ಬೆಂಗಳೂರಿನಲ್ಲಿ ಶನಿವಾರ ಎಲ್ಲೆಲ್ಲಿ ಎಷ್ಟು ಪ್ರಮಾಣದಲ್ಲಿ ಮಳೆಯಾಗಿದೆ?

ಬೆಂಗಳೂರು: ಆಗಸ್ಟ್ ತಿಂಗಳಲ್ಲಿ ದಾಖಲೆಯ ಮಳೆಗೆ ಸಾಕ್ಷಿಯಾಗಿದ್ದ ಸಿಲಿಕಾನ್ ಸಿಟಿ ಬೆಂಗಳೂರು ಇದೀಗ ಮತ್ತೆ ಮುಳುಗಿದೆ. ಮಧ್ಯರಾತ್ರಿಯಿಂದ ಬಿಟ್ಟು ಬಿಡದೇ ಸುರಿಯುತ್ತಿರುವ ಮಹಾ ಮಳೆಗೆ ಮಹಾನಗರಿ ತತ್ತರಿಸಿಹೋಗಿದೆ. ಜನಜೀವನ ಅಸ್ತವ್ಯಸ್ತಗೊಂಡಿದೆ. ಕೆರೆ ಯಾವುದು? ರಾಜಕಾಲುವೆ ಯಾವುದು ರಸ್ತೆ ಯಾವುದು ತಿಳಿಯದಾಗಿದೆ.

ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತವಾಗಿದ್ದು, ಮನೆಗಳಲ್ಲಿ ನೀರು ಬಿಟ್ಟರೆ ಏನೂ ಕಾಣಲಿಲ್ಲ. ಮನೆಯಿಂದ ನೀರು ಹೊರ ಹಾಕೋವಷ್ಟೊತ್ತಿಗೆ ನಿವಾಸಿಗಳು ಸುಸ್ತಾಗಿ ಹೋಗಿದ್ದರು.

ಕೋರಮಂಗಲ, ಎಸ್‍ಟಿ ಬೆಡ್ ಲೇಔಟ್, ರಾಮಮೂರ್ತಿನಗರ, ಹೊರಮಾವು, ಹೆಚ್‍ಎಸ್‍ಆರ್ ಲೇಔಟ್, ಸಿಲ್ಕ್‍ಬೋರ್ಡ್, ವಿಜಯನಗರ ಸೇರಿದಂತೆ ಹಲವೆಡೆ ನೀರೋ ನೀರು. ಜನರ ಪರದಾಟ ನೋಡೋಕೆ ಆಗ್ತಿರಲಿಲ್ಲ.

ಬೆಳ್ಳಂದೂರು ಕೆರೆ ಕಟ್ಟೆ ಮೇಲಿರುವ ದುಗ್ಗಲಮ್ಮ ದೇವಾಲಯದಲ್ಲಿ ನಿನ್ನೆಗಿಂತ ಹೆಚ್ಚಿನ ಪ್ರಮಾಣದಲ್ಲಿ ನೀರು ತುಂಬಿದೆ. ದುಗ್ಗಲಮ್ಮನಿಗೆ ಕೊಳಚೆ ನೀರಿನ ಅಭಿಷೇಕ ಆಗ್ತಿದೆ. ರಸ್ತೆಯಲ್ಲಿ ಮೊಣಕಾಲುವರೆಗೂ ನೀರು ಹರಿಯುತ್ತಿದೆ. ವಾಹನ ಸವಾರರ ಕಷ್ಟಕ್ಕೆ ಎಣೆ ಇರ್ಲಿಲ್ಲ. ಅತ್ತ ಬೇಗೂರು ಕೆರೆ ಏರಿ ಒಡೆದು ವಿಶ್ವಪ್ರಿಯ ಲೇಔಟ್ ಸಂಪೂರ್ಣ ಜಲಾವೃತವಾಗಿದ್ದು ಅಪಾರ್ಟ್‍ಮೆಂಟ್‍ನ ಪಾರ್ಕಿಂಗ್ ಲಾಟ್‍ಗಳಲ್ಲಿ ನೀರು ತುಂಬಿದೆ. ಕೆಲ ಹುಡುಗ್ರು ವಿಶ್ವಪ್ರಿಯ ಲೇಔಟ್‍ಅನ್ನೇ ಸ್ವಿಮ್ಮಿಂಗ್ ಫೂಲ್ ಮಾಡ್ಕೊಂಡಿದ್ರು.

ಬಕ್ರೀದ್ ಜೊತೆಗೆ ಇವತ್ತು ವೀಕೆಂಡ್ ಆಗಿದ್ದ ಕಾರಣ ಜನ ಹೆಚ್ಚಾಗಿ ಮನೆಯಿಂದ ಹೊರಗೆ ಬರ್ಲಿಲ್ಲ. ಅಂದ ಹಾಗೇ, ಇನ್ನೂ ಐದು ದಿನ ಬೆಂಗಳೂರಿನಲ್ಲಿ ಮಳೆ ಸುರಿಯುತ್ತಂತೆ.

ಎಲ್ಲಿ ಎಷ್ಟು ಮಳೆ?

ಹಸಿರುಬಣ್ಣದಿಂದ ತುಂಬಿರುವ ಈ ಪ್ರದೇಶಗಳಲ್ಲಿ ಸಾಧಾರಣ ಮಳೆ ಆಗಿದೆ. 7.5 ರಿಂದ 35.5 ಮಿಲಿ ಮೀಟರ್ ಮಳೆ ಆದ್ರೆ ಅದನ್ನು ಸಾಧಾರಣ ಮಳೆ ಎಂದು ಪರಿಗಣಿಸುತ್ತಾರೆ. ಆಕಾಶ ನೀಲಿ ಬಣ್ಣದಲ್ಲಿ ಕಾಣುತ್ತಿರುವ ಪ್ರದೇಶದಲ್ಲಿ ಭಾರೀ ಮಳೆ ಆಗಿದೆ. 35.5 ರಿಂದ 64.5 ಮಿಲಿ ಮೀಟರ್ ಮಳೆ ದಾಖಲಾದರೇ ಅದನ್ನು ಭಾರೀ ಮಳೆ ಎಂದು ಪರಿಗಣಿಸಲಾಗುತ್ತದೆ.

https://youtu.be/DLUqexMbDvA

https://youtu.be/iMerarHyDDY

https://youtu.be/3m0KvN-RWzE

Comments

Leave a Reply

Your email address will not be published. Required fields are marked *