ಮುಸ್ತಾಕ್ ನನ್ನ ಜೊತೆ ನೀನು ಮಲಗಬೇಕು ಎಂದು ಕೇಳಿಕೊಂಡಿದ್ರು- ನಟ ರಾಹುಲ್ ಸಿಂಗ್ ಆರೋಪ

-ಮೊದಲ #MenToo ಆರೋಪ

ಹೈದರಾಬಾದ್: ಭಾರತೀಯ ಚಿತ್ರರಂಗದಲ್ಲಿ ಸದ್ಯಕ್ಕೆ ಮೀಟೂ ಅಭಿಯಾನದ ಸುದ್ದಿಯೇ ಹರಿದಾಡುತ್ತಿದೆ. ಮೀಟೂ ಅಭಿಯಾನ ನಟಿಯರಿಗೆ ಮಾತ್ರ ಸೀಮಿತವಾಗಿತ್ತು. ಆದ್ದರಿಂದ ಇತ್ತೀಚಿಗೆ ಮೆನ್‍ಟೂ ಅಂತಲೂ ಅಭಿಯಾನವನ್ನು ಶುರುಮಾಡಿದ್ದರು. ಈಗ ಈ ಅಭಿಯಾನ ಶುರುವಾದ ಬೆನ್ನಲ್ಲೇ ಮೊದಲು ಮೆನ್ ಟೂ ಆರೊಪ ಕೇಳಿ ಬಂದಿದೆ.

ಕಿರುತರೆ ನಟ ರಾಹುಲ್ ಸಿಂಗ್ ಬಾಲಿವುಡ್ ನ ಬರಹಗಾರ ಮತ್ತು ನಿರ್ಮಾಪಕರಾದ ಮುಸ್ತಾಕ್ ಶೇಕ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದಾರೆ. ಹಿಂದಿ ಧಾರವಾಹಿಯ ನಟಿ ಪ್ರತ್ಯೂಷಾ ಬ್ಯಾನರ್ಜಿ ಅವರು ಮೃತಪಟ್ಟಾಗ ಈಕೆಯ ಗೆಳೆಯನಾದ ನಟ ರಾಹುಲ್ ರಾಜ್ ಸಿಂಗ್ ಸುದ್ದಿಯಾಗಿದ್ದರು. ಈಗ ನಟ ರಾಹುಲ್ ರಾಜ್ ಸಿಂಗ್ ಮುಸ್ತಾಕ್ ನನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ನನ್ನ ಮೃತ್ತಿ ಜೀವನವನ್ನು ಹಾಳುಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ರಾಹುಲ್ ಸಿಂಗ್ ಹೇಳಿದ್ದೇನು?
ಮುಸ್ತಾಕ್ ಬಾಲಿವುಡ್ ನಲ್ಲಿ ತುಂಬಾ ಪ್ರಭಾವಿ ವ್ಯಕ್ತಿಯಾಗಿದ್ದಾರೆ. ಒಂದು ದಿನ ಅವರು ಮೀಟಿಂಗ್ ಮುಗಿಸಿ ನನಗೆ ಕರೆ ಮಾಡಿ ಬಾಂದ್ರ ಕಾಫಿ ಶಾಪ್ ಗೆ ಕರೆದರು. ಬಳಿಕ ರಾತ್ರಿ ಸುಮಾರು 11 ಗಂಟೆಗೆ ನನ್ನನ್ನು ಅವರ ಮನೆಗೆ ಕರೆದುಕೊಂಡು ಹೋದರು. ಅಲ್ಲಿ ಮುಸ್ತಾಕ್ ನಾನು ನಿನಗೆ ಏನೋ ಮಾಡುತ್ತೇನೆ. ನೀನು ಅದನ್ನ ಇಷ್ಟಪಡುತ್ತೀಯಾ, ಅದು ಭಿನ್ನವಾಗಿರುತ್ತದೆ ಎಂದು ಹೇಳಿದರು. ಈ ವೇಳೆ ನನಗೆ ಭಯವಾಯಿತು. ನಂತರ ಅವರು, ನನಗೆ ನಿಮ್ಮ ಕುಟುಂಬದವರ ಬಗ್ಗೆ ತಿಳಿದಿದೆ. ನಾನು ನಿಮ್ಮ ಇಷ್ಟಗಳಿಗೆ ವಿರೋಧ ವ್ಯಕ್ತಪಡಿಸುವುದಿಲ್ಲ. ನಾನು ನಿಮ್ಮ ಸ್ನೇಹಿತನಾಗಿದ್ದೇನೆ. ಎಲ್ಲ ಸಂಬಂಧಗಳು ಸೆಕ್ಸ್ ಆಗಿರುವುದಿಲ್ಲ. ನೀನು ಚಿಂತಿಸಬೇಡ ಮುಂದಿನ ಬಾರಿ ನೀನು ಸಿದ್ಧನಿರುತ್ತೀಯಾ ಎಂದು ಹೇಳಿದರು. ಬಳಿಕ ನಾನು ಅಲ್ಲಿಂದ ಹೊರಟೆ ಅಂತ ಸಿಂಗ್ ಹೇಳಿದ್ದಾರೆ.

ಮುಸ್ತಾಕ್ ಶೇಕ್

ನಾನು ಒಂದು ಕಿರುತೆರೆ ಧಾರಾವಾಹಿಗೆ ಆಯ್ಕೆಯಾಗಿದ್ದೆ. ನಂತರ ನನಗೆ ಮುಸ್ತಾಕ್ ಕರೆ ಮಾಡಿ ಒಂದು ಪಾತ್ರಕ್ಕಾಗಿ ನಿನ್ನನ್ನು ಆಯ್ಕೆಮಾಡಿದ್ದೇನೆ ಎಂದು ಹೇಳಿದರು. ನಾನು ‘ಮಾತ್ ಕಿ ಚೌಕಿ’ ಕಾರ್ಯಕ್ರಮಕ್ಕೆ ಸಹಿ ಮಾಡಿದ್ದೆ. ಆದರೆ ನಿನ್ನ ಕೆಲಸವನ್ನು ಉಳಿಸಿಕೊಳ್ಳಬೇಕಾದರೆ ನೀನು ನನ್ನ ಜೊತೆ ಮಗಲಬೇಕು ಎಂದು ಕೇಳಿದರು. ಆದರೆ ಅದಕ್ಕೆ ನಿರಾಕರಿಸಿದೆ. ನಾನು ಆ ರೀತಿ ಹೇಳಿದ ತಕ್ಷಣ ಕಾರ್ಯಕ್ರಮದಿಂದ ನನ್ನನ್ನು ತೆಗೆದು ಹಾಕಿದರು ಎಂದು ಸಿಂಗ್ ಹೇಳಿದ್ದಾರೆ.

ನಾನು ಮುಸ್ತಾಕ್ ಅವರಿಂದ ಕಿರುತೆರೆಯನ್ನು ಬಿಟ್ಟೆ. ಆ ಕಾಲದಲ್ಲಿ ನಾನು ತಿಂಗಳಿಗೆ 3-4 ಲಕ್ಷ ರೂ. ಸಂಪಾದಿಸುತ್ತಿದ್ದೆ. ನಾನು ಟಿವಿಯಿಂದ ದೂರವಾಗಿದ್ದು ಯಾಕೆ ಎಂಬುದರ ಬಗ್ಗೆ ನನ್ನ ಅಭಿಮಾನಿಗಳಿಗೆ ಮತ್ತು ಸ್ನೇಹಿತರಿಗೆ ಉತ್ತರಿಸಬೇಕಿತ್ತು. ನಾನು 10 ವರ್ಷಗಳ ಹಿಂದೆ ಇದನ್ನೇ ನನ್ನ ಪೋಷಕರಿಗೆ ಹೇಳಿದ್ದೆ. ನಾನು ನಟಿಸಬೇಕಾದರೆ ಯಾರ ಜೊತೆಗೆ ಮಲಗಬೇಕು ಅದು ನನಗೆ ಇಷ್ಟವಿರಲಿಲ್ಲ ಎಂದು ರಾಹುಲ್ ಸಿಂಗ್ ತಮ್ಮ ಜೀವನದಲ್ಲಿ ನಡೆದ ಘಟನೆಯ ಬಗ್ಗೆ ಹೇಳಿಕೊಂಡಿದ್ದಾರೆ.

ಈ ಬಗ್ಗೆ ಮುಸ್ತಾಕ್ ಇದುವರೆಗೂ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ನೀಡಿಲ್ಲ ಎಂದು ವರದಿಯಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *