Bengaluru Rains | ಎಲೆಕ್ಟ್ರಾನಿಕ್ ಸಿಟಿ ಮತ್ತೆ ಜಲಾವೃತ – ಸಣ್ಣ ಮಳೆಗೆ ತತ್ತರಿಸಿದ ಐಟಿಬಿಟಿ ಮಂದಿ

ಬೆಂಗಳೂರು: ಕಳೆದ 2-3 ದಿನಗಳಿಂದ ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ (Bengaluru) ಮತ್ತೆ ಮಳೆಯ ಆರ್ಭಟ (Heavy Rain) ಮುಂದುವರಿದಿದೆ. ಮಾರ್ಕೆಟ್, ಮೆಜೆಸ್ಟಿಕ್, ಮಲ್ಲೇಶ್ವರ, ಯಶವಂತಪುರ, ಎಲೆಕ್ಟ್ರಾನಿಕ್‌ ಸಿಟಿ, ಮಹದೇವಪುರ ವಲಯಗಳಲ್ಲಿ ಭಾರೀ ಮಳೆಯಾಗ್ತಿದೆ.

ಶನಿವಾರವೂ ವಿವಿಧೆಡೆ ಸುರಿದ ಮಳೆಗೆ ಬೆಂಗಳೂರು ತತ್ತರಿಸಿಹೋಗಿದೆ. ಮಳೆಯ ಹೊಡೆತಕ್ಕೆ ರಸ್ತೆ ಮೇಲೆಲ್ಲಾ ನೀರು ನಿಂತಿತ್ತು. ಎಲೆಕ್ಟ್ರಾನಿಕ್‌ ಸಿಟಿ ಟೋಲ್ ಬಳಿ ರಸ್ತೆ ತುಂಬೆಲ್ಲಾ ನೀರು ನಿಂತಿತ್ತು. ವಾಹನ ಸವಾರರು ಗಂಟೆಗಟ್ಟಲೇ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ವೀಕೆಂಡ್ ಮೂಡ್‌ನಲ್ಲಿದ್ದ ಜನರಿಗೆ ಮಳೆ ಎಫೆಕ್ಟ್ ತಟ್ಟಿದೆ. ಹಲವಡೆ ಸಂಜೆ ಸುರಿದ ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ಥಗೊಂಡಿತ್ತು. ಹವಾಮಾನ ಇಲಾಖೆ ಅಕ್ಟೋಬರ್ ಮೊದಲ ವಾರದಲ್ಲೇ ಮಳೆ ಎಚ್ಚರಿಕೆ ನೀಡಿತ್ತು. ಹವಾಮಾನ ಇಲಾಖೆ ಮುನ್ಸೂಚನೆ ಬೆನ್ನಲ್ಲೇ ಬೆಂಗಳೂರು ನಗರದಲ್ಲಿ ಜೋರು ಮಳೆ ಆಗಿದೆ.

ಇತ್ತ ನೆಲಮಂಗಲದ ಅಮಾನೀ ಕೆರೆ ಕೋಡಿ ಬಿದ್ದಿದ್ದು ತ್ಯಾಜ್ಯದ ನೀರು ಸೇರಿ ನೊರೆ ಉಲ್ಬಣಿಸಿದೆ. ದಿಢೀರ್ ಅಂತ ಆಗೋ ಗುಂಡಿಗಳಿಗೆ,, ಬೀಳೋ ಮರಗಳಿಗೆ ಏನೂ ಮಾಡೋಕಾಗಲ್ಲ ಅಂತ ಬಿಬಿಎಂಪಿ ಆಯುಕ್ತರು ಹಾರಿಕೆ ಉತ್ತರ ಕೊಟ್ಟಿದ್ದಾರೆ. ಇದನ್ನೂ ಓದಿ: ಜಾತಿಗಣತಿ, ಒಳ ಮೀಸಲಾತಿಗೆ ನಮ್ಮ ವಿರೋಧವಿಲ್ಲ; ಪ್ರಾಮಾಣಿಕ, ಪಾರದರ್ಶಕವಾಗಿರಬೇಕು ಅಷ್ಟೇ – ಬಸವಜಯ ಮೃತ್ಯುಂಜಯ ಸ್ವಾಮಿಜಿ

ಎಲೆಕ್ಟ್ರಾನಿಕ್‌ ಸಿಟಿ ಮತ್ತೆ ಜಲಾವೃತ:
ಬೆಂಗಳೂರಿನಲ್ಲಿ ಸುರಿದ ಸಣ್ಣ ಮಳೆಗೆ ಎಲೆಕ್ಟ್ರಾನಿಕ್‌ ಸಿಟಿ ಅಕ್ಷರಶಃ ತತ್ತರಿಸಿದೆ, ಐಟಿ ಬಿಟಿ ಮಂದಿ ಪರದಾಡುವ ಪರಿಸ್ಥಿತಿಯೂ ನಿರ್ಮಾಣವಾಗಿತ್ತು. ಹೊಸೂರು ಬೆಂಗಳೂರು ಮುಖ್ಯರಸ್ತೆಯ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಸುಮಾರು ಅರ್ಧ ಕಿಮೀ ರಸ್ತೆ ವರೆಗೆ ಮಳೆ ನೀರು ತುಂಬಿಕೊಂಡಿತ್ತು. ಪುರಭವನ, ಬಿಬಿಎಂಪಿ ಸರ್ಕಲ್‌, ಕೆ.ಆರ್ ಮಾರ್ಕೇಟ್, ಮೆಜೆಸ್ಟಿಕ್ ಸುತ್ತಮುತ್ತ ಭಾರೀ ಮಳೆಯಾಗಿದ್ದು, ರಸ್ತೆಗಳು ಕೆರೆಯಂತಾಗಿರುವ ವಾತಾವರಣ ಕಂಡುಬಂದಿತು. ಇದನ್ನೂ ಓದಿ: ಉತ್ತರ ಲೆಬನಾನ್‌ ಮೇಲೆ ಇಸ್ರೇಲ್‌ ವಾಯುದಾಳಿ – ಹಮಾಸ್‌ ಟಾಪ್‌ ಕಮಾಂಡರ್‌ ಹತ್ಯೆ

ಸದ್ಯ ಅಕ್ಟೋಬರ್‌ 8ರವರೆಗೂ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್‌ ಘೋಷಣೆ ಮಾಡಿದೆ. ಇದನ್ನೂ ಓದಿ: ಮಾಡಿರುವ ತಪ್ಪುಗಳು, ಹಗರಣವನ್ನು ಹೊರ ತೆಗೆಯುತ್ತೇವೆಂದು ಬಿಜೆಪಿಯವರಿಗೆ ಭಯ – ಜಿ. ಪರಮೇಶ್ವರ್