ಬೆಂಗಳೂರು: ರಾಜ್ಯದಲ್ಲಿ ಅಕಾಲಿಕ ಮಳೆ ಅವಾಂತರ ಮುಂದುವರೆದಿದೆ. ರಾಯಚೂರಿನ ಲಿಂಗಸಗೂರಿನ ಬನ್ನಿಗೋಳದಲ್ಲಿ ಸಿಡಿಲು ಹೊಡೆದು ಗುರಿಗಾಯಿ ರಾಮಣ್ಣ ಪೂಜಾರಿ ಸಾವನ್ನಪ್ಪಿದ್ದಾರೆ. ಹಲವು ಕುರಿ ಮೇಕೆಗಳು ಸಾವನ್ನಪ್ಪಿವೆ.
ಲಿಂಗಸಗೂರು, ಹಟ್ಟಿ, ಮುದಗಲ್ ಸೇರಿ ರಾಯಚೂರು ಜಿಲ್ಲೆಯ ವಿವಿಧಡೆ ಆಲಿಕಲ್ಲು ಸಹಿತ ಭಾರೀ ಮಳೆ ಆಗಿದೆ. ಬೃಹತ್ ಮರವೊಂದು ಹೆದ್ದಾರಿಗೆ ಉರುಳಿ, ಸಂಚಾರ ಅಸ್ತವ್ಯಸ್ತವಾಗಿದೆ. ಭತ್ತ ಕಟಾವು ಮಾಡಿದ್ದ ರೈತರು ಕಂಗಾಲಾಗಿದ್ದಾರೆ.

ದಾವಣಗೆರೆಯ ಚನ್ನಗಿರಿ ತಾಲೂಕಿನ ಟಿ ಗೊಲ್ಲರಹಳ್ಳಿ ಗ್ರಾಮದಲ್ಲಿ ಸಿಡಿಲಿನ ಹೊಡೆತಕ್ಕೆ 35 ಕುರಿಗಳು ಸಾವನ್ನಪ್ಪಿವೆ. ಚಿತ್ತಪ್ಪ, ವೀರೇಶ್, ಕಾಟಪ್ಪ ಎನ್ನುವರಿಗೆ ಸೇರಿದ ಕುರಿಗಳಾಗಿದ್ದು, ಕುರಿಗಾಯಿಗೂ ಕೂಡ ಸಿಡಿಲು ಬಡಿದಿದ್ದು, ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಭೇಟಿ ನೀಡಿದ್ದಾರೆ. ಕುರಿ ಮಾಲೀಕರಿಗೆ ಸೂಕ್ತ ಪರಿಹಾರ ಕೊಡಿಸುವುದಾಗಿ ವಿರೂಪಾಕ್ಷಪ್ಪ ಭರವಸೆ ನೀಡಿದರು. ಇದನ್ನೂ ಓದಿ: ಪಶು ವಿವಿ ಘಟಿಕೋತ್ಸವ – ಸೈನಿಕನ ಮಗಳಿಗೆ 13, ರೈತನ ಮಗನಿಗೆ 9 ಚಿನ್ನದ ಪದಕ
ಅವಿಭಜಿತ ಬಳ್ಳಾರಿಯ ಸಂಡೂರು, ಹಗರಿಬೊಮ್ಮನಹಳ್ಳಿ, ಹೂವಿನ ಹಡಗಲಿ ತಾಲೂಕುಗಳಲ್ಲಿ ಆಲಿಕಲ್ಲು ಮಳೆಯಾಗಿದೆ. ಬೆಳಗಾವಿಯ ಸದಲಗಾ ಮತ್ತು ಕೊಪ್ಪಳದ ಕುಷ್ಟಗಿಯಲ್ಲಿ ಸಿಡಿಲು ಹೊಡೆದು ತೆಂಗಿನಮರ ಧಗಧಗಿಸಿದೆ. ಹಾವೇರಿಯಲ್ಲಿ ಗುಡುಗು ಸಿಡಿಲು ಸಹಿ ಭಾರೀ ಮಳೆ ಆಗಿದೆ. ಕೊಡಗು, ಶಿವಮೊಗ್ಗ ಸೇರಿ ಹಲವೆಡೆ ಉತ್ತಮ ಮಳೆ ಆಗಿದೆ.

Leave a Reply