ರಾಜ್ಯದ ಹಲವೆಡೆ ಇಂದು ಕೂಡ ಮುಂದುವರಿದ ಮಳೆ

ಬೆಂಗಳೂರು: ರಾಜ್ಯದ ಹಲವೆಡೆ ಇಂದು ಕೂಡಾ ಮಳೆ ಮುಂದುವರಿದಿದ್ದು, ಶುಕ್ರವಾರ ಸಂಜೆ ಬೆಂಗಳೂರಿನ ಕೆಆರ್ ಸರ್ಕಲ್, ಶಾಂತಿನಗರ, ಮೆಜೆಸ್ಟಿಕ್ ಸೇರಿದಂತೆ ಹಲವೆಡೆ ಮಳೆಯಾಗಿದೆ. ಮಳೆಯಿಂದಾಗಿ ಅಂಡರ್ ಪಾಸ್‌ನಲ್ಲಿ ನೂರಾರು ವಾಹನಗಳನ್ನು ಪಾರ್ಕಿಂಗ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿ, ವಾಹನ ಸವಾರರು ಹೈರಾಣಾಗಿದ್ದಾರೆ.

RAIN

ರಾಜ್ಯದ ಇತರ ಭಾಗಗಳಲ್ಲೂ ಉತ್ತಮ ಮಳೆ ಸುರಿದಿದೆ. ಬಾಗೇಪಲ್ಲಿ ತಾಲೂಕಿನ ಪಾಪಾಗ್ನಿ ನದಿ ಮೈದುಂಬಿ ಹರಿಯುತ್ತಿದೆ. ಚಿತ್ರಾವತಿ ಡ್ಯಾಂ ಕೋಡಿ ಹರಿದಿದೆ. ಗುಡಿಬಂಡೆಯ ರಾಮಪಟ್ಟಣ ಹಾಗೂ ನವಿಲುಗುರ್ಕಿ ನಡುವಿನ ಸೇತುವೆ ಮೇಲೆ ನೀರು ಹರಿಯುತ್ತಿದೆ. ಅಪಾರ ಬೆಳೆ ಹಾನಿಯೂ ಸಂಭವಿಸಿದೆ. ಇದನ್ನೂ ಓದಿ: ಒಟ್ಟು 634 ಕೇಸ್, 2 ಸಾವು – ಸಕ್ರಿಯ ಪ್ರಕರಣಗಳ ಸಂಖ್ಯೆ 4,500ಕ್ಕೆ ಏರಿಕೆ

ತಮಿಳುನಾಡಿನಲ್ಲಿ ಭಾರೀ ಮಳೆಯಾದ ಕಾರಣ ಚಾಮರಾಜನಗರದ ಚಿಕ್ಕಹೊಳೆ, ಸುವರ್ಣಾವತಿ ಡ್ಯಾಂಗಳು ಭರ್ತಿಯಾಗಿವೆ. ಚಿಕ್ಕಹೊಳೆ ಜಲಾಶಯದಿಂದ 2,000 ಕ್ಯೂಸೆಕ್ ಹಾಗೂ ಸುವರ್ಣಾವತಿ ಜಲಾಶಯದಿಂದ 300 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಇದನ್ನೂ ಓದಿ: ಕೋವಿಡ್‌ ನಂತ್ರ ಸೋನಿಯಾ ಗಾಂಧಿ ಶ್ವಾಸಕೋಶದಲ್ಲಿ ಫಂಗಲ್ ಇನ್ಫೆಕ್ಷನ್

ರಾಜ್ಯದೆಲ್ಲೆಡೆ ಮಳೆ ಸುರಿದರೂ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನಲ್ಲಿ ಮಾತ್ರ ಮಳೆ ಸುರಿಯುತ್ತಿಲ್ಲ. ಈ ಹಿನ್ನೆಲೆ ನಾಲತವಾಡದ ಹಟ್ಟಿ ಓಣಿಯಲ್ಲಿ ಇಬ್ಬರು ಹೆಣ್ಣು ಮಕ್ಕಳಿಗೆ ಗಂಡು-ಹೆಣ್ಣಿನ ವೇಷ ತೊಡಿಸಿ, ಮದುವೆ ಶಾಸ್ತ್ರ ಮಾಡಲಾಗಿದೆ. ಈ ರೀತಿ ಮಾಡಿದರೆ ಒಳ್ಳೆಯ ಮಳೆಯಾಗುತ್ತದೆ ಎಂಬುದು ಈ ಭಾಗದ ಜನರ ನಂಬಿಕೆ.

Live Tv

Comments

Leave a Reply

Your email address will not be published. Required fields are marked *