ಗಡಿಜಿಲ್ಲೆ ಬೀದರ್‌ನಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ – ನೆಲಕ್ಕುರುಳಿದ ಬೃಹತ್ ಮರ

ಬೀದರ್: ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಸುರಿದ ಭಾರೀ ಮಳೆಗೆ ಅವಾಂತರ ಸೃಷ್ಟಿಯಾಗಿದೆ. ಬೃಹತ್ ಮರವೊಂದು ಧರೆಗುರುಳಿ ರಸ್ತೆ ಸಂಚಾರಕ್ಕೆ ಅಡಚಡೆಯಾಗಿರುವ ಘಟನೆ ಔರಾದ್ (Aurad) ತಾಲೂಕಿನ ಜೋಜನಾ ಗ್ರಾಮದ ಬಳಿ ನಡೆದಿದೆ.ಇದನ್ನೂ ಓದಿ: ಧರ್ಮ ನೋಡಿ ಹೊಡೆದಿಲ್ಲ ಎಂದು ನಾನು ಹೇಳಿಯೇ ಇಲ್ಲ: ಆರ್‌ಬಿ ತಿಮ್ಮಾಪುರ ಯೂ ಟರ್ನ್

ಅಕಾಲಿಕ ಮಳೆಗೆ ಹಲವು ಮರಗಳು ರಸ್ತೆಗುರುಳಿದ ಪರಿಣಾಮ ಸಂತಪೂರ್‌ದಿಂದ ಜೋಜನಾ ಗ್ರಾಮದ ನಡುವೆ ರಸ್ತೆ ಸಂಚಾರ ಕೆಲವು ಹೊತ್ತು ಬಂದ್ ಆಗಿತ್ತು.

ರಣ ಬಿಸಿಲಿನಿಂದ ಕಂಗೆಟ್ಟಿದ್ದ ಜಿಲ್ಲೆಯ ಜನರಿಗೆ ವರುಣ ತಂಪೆರೆದಿದ್ದು, ಔರಾದ್, ಬೀದರ್, ಬಸವಕಲ್ಯಾಣ, ಭಾಲ್ಕಿ, ಕಮಲನಗರ ಸೇರಿದಂತೆ ಜಿಲ್ಲೆಯ ಕೆಲವು ಕಡೆಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಜನರು ಫುಲ್ ಖುಷ್ ಆಗಿದ್ದಾರೆ.ಇದನ್ನೂ ಓದಿ: IPL 2025 | ಒಂದೇ ಒಂದು ತೂಫಾನ್‌ ಶತಕ – ವೈಭವ್‌ಗೆ 10 ಲಕ್ಷ ರೂ. ಬಹುಮಾನ!