ಪ್ರವಾಹದ ನಡುವೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ- ಪಾತ್ರೆಯಲ್ಲಿ ಕುಳಿತು ಮಂಟಪಕ್ಕೆ ತೆರಳಿದ್ರು!

ತಿರುವನಂತಪುರಂ: ಪ್ರವಾಹದ ನಡುವೆ ಜೋಡಿಯೊಂದು ವಿಶೇಷವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಕೇರಳದಲ್ಲಿ ಪ್ರವಾಹ ಹಿನ್ನೆಲೆಯಲ್ಲಿ ದೊಡ್ಡ ಪಾತ್ರೆಯಲ್ಲೇ ಜೋಡಿಗಳು ಮದುವೆ ಮಂಟಪಕ್ಕೆ ಹೋಗುವ ಮೂಲಕ ಎಲ್ಲೆಡೇ ಸುದ್ದಿಯಾಗುತ್ತಿದ್ದಾರೆ.

ಅಲಫುಜದಲ್ಲಿ ವಧು ಐಶ್ವರ್ಯ, ವರ ರಾಹುಲ್ ಮದ್ವೆ ಹಸೆಮಣೆ ಏರಿದ್ದಾರೆ. ಆರೋಗ್ಯಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದ ಇಬ್ಬರು ಮದುವೆ ಮಂಟಪಕ್ಕೆ ಹೋಗಲು ಸಾಧ್ಯವಾಗದೆ ಪರದಾಡುತ್ತಿದ್ದರು. ಕೊನೆಗೆ ದೊಡ್ಡ ಗಾತ್ರದ ಅಲ್ಯುಮಿನಿಯಂ ಅಡುಗೆ ಪಾತ್ರೆಯಲ್ಲಿ ಅವರಿಬ್ಬರನ್ನು ಕೂರಿಸಿಕೊಂಡು ನೀರಿನಲ್ಲಿ ತಳ್ಳಿಕೊಂಡು ಮದುವೆ ಮಂಟಪಕ್ಕೆ ಕರೆದೊಯ್ಯಲಾಯಿತು. ಇದನ್ನೂ ಓದಿ: ಅ.25 ರಿಂದ ಪ್ರೈಮರಿ ಶಾಲೆ ಆರಂಭ – ಮಾರ್ಗಸೂಚಿ ಏನು?

ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಹತ್ತಿರದ ದೇವಸ್ಥಾನಕ್ಕೆ ಹೊಂದಿಕೊಂಡಂತೆ ಕೇರಳದ ತಲವಾಡಿಯಲ್ಲಿರುವ ಸಭಾಂಗಣವೊಂದರಲ್ಲಿ ಅವರಿಬ್ಬರ ಮದುವೆ ನಡೆಯಬೇಕಿತ್ತು. ಆದರೆ 3 ದಿನಗಳ ಮಳೆಯಿಂದ ಪ್ರವಾಹ ಉಂಟಾಗಿ ಅಚಾನಕ್ಕಾಗಿ ತೊಂದರೆ ಎದುರಾಗಿತ್ತು. ಮದುವೆ ಮಂಟಪಕ್ಕೆ ನೀರಿನಲ್ಲಿ ನಡೆದುಕೊಂಡು ಹೋಗುವುದು ಅಸಾಧ್ಯವಾದ ಕಾರಣ ಮದುಮಕ್ಕಳಾಗಿ ತಯಾರಾಗಿದ್ದ ವಧು, ವರರನ್ನು ಅಡುಗೆ ಮಾಡಲು ದೊಡ್ಡ ತಪ್ಪಲೆಯಲ್ಲಿ ಕೂರಿಸಿಕೊಂಡು ಅವರ ಸಂಬಂಧಿಕರು ಪ್ರವಾಹದ ನೀರಿನಲ್ಲಿ ಅವರನ್ನು ಕರೆದೊಯ್ದಿದಿರುವುದನ್ನು ನಾವು ವೀಡಿಯೋದಲ್ಲಿ ನೋಡಬಹುದಾಗಿದೆ. ಇದನ್ನೂ ಓದಿ: ರೇವಣ್ಣ ಡಿಸಿಎಂ ಆಗುವುದನ್ನು ತಪ್ಪಿಸಿದ್ದೇ ಎಚ್‍ಡಿಕೆ: ಜಮೀರ್ ಬಾಂಬ್

ಪ್ರಕೃತಿ ವಿಕೋಪಕ್ಕೆ ಕೇರಳದಲ್ಲಿ 26 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕೊಟ್ಟಾಯಂ ಮತ್ತು ಇಡುಕ್ಕಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸುರಿದ ಅಕಾಲಿಕ ಮಳೆಗೆ ಮೇಘ ಸ್ಫೋಟವೂ ಕಾರಣ ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ.

Comments

Leave a Reply

Your email address will not be published. Required fields are marked *