ಭಾಷೆ ಬತ್ತಳಿಕೆ ಇಟ್ಕೊಂಡು ಆಟ ಆಡಬೇಡಿ: ರೂಪೇಶ್‌ ರಾಜಣ್ಣಗೆ ಸಂಬರ್ಗಿ ವಾರ್ನಿಂಗ್‌

ನ್ನಡ ಪರ ಹೋರಾಟದ ಮೂಲಕ ಗುರುತಿಸಿಕೊಂಡಿರುವ ರೂಪೇಶ್ ರಾಜಣ್ಣ (Roopesh Rajanna), ಬಿಗ್‌ಬಾಸ್ (Bigg Boss) ಮನೆಯಲ್ಲೂ ಅವರು ಇದೇ ವಿಚಾರಕ್ಕೆ ಗುರುತಿಸಿಕೊಳ್ಳುತ್ತಿದ್ದಾರೆ. ದೊಡ್ಮನೆಯಲ್ಲಿ ಯಾರಾದರೂ ಬೇರೆ ಭಾಷೆ ಮಾತನಾಡಿದರೆ ವಿರೋಧ ವ್ಯಕ್ತಪಡಿಸುತ್ತಾರೆ ರೂಪೇಶ್. ಇದರಿಂದಾಗಿ ಅವರು ಮನೆಯವರಿಂದ ಟೀಕೆಗೆ ಒಳಗಾದ ಉದಾಹರಣೆ ಕೂಡ ಇದೆ. ಈಗ ರೂಪೇಶ್ ರಾಜಣ್ಣ ಅವರು ಪ್ರಶಾಂತ್ ಸಂಬರ್ಗಿ(Prashanth Sambargi)ಯಿಂದ ಖಡಕ್ ಎಚ್ಚರಿಕೆ ಪಡೆದಿದ್ದಾರೆ.

ರೂಪೇಶ್ ರಾಜಣ್ಣ ಅವರು ದೊಡ್ಮನೆಯಲ್ಲಿ ಸೈಲೆಂಟ್ ಆಗಿದ್ದಾರೆ. ಮನೆಯಿಂದ ಆಚೆ ಇದ್ದ ರೀತಿಗೂ ಹೊರಗಡೆ ಇರುವ ರೀತಿಗೂ ಬದಲಾವಣೆಯಿದೆ. ಇದನ್ನು ಸ್ವತಃ ರೂಪೇಶ್ ಕೂಡ ಒಪ್ಪಿಕೊಂಡಿದ್ದಾರೆ. ಇನ್ನು, ರೂಪೇಶ್ ರಾಜಣ್ಣ ಹಾಗೂ ಪ್ರಶಾಂತ್ ಸಂಬರ್ಗಿ ಮಧ್ಯೆ ಹಲವು ವಿಚಾರಕ್ಕೆ ಜಗಳ ಆಗಿದ್ದೂ ಇದೆ. ಈಗ ಭಾಷೆ ವಿಚಾರಕ್ಕೆ ರೂಪೇಶ್ ಹಾಗೂ ಪ್ರಶಾಂತ್ ಮಧ್ಯೆ ಕಿತ್ತಾಟ ನಡೆದಿದೆ.

ರೂಪೇಶ್ ರಾಜಣ್ಣ ಅವರು ಸಂಬರ್ಗಿ ಹತ್ತಿರ ಬಂದು ನನ್ನಲ್ಲಿ ಏನಾದರೂ ಬದಲಾವಣೆ ಆಗಬೇಕೇ ಎಂದು ಕೇಳಿದ್ದರು. ಇದಕ್ಕೆ ಉತ್ತರಿಸಿದ್ದ ಪ್ರಶಾಂತ್ ಸಂಬರ್ಗಿ, ನಿಮ್ಮ ಬಳಿ ಇರೋದು ಒಂದೇ ಅಸ್ತ್ರ, ಅದು ಭಾಷೆಯ ಅಸ್ತ್ರ. ಬಿಗ್ ಬಾಸ್(Bigg Boss House) ಮನೆಯಲ್ಲಿರುವ ಎಲ್ಲರಿಗೂ ಕನ್ನಡದ ಮೇಲೆ ಪ್ರೀತಿ ಇದೆ ಎಂದಿದ್ದಾರೆ. ಇದನ್ನು ಕೇಳಿ ರೂಪೇಶ್ ರಾಜಣ್ಣ ಗುಡುಗಿದ್ದಾರೆ. ಇಬ್ಬರ ಮಧ್ಯೆ ಈ ವಿಚಾರವಾಗಿ ಚರ್ಚೆ ನಡೆದಿದೆ. ಇದನ್ನೂ ಓದಿ:`ಪುನೀತ ಪರ್ವ’ ಕಾರ್ಯಕ್ರಮಕ್ಕೆ ಸಿಎಂಗೆ ಆಹ್ವಾನ ನೀಡಿದ ಅಣ್ಣಾವ್ರ ಕುಟುಂಬ

ಭಾಷೆ ಬತ್ತಳಿಕೆ ಇಟ್ಕೊಂಡು ಆಡಿದ್ರೆ ನಿಮಗೆ ಒಳ್ಳೆಯದಾಗಲ್ಲ. ಇಷ್ಟು ಮಾತ್ರ ಹೇಳೋಕೆ ಆಗೋದು ಎಂದು ಪ್ರಶಾಂತ್ ಸಂಬರ್ಗಿ ಅವರು ರೂಪೇಶ್ ರಾಜಣ್ಣಗೆ ನೇರವಾಗಿ ಹೇಳಿದ್ದಾರೆ. ಭಾಷೆ ಬತ್ತಳಿಕೆ ಇಟ್ಕೊಂಡು, ಅದನ್ನೇ ಅಸ್ತ್ರದ ರೀತಿ ಬಳಸಿ ಆಟ ಆಡಬೇಡಿ ಎಂದು ಖಡಕ್ ಆಗಿ ಸಂಬರ್ಗಿ ಮಾತನಾಡಿದ್ದಾರೆ. ದೊಡ್ಮನೆಯಲ್ಲಿ ಸಾಕಷ್ಟು ಬಾರಿ ರೂಪೇಶ್ ಹಾಗೂ ಪ್ರಶಾಂತ್ ಸಂಬರ್ಗಿ ಮಧ್ಯೆ ಕಿತ್ತಾಟ ನಡೆದಿತ್ತು. ಅದು ಭಾಷೆ ವಿಚಾರಕ್ಕೆ ಅನ್ನೋದು ವಿಪರ್ಯಾಸ. ʻಬಿಗ್ ಬಾಸ್ʼ ಮನೆಗೆ ಬರುವ ಮುಂಚೆಯೇ ಸಾಕಷ್ಟು ವಿಚಾರವಾಗಿ ಇಬ್ಬರ ನಡುವೆ ಮನಸ್ತಾಪವಿತ್ತು. ಈಗ ಅದು ದೊಡ್ಮನೆಯಲ್ಲೂ ಮುಂದುವರೆದಿದೆ.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *