ಸನ್ನಿಯ ಸೌಂದರ್ಯಕ್ಕೆ ಹುಚ್ಚನಾಗಿ ಮನೆಗೆ ಬಂದಿದ್ದ ಆಗಂತುಕ ಆಕೆಯ ರೌದ್ರಾವತರಾರ ನೋಡಿ ಎಸ್ಕೇಪ್

ಮುಂಬೈ: ಬಿಟೌನ್ ಬೆಡಗಿ ಸನ್ನಿ ಲಿಯೋನ್ ಗೆ ಬೌಲ್ಡ್ ಆಗದಿರೋ ಹುಡುಗರು ತುಂಬಾನೇ ಕಡಿಮೆ. ಆದರೆ ಇಲ್ಲೊಬ್ಬ ಹುಡುಗ ಸನ್ನಿ ಸೌಂದರ್ಯಕ್ಕೆ ತಲೆಕೆಡಿಸ್ಕೊಂಡು ಅವರು ನೆಲೆಸಿರುವ ಅಪಾರ್ಟ್‍ಮೆಂಟ್‍ಗೆ ಹೋಗಿದ್ದ.

ಇದು ಸುಮಾರು ಒಂದೆರಡು ವರ್ಷಗಳ ಹಿಂದಿನ ಕಥೆ. ಸನ್ನಿ ಲಿಯೋನ್ ಗೆ ಸಾಮಾಜಿಕ ಜಾಲತಾಣದಲ್ಲೊಬ್ಬ ತುಂಬಾನೇ ಕಾಟ ಕೊಡುತ್ತಿದ್ದನಂತೆ. ಹೀಗಾಗಿಯೇ ಆತನನ್ನು ಸನ್ನಿ ಅವಾಯ್ಡ್ ಮಾಡಿದ್ದರು. ಹೇಳಿ ಕೇಳಿ ಸೆಲೆಬ್ರಿಟಿ ಮನೆಯ ಅಡ್ರೆಸ್ ಎಲ್ಲರಿಗೂ ಗೊತ್ತಿರುತ್ತದೆ. ಆ ಪಡ್ಡೆಹುಡುಗ ಮಾತನಾಡದಿದ್ದಲ್ಲಿ ಮನೆಗೇ ಬರ್ತೀನಿ ಅಂತ ಧಮ್ಕಿ ಸಹ ಹಾಕಿದ್ದನು. ಸುಮ್ನೆ ಹೇಳ್ತಾನೆ ಬಿಡು ಅಂಥದ್ದೇನೂ ಆಗಲ್ಲ ಅಂತ ಸನ್ನಿ ಸುಮ್ಮನಿದ್ದರು. ಆದರೆ ಒಂದು ದಿನ ಪತಿ ಡೇನಿಯಲ್ ವೆಬರ್ ಇಲ್ಲದೇ ಇರುವ ವೇಳೆ ಸನ್ನಿ ಇದ್ದ ಮನೆಯನ್ನ ಹುಡುಕಿಕೊಂಡು ಆತ ಬಂದೇ ಬಿಟ್ಟಿದ್ದ.

ಸನ್ನಿ ಲಿಯೋನ್ ಆ ವೇಳೆ ಮಗಳನ್ನ ದತ್ತು ಪಡೆದುಕೊಂಡಿರಲಿಲ್ಲ. ಸನ್ನಿಯ ಮನೆಕೆಲಸದವರೂ ಇರಲಿಲ್ಲ. ಇನ್ನು ಸನ್ನಿಗೇನಿದ್ರೂ ಮ್ಯಾನೇಜರ್ ಆಕೆಯ ಪತಿಯೇ. ಆ ದಿನ ವೈಯಕ್ತಿಕ ಕೆಲಸಕ್ಕಾಗಿ ಸನ್ನಿ ಪತಿ ಡೇನಿಯಲ್ ವೆಬರ್ ಹೊರಗೆ ಹೋಗಿದ್ದರು. ಈ ಸಮಯ ನೋಡಿಕೊಂಡು ಆಗಂತುಕ ಸನ್ನಿ ಮನೆಗೆ ಆಗಮಿಸಿ ಪದೇ ಪದೇ ಬೆಲ್ ಮಾಡಿದ್ದಾನೆ. ಆ ವೇಳೆ ಧೈರ್ಯಗೆಡದ ಸನ್ನಿ ಕಿಚನ್ ನಲ್ಲಿಯೋ ಚಾಕು ಹಿಡಿದುಕೊಂಡು ಬಾಗಿಲು ತೆಗೆದಿದ್ದಾರೆ. ತೆರೆಯಲ್ಲಿ ವೈಯಾರ ತೋರಿಸುತ್ತಿದ್ದ ಸನ್ನಿಯನ್ನ ನೇರವಾಗಿ ರೌದ್ರಾವತಾರದಲ್ಲಿ ನೋಡಿ ಆತ ಅಲ್ಲಿಂದ ಕಾಲ್ಕಿತ್ತು ಓಡಿಹೋಗಿದ್ದಾನೆ.

ಅಂದಹಾಗೆ ಸನ್ನಿ ಲಿಯೋನ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಕಿರುಕುಳ ನೀಡುವವರ ವಿರುದ್ಧ ಹೋರಾಡುವ ಎನ್‍ಜಿಓವೊಂದಕ್ಕೆ ಕೈಜೋಡಿಸಿದ್ದಾರೆ. ಈ ಕುರಿತು ಕಾರ್ಯಕ್ರಮದಲ್ಲಿ ಖುದ್ದು ಸನ್ನಿ ಲಿಯೋನ್ ತನ್ನ ಅನುಭವಕ್ಕೆ ಬಂದ ಕಷ್ಟ ಹೇಳಿಕೊಂಡಿದ್ದಾರೆ. ಇದರಿಂದ ಮಹಿಳೆಯರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ.

Comments

Leave a Reply

Your email address will not be published. Required fields are marked *