ಮಡಿಕೇರಿಯಲ್ಲಿ ಮಳೆ – ಬೇಸಿಗೆಯ ಕಾವಿನಿಂದ ಬಳಲಿದ್ದ ಜನತೆಗೆ ಸಂತಸ

ಮಡಿಕೇರಿ: ಜಿಲ್ಲೆಯಲ್ಲಿ ಸೋಮವಾರ ಸಂಜೆ ಸುಮಾರು ನಾಲ್ಕು ಗಂಟೆ ವೇಳೆಗೆ ಅಕಾಲಿಕವಾಗಿ ಮಳೆ ಸುರಿದಿದ್ದು, ಜನರ ಮೊಗದಲ್ಲಿ ಸಂತಸ ಮೂಡಿದೆ.

ಮಡಿಕೇರಿಯ ಸುತ್ತಮುತ್ತ ಮಳೆ ಬಿದ್ದಿದ್ದು, ವಾತಾವರಣವನ್ನು ತಣ್ಣಗಾಗಿಸಿದೆ. ಸುಮಾರು ಅರ್ಧ ಗಂಟೆಗಳ ಕಾಲ ಮಳೆ ಸುರಿದಿದೆ. ಎಲ್ಲೆಡೆ ಬೇಸಿಗೆಯಿದ್ದಿದ್ದರಿಂದ ಕಾಫಿಗೆ ಮಳೆ ಇಲ್ಲದೆ ಗಿಡವೆಲ್ಲ ಒಣಗಿ ಹೋಗಿತ್ತು. ಅಕಾಲಿಕ ಮಳೆಯಿಂದ ಕಾಫಿ ಬೆಳೆಗಾರರಿಗೆ ವರದಾನವಾಗಿದೆ.

ಕಳೆದ ಮಳೆಯಿಂದ ಅರಳಿದ ಕಾಫಿ ಹೂಗಳು ಬಾಡುವ ಮೊದಲೇ ವರುಣನ ಆಗಮನವಾಗಿದ್ದು ಬೆಳೆಗಾರರು ನಿಟ್ಟುಸಿರು ಬಿಡುವಂತಾಗಿದೆ. ಮತ್ತೊಂದೆಡೆ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ಗುರುವಾರದ ಬಿಸಿಲಿನ ತಾಪ ನೂರು ವರ್ಷದ ದಾಖಲೆಯನ್ನು ಮುರಿದಿತ್ತು.

ಬೆಂಗಳೂರು, ಕೋಲಾರ, ಮಂಡ್ಯ, ಮೈಸೂರು, ರಾಮನಗರ ಸೇರಿದಂತೆ ದಕ್ಷಿಣ ಒಳನಾಡಿನ ಬಿಸಿಲು ನೂರು ವರ್ಷದ ದಾಖಲೆಯನ್ನು ಮುರಿದಿತ್ತು. ವಾಡಿಕೆಗಿಂತ ಬರೋಬ್ಬರಿ 2-5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಏರಿಕೆಯಾಗಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *