಡಿದ್ರೆ 10,000 ಬಹುಮಾನ

ಇದೀಗ ಮರ‍್ರೆಯಲ್ಲಿ ಸಿಲುಕಿದ್ದ 1,122 ಜನರನ್ನು ರಕ್ಷಿಸಲಾಗಿದೆ. 22 ಮಂದಿ ಮೃತರಲ್ಲಿ 10 ಮಕ್ಕಳೂ ಸೇರಿದ್ದಾರೆ ಎಂದು ಮಾಹಿತಿ ದೊರಕಿದೆ. ರಸ್ತೆಗಳನ್ನು ತೆರವುಗೊಳಿಸಲು ಮತ್ತು ಸಿಲುಕಿರುವ ಜನರನ್ನು ರಕ್ಷಿಸಲು ಮಿಲಿಟರಿಯನ್ನು ಸಜ್ಜುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *