ಅವೈಜ್ಞಾನಿಕ ಮೆಡಿಕಲ್ ತ್ಯಾಜ್ಯ ವಿಲೇವಾರಿ: ಕ್ಲಿನಿಕ್‍ಗಳ ಬಾಗಿಲು ಮುಚ್ಚಿಸಿದ ಆರೋಗ್ಯ ಇಲಾಖೆ!

ದಾವಣಗೆರೆ: ಕಾನೂನು ಬಾಹಿರವಾಗಿ ಹಾಗೂ ಅವೈಜ್ಞಾನಿಕವಾಗಿ ಮೆಡಿಕಲ್ ತ್ಯಾಜ್ಯವನ್ನು ಸಂಸ್ಕರಣೆ ಮಾಡಿದ್ದಕ್ಕೆ ಆರೋಗ್ಯ ಇಲಾಖೆ ನಗರದಲ್ಲಿ ದಾಳಿ ನಡೆಸಿ ಕೆಲವು ಕ್ಲಿನಿಕ್‍ಗಳಿಗೆ ಬೀಗ ಜಡಿದಿದೆ.

ಖಾಸಗಿ ಕ್ಲಿನಿಕ್ ನಡೆಸುವವರು ಅವೈಜ್ಞಾನಿಕವಾಗಿ ಮೆಡಿಕಲ್ ವೇಸ್ಟ್ ಅನ್ನು ಬೇರ್ಪಡಿಸುವುದು ಅಲ್ಲದೇ ಆ ತ್ಯಾಜ್ಯಗಳನ್ನು ರಸ್ತೆಯ ಪಕ್ಕದಲ್ಲಿ ಹಾಕಿ ಪರಿಸರಕ್ಕೆ ಹಾನಿ ಉಂಟು ಮಾಡುತ್ತಿದ್ದರು. ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ಆರೋಗ್ಯ ಇಲಾಖೆಗೆ ದೂರು ನೀಡಿದ್ದರು.

ವ್ಯಾಪಕವಾಗಿ ದೂರು ದಾಖಲಾದ ಹಿನ್ನೆಲೆಯಲ್ಲಿ ನಗರದ ಪಿ.ಜೆ.ಬಡಾವಣೆಯಲ್ಲಿ ಡಿಹೆಚ್‍ಓ ತ್ರಿಪುಲಾಂಭಾ ಹಾಗೂ ನರ್ಸಿಂಗ್ ಹೋಂ ಅಸೋಸಿಯೇಷನ್ ಅಧ್ಯಕ್ಷ ನಾಗಪ್ರಕಾಶ್ ನೇತೃತ್ವದಲ್ಲಿ ಸುಮಾರು 15 ಕ್ಲಿನಿಕ್‍ಗಳ ಮೇಲೆ  ಇಂದು ದಾಳಿ ನಡೆಸಲಾಗಿತ್ತು.

ದಾಳಿ ವೇಳೆ ಖಾಸಗಿ ಕ್ಲಿನಿಕ್ ಗಳಾದ ಗುರುಶ್ರೀ ಕ್ಲಿನಿಕ್, ಎಸ್ ಆರ್ ಎಲ್ ಡಯಾಕ್ನೋಸ್ಟಿಕ್ಸ್, ಗೋಕುಲ್ ಕ್ಲಿನಿಕ್ ಸೇರಿದಂತೆ ಹಲವು ಕ್ಲಿನಿಕ್ ಗಳಲ್ಲಿ ಅವೈಜ್ಞಾನಿಕವಾಗಿ ಮೆಡಿಕಲ್ ವೇಸ್ಟ್ ವಿಲೇವಾರಿ ಕಂಡು ಬಂದ ಹಿನ್ನೆಲೆಯಲ್ಲಿ ಕ್ಲಿನಿಕ್ ಗಳ ಪರವಾನಿಗೆ ರದ್ದುಗೊಳಿಸಿ, ಕ್ಲಿನಿಕ್ ಗಳನ್ನು ಸೀಜ್ ಮಾಡಿದ್ದಾರೆ.

ಈ ಹಿಂದೆ ನಗರದ ಗುಜುರಿಯಲ್ಲಿ ರಾಶಿ ರಾಶಿ ಮೆಡಿಕಲ್ ವೇಸ್ಟ್ ಪತ್ತೆಯಾಗಿದ್ದರ ಕುರಿತು ಜೂನ್ 24ರಂದು ಪಬ್ಲಿಕ್ ಟಿವಿ ವರದಿ ಪ್ರಸಾರ ಮಾಡಿತ್ತು. ಇದನ್ನೂ ಓದಿ: ಗುಜುರಿಯಲ್ಲಿ ಪತ್ತೆಯಾಯ್ತು ರಾಶಿ ರಾಶಿ ಮೆಡಿಕಲ್ ತ್ಯಾಜ್ಯ!

Comments

Leave a Reply

Your email address will not be published. Required fields are marked *