ಭಾರಿ ಮಳೆಗೆ ಬೆಂಗ್ಳೂರು ತತ್ತರ- ಮನೆಗಳಿಗೆ ನುಗ್ಗಿದ ನೀರು, ಸಚಿವ ಜಾರ್ಜ್ ಕ್ಷೇತ್ರದಲ್ಲೇ ಜನರ ಪರದಾಟ

ಬೆಂಗಳೂರು: ಭಾನುವಾರ ಸುರಿದ ಭಾರಿ ಮಳೆಗೆ ಬೆಂಗಳೂರು ತತ್ತರಿಸಿದೆ. ಥಣಿಸಂದ್ರ ತೂಬಾ ಲೇಔಟ್‍ನಲ್ಲಿ ಮನೆಗಳಿಗೆ ನೀರು ನುಗ್ಗಿ ಜನರು ಪರದಾಡುತ್ತಿದ್ದಾರೆ. ಒಂದು ತಿಂಗಳ ಮಗು ಹಾಗೂ ತಾಯಿ ನೀರಿನಲ್ಲಿ ಸುಲುಕಿ ಪರದಾಡುತ್ತಿದ್ದಾರೆ. ರಾತ್ರಿಯಿಂದ ಮನೆಯಲ್ಲಿ ನೀರು ತುಂಬಿದ್ದು ಮಗುವಿನ ಅರೋಗ್ಯದಲ್ಲಿ ಏರುಪೇರಾಗಿದೆ.

ತಗ್ಗು ಪ್ರದೇಶದ ಸಾಲು ಸಾಲು ಮನೆಗಳಿಗೆ ನೀರು ನುಗ್ಗಿದು ಸಂಪೂರ್ಣ ಏರಿಯಾ ಜಲಾವೃತವಾಗಿದೆ. ಮನೆಯಿಂದ ನೀರು ಹೊರಹಾಕಲು ಜನರು ಹರಸಾಹಸ ಪಡುತ್ತಿದ್ದಾರೆ. ಭಾನುವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಕಾಕ್ಸ್ ಟೌನ್ ಕೂಡ ಸಂಪೂರ್ಣ ಜಲಾವೃತವಾಗಿದ್ದು ಮನೆಗಳಿಗೆಲ್ಲ ನೀರು ನುಗ್ಗಿದೆ. ಭಾರೀ ಮಳೆಗೆ ಮನೆಯ ಸೀಲಿಂಗ್ ಕುಸಿದಿದೆ. ಆ ದೃಶ್ಯಗಳನ್ನ ನೊಡಿದ್ರೆ ನಿಜಕ್ಕೂ ಎದೆ ಝಲ್ ಎನ್ನುತ್ತೆ. ಮಳೆಯಿಂದ ಮನೆ ಬಿದ್ ಮೇಲೆ ಬರ್ತೀರಾ ಅಂತಾ ಜನರು ಜಲಮಂಡಳಿ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.

ನಗರಾಭಿವೃದ್ಧಿ ಸಚಿವ ಕೆಜೆ ಜಾರ್ಜ್ ಕ್ಷೇತ್ರವೇ ಸಂಪೂರ್ಣ ಜಲಾವೃತವಾಗಿದೆ. ಸರ್ವಜ್ಞನಗರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟ ನಂದಗೋಕುಲ ಲೇಔಟ್ ಸಂಪೂರ್ಣ ಜಲಾವೃತವಾಗಿದೆ. ಇಲ್ಲಿನ ಎಸ್‍ವಿಎಸ್ ಹೈಸ್ಕೂಲ್‍ಗೆ ನೀರು ನುಗ್ಗಿದ ಕಾರಣ ಶಾಲಾ ಆಡ ಮಂಡಳಿ ಮಕ್ಕಳಿಗೆ ರಜೆ ನೀಡಿದೆ.

ಕೋರಮಂಗಲದಲ್ಲಿ ಪೆಟ್ರೋಲ್ ಬಂಕ್‍ಗಳಿಗೆ ಮಳೆ ನೀರು ನುಗ್ಗಿದ್ದು, ಬಂಕ್ ಗಳು ಕ್ಲೋಸ್ ಆಗಿವೆ. ನೀರು ಹೊರಹಾಕಲು ಪೆಟ್ರೋಲ್ ಬಂಕ್ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

Comments

Leave a Reply

Your email address will not be published. Required fields are marked *