ಮಳೆಯ ಅಬ್ಬರಕ್ಕೆ ಜನ ತತ್ತರ – ಬೆಂಗಳೂರಲ್ಲಿ 77 ವರ್ಷದಲ್ಲೇ ಕನಿಷ್ಠ ತಾಪಮಾನ

RAIN

ಬೆಂಗಳೂರು: ರಾಜ್ಯಾದ್ಯಂತ ಬಿಟ್ಟುಬಿಡದೇ ಮಳೆ ಸುರಿಯುತ್ತಿದೆ. ಮೇ 19ರ ಬೆಳಗ್ಗೆ 8.30 ರಿಂದ ಮೇ 20ರ ಬೆಳಗ್ಗೆ 8.30ರ ವರೆಗೆ 215 ಮಿಲಿ ಮೀಟರ್‌ನಷ್ಟು ಮಳೆ ಸುರಿದಿದೆ.

ರಾಜ್ಯದಲ್ಲೇ ಶಿವಮೊಗ್ಗದ ಜಿಲ್ಲೆ ಪುರದಾಳು ಗ್ರಾಮದಲ್ಲಿ ಅತ್ಯಧಿಕ ಮಳೆಯಾಗಿದೆ. ಬೆಂಗಳೂರಿನಲ್ಲಿ ಶುಕ್ರವಾರ 17.9 ರಷ್ಟು ಕನಿಷ್ಠ ತಾಪಮಾನ ದಾಖಲಾಗಿದೆ. ಇದು ಕಳೆದ 77 ವರ್ಷಗಳಲ್ಲೇ ಮೇ ತಿಂಗಳ ಕನಿಷ್ಠ ತಾಪಮಾನ. 1945ರ ಮೇ 6 ರಂದು ನಗರದಲ್ಲಿ 16.7 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು ಎಂದು ಹವಾಮಾನ ಇಲಾಖೆ ವರದಿ ನೀಡಿದೆ. ಇದನ್ನೂ ಓದಿ: ಮೂರು ಬೈಕ್‌ಗಳು ಡಿಕ್ಕಿ – ನಾಲ್ವರು ಸಾವು

RAIN IN BENGALURU

ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಚಿನ್ನಕಾಮನಹಳ್ಳಿ ಗ್ರಾಮದಲ್ಲಿ ವಿದ್ಯುತ್ ಕಂಬಗಳು ಧರೆಗುರುಳಿದ್ದು ಜನರು ವಿದ್ಯುತ್ ಇಲ್ಲದೇ ಕಾಲ ಕಳೆಯುವಂತಾಗಿದೆ. ಜಮೀನು, ರಸ್ತೆಗಳಲ್ಲಿ ಬಿದ್ದಿರುವ ವಿದ್ಯುತ್ ಕಂಬದಿಂದ ಜೀವ ಭಯದಲ್ಲೇ ಜನರು ಓಡಾಡುವಂತಾಗಿದೆ. ಇದನ್ನೂ ಓದಿ: ಶ್ರೀಲಂಕಾದಲ್ಲಿ ಸರ್ಕಾರಿ ಕಚೇರಿ, ಶಾಲೆ – ಕಾಲೇಜುಗಳು ಬಂದ್‌

ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಯಲವಗಿ ಗ್ರಾಮದ ರೈಲ್ವೆ ಅಂಡರ್ ಬ್ರಿಡ್ಜ್‌ನಲ್ಲಿ ಸಾರಿಗೆ ಬಸ್ ಸಿಲುಕಿತ್ತು. ಬಸ್‌ನಿಂದ ಪ್ರಯಾಣಿಕರನ್ನು ಸುರಕ್ಷಿತ ಸ್ಥಳಕ್ಕೆ ಕಳಿಸಲಾಗಿದೆ. ಬಳಿಕ ಟ್ರಾಕ್ಟರ್‌ಗೆ ಹಗ್ಗ ಕಟ್ಟಿ ಬಸ್ ಅನ್ನು ಮೇಲಕ್ಕೆ ಎತ್ತಲಾಗಿದೆ.

Rain in mysore bogadi

ದಾವಣಗೆರೆ ತಾಲ್ಲೂಕಿನ ಐಗೂರು ಬಳಿಯ ವಡ್ಡಿನಹಳ್ಳಿ ಗ್ರಾಮದಲ್ಲಿ ಮಳೆ ನೀರಿನಿಂದ ತುಂಬಿಕೊಂಡಿದ್ದ ಹಳ್ಳ ದಾಟಲೋಗಿ ಟ್ರ್ಯಾಕ್ಟರ್‌ ಸಿಲುಕಿಕೊಂಡಿತ್ತು. ಜೆಸಿಬಿ ಸಹಾಯದಿಂದ ಟ್ರ್ಯಾಕ್ಟರ್‌ ಅನ್ನು ಹೊರತೆಗೆಯಲಾಯ್ತು. ಇದನ್ನೂ ಓದಿ: ಧಾರವಾಡದಲ್ಲಿ ಮರಕ್ಕೆ ಕ್ರೂಸರ್ ಡಿಕ್ಕಿ – 7 ಮಂದಿ ಸಾವು

ಕೊಪ್ಪಳದಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್ ಗೇಟ್ ತೆರೆಯದ ಹಿನ್ನೆಲೆ ಜಮೀನುಗಳಿಗೆ ನೀರು ನುಗ್ಗಿದೆ. ಆದರೆ ಇಲ್ಲಿನ ಚಿಕ್ಕಸಿಂಧೋಗಿ ಗ್ರಾಮದ ಜಮೀನುಗಳಲ್ಲಿ ನೀರು ಹೆಚ್ಚಾಗಿ ನಿಂತಿದ್ದರಿಂದ ಮೀನು ಶಿಕಾರಿ ಮಾಡಿ ಜನರು ಖುಷಿ ಪಟ್ಟಿದ್ದಾರೆ. ಹುಬ್ಬಳ್ಳಿ ಧಾರವಾಡ, ಹಾವೇರಿ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗುತ್ತಿರುವುದರಿಂದ ಇಂದೂ ಸಹ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

Comments

Leave a Reply

Your email address will not be published. Required fields are marked *