ಪರ್ವತದ ನೀರು ಕುಡಿದು, ದೇವಾಲಯದ ಪ್ರಸಾದ ಸೇವಿಸಿ ಬದುಕುಳಿದೆವು: ಉತ್ತರಾಖಂಡ್ ಪ್ರವಾಹ ಭೀಕರತೆ ಬಿಚ್ಚಿಟ್ಟ ಕನ್ನಡಿಗರು

ಬೆಂಗಳೂರು: ಉತ್ತರಾಖಂಡ್‍ನಲ್ಲಿ ಸಂಭವಿಸಿದ ಮೇಘ ಸ್ಫೋಟಕ್ಕೆ ನೂರಾರು ಮಂದಿ ಸಾವನ್ನಪ್ಪಿದ್ದಾರೆ. ಈ ನಡುವೆ ಅಲ್ಲಿ ಕರ್ನಾಟಕದವರು ಕೂಡ ಅಪಾಯದಲ್ಲಿದ್ದರು. ಅಲ್ಲಿಂದ ಇದೀಗ ಸುರಕ್ಷಿತವಾಗಿ ಬೆಂಗಳೂರಿಗೆ ಬಂದಿಳಿದ ಕನ್ನಡಿಗರು, ನಾವು ಪರ್ವತದ ನೀರು ಕುಡಿದು ದೇವಾಲಯದಲ್ಲಿ ಕೊಟ್ಟ ಪ್ರಸಾದವನ್ನು ಸೇವಿಸಿ ಬದುಕುಳಿದೆವು ಎಂದು ಉತ್ತರಾಖಂಡ್‍ನ ಪ್ರವಾಹ ಭೀಕರತೆಯನ್ನು ಬಿಚ್ಚಿಟ್ಟಿದ್ದಾರೆ.

Uttarakhand Flood bengaluru kandigaru

ಉತ್ತರಾಖಂಡ್‍ನ ಪ್ರವಾಹ ಪರಿಸ್ಥಿತಿಯಿಂದ ಪಾರಾಗಿ ಇದೀಗ ಬೆಂಗಳೂರಿಗೆ ಬಂದ 5 ಜನ ಕನ್ನಡಿಗರಿದ್ದ ಟೆಕ್ಕಿಗಳ ತಂಡ ಪಬ್ಲಿಕ್ ಟಿವಿ ಜೊತೆ ಅಲ್ಲಿನ ಪ್ರವಾಹ ಭೀಕರತೆಯ ಅನುಭವಗಳನ್ನು ಹಂಚಿಕೊಂಡಿದ್ದು, ನಮಗೆ ಅಲ್ಲಿನ ಒಂದೊಂದು ಅನುಭವವೂ ಮೈ ಜುಮ್ಮೆನ್ನಿಸುತ್ತದೆ. ಬದುಕಿ ಬಂದದ್ದೆ ಸಾಹಸ. ಎರಡು ದಿನ ಊಟವಿಲ್ಲ, ನೀರಿಲ್ಲ ಕಾರಿನಲ್ಲೇ ಐದು ಜನ ನಿದ್ದೆ ಮಾಡಿದ್ದೇವು. ಪರ್ವತದಿಂದ ಹರಿಯುತ್ತಿರುವ ನೀರು ಕುಡಿದು, ದೇವಾಲಯದಲ್ಲಿ ಕೊಟ್ಟ ಪ್ರಸಾದವನ್ನು ಸೇವಿಸಿ ಎರಡು ದಿನ ಹಗಲು, ರಾತ್ರಿ ಕಳೆದಿದ್ದೇವು. ಇದನ್ನೂ ಓದಿ: ಉತ್ತರಾಖಂಡ್ ಮೇಘ ಸ್ಫೋಟ – ಸಾವಿನ ಸಂಖ್ಯೆ 52ಕ್ಕೆ ಏರಿಕೆ 5 ಮಂದಿ ನಾಪತ್ತೆ

60 ಕೀ.ಮೀ ಎತ್ತರದ ಗುಡ್ಡದಲ್ಲಿ ನಾವು ಸಿಲುಕಿಕೊಂಡಿದ್ದೇವು. ಕುಸಿದ ಗುಡ್ಡಗಳು, ಹಾಗೂ ರಸ್ತೆಗಳನ್ನು ದುರಸ್ತಿ ಮಾಡುತ್ತಲೇ ಜೆಸಿಬಿಗಳ ಮೂಲಕ ನಮ್ಮನ್ನು ರಕ್ಷಣೆ ಮಾಡಲಾಗಿದೆ. ನಾಮ್ಮ ತಂಡ ಅಕ್ಟೋಬರ್ 18 ರಂದು ಪಾತಾಳ ಭುವನೇಶ್ವರಿ ದೇವಾಲಯದ ದರ್ಶನಕ್ಕೆ ಹೋಗಿದ್ದೇವು. ನಂತರ ಬರುವಾಗ ಮಳೆ ಶುರುವಾಗಿತ್ತು. ರಸ್ತೆಯಲ್ಲಿ ಮೊದಲು ಕಲ್ಲುಗಳು ಬಿದ್ದಿತ್ತು. ಅದನ್ನು ಸರಿಸಿ ಬರುತ್ತಿದ್ದಂತೆ ಮುಂದೆ ನೂರಾರು ಕಡೆ ಗುಡ್ಡಕುಸಿತವಾಗಿತ್ತು. ನಾವು ಎರಡು ದಿನ ಗುಡ್ಡ ಕುಸಿತಗೊಂಡ ರಸ್ತೆ ಮಧ್ಯೆ ಸಿಲುಕಿದ್ದೇವು. ಬಳಿಕ ಕರ್ನಾಟಕ ರಾಜ್ಯ ಸರ್ಕಾರದ ಸಹಕಾರ ಮತ್ತು ದೇವರ ದಯೆಯಿಂದ ಸೇಫಾಗಿ ಬಂದಿದ್ದೇವೆ ಎಂದು ಸಾವಿನಂಚಿನಿಂದ ಪಾರಾಗಿ ಬಂದ ಕನ್ನಡಿಗರು ನೆನಪಿನ ಬುತ್ತಿ ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ: ಉತ್ತರಾಖಂಡ್ ಮಳೆ- ಮೃತರ ಕುಟುಂಬಕ್ಕೆ 4 ಲಕ್ಷ ರೂ. ಪರಿಹಾರ ಘೋಷಿಸಿದ CM

Comments

Leave a Reply

Your email address will not be published. Required fields are marked *