ಬಿಬಿಎಂಪಿ ವ್ಯಾಪ್ತಿಯಲ್ಲಿದ್ದ ಆರೋಗ್ಯ ಕೇಂದ್ರಗಳು ಮತ್ತೆ ಇಲಾಖೆಯ ಸುಪರ್ದಿಗೆ: ಸರ್ಕಾರ ಆದೇಶ

– 51 ಆರೋಗ್ಯ ಕೇಂದ್ರಗಳ ಆಡಳಿತಾತ್ಮಕ, ಆರ್ಥಿಕ ನಿರ್ವಹಣೆಗೆ ಸರ್ಕಾರ ಮುಂದು

ಬೆಂಗಳೂರು: ಇಲ್ಲಿನ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು, ಸಮುದಾಯ ಕೇಂದ್ರಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸುಪರ್ದಿಗೆ ನೀಡಲಾಗಿದೆ. ಆಡಳಿತಾತ್ಮಕ ಮತ್ತು ಆರ್ಥಿಕ ನಿಯಂತ್ರವಣವನ್ನು ಹೊಂದಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು, ಸಮುದಾಯ ಕೇಂದ್ರಗಳನ್ನು ಈಗ ಸರ್ಕಾರವೇ ನೇರವಾಗಿ ನಡೆಸಲು ತೀರ್ಮಾನಿಸಿದೆ.

ಈ ಬಗ್ಗೆ ಆದೇಶ ಹೊರಡಿಸಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಒಟ್ಟು 51 ಸರ್ಕಾರಿ ಆಸ್ಪತ್ರೆಗಳನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಲಿದೆ. ನಗರ ಆರೋಗ್ಯ ಅಭಿಯಾನದಡಿ ಪಟ್ಟಿ ಮಾಡಿದ 35 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಪಟ್ಟಿ ಮಾಡದ 14 ನಗರ ಪ್ರಾಥಮಿಕ ಕೇಂದ್ರಗಳು ಹಾಗೂ 2 ಸಮುದಾಯ ಆರೋಗ್ಯ ಕೇಂದ್ರಗಳು ಇನ್ನು ಮುಂದೆ ಅರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಬರಲಿದೆ. ಇದನ್ನೂ ಓದಿ: ಕರಾವಳಿಯಲ್ಲಿ ಚರ್ಚ್‍ಗೆ ನುಗ್ಗಿ ದಾಂಧಲೆ- ಭಗವಾಧ್ವಜ ಹಾರಿಸಿ ಹನುಮಂತನ ಪೂಜೆ!

ಬಿಬಿಎಂಪಿ ನೇಮಿಸಿರುವ ಸಿಬಂದಿಗಳು, ಪಿಠೋಪಕರಣಗಳು ಮತ್ತು ಸಲಕರಣೆಗಳು ಕೂಡ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸೇರಿಕೊಳ್ಳಲಿದೆ. ಸರ್ಕಾರದ ಎಲ್ಲಾ ಸೌಲಭ್ಯಗಳು ರಾಜ್ಯದಾದ್ಯಂತ ಒಂದೇ ರೀತಿ ಸಿಗಬೇಕು ಅನ್ನುವ ನಿಟ್ಟಿನಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಇದನ್ನೂ ಓದಿ: ಇದು ಸೇಡಿನ ರಾಜಕಾರಣ: ಬಿಜೆಪಿ ಮುಖಂಡನ ಬಂಧನಕ್ಕೆ ನವಜೋತ್‌ ಸಿಧು ಕಿಡಿ

BBMP

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳ ನಿರ್ವಹಣೆ ಒಂದೇ ರೀತಿ ನಡೆಯಬೇಕು. ಸರ್ಕಾರದ ಸೌಲಭ್ಯಗಳು ನಗರದ ಪ್ರದೇಶವಾಗಿರಲಿ, ಅಥವಾ ಹಳ್ಳಿಯೇ ಆಗಿರಲಿ, ಎಲ್ಲರಿಗೂ ಒಂದೇ ರೀತಿಯಲ್ಲಿ ಇರಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಆರೋಗ್ಯ ಯೋಜನೆಗಳಲ್ಲಿ ಸಮನ್ವಯ ಸಾಧಿಸಿ ಸಮರ್ಪಕವಾಗಿ ಅನುಷ್ಠಾನ ಮಾಡಲು ಇದು ನೆರವಾಗಲಿದೆ ಎಂದರು.

Comments

Leave a Reply

Your email address will not be published. Required fields are marked *