ನೀವೇ ಎತ್ತಾಕ್ತಿರಾ, ಇಲ್ಲಾ ನಾನೇ ಎತ್ತಿ ಹಾಕ್ಲಾ – ತೊಂದ್ರೆ ಕೊಡ್ತಿದ್ದ ವ್ಯಕ್ತಿಯ ವಿರುದ್ಧ ರೇವಣ್ಣ ಆಕ್ರೋಶ

ಹಾಸನ: ಯಾವನ್ ಅವನು, ಹೊರಗಡೆ ಎತ್ತಾಕ್ರಿ ಹೇಳ್ತೀನಿ ಎಂದು ತಾವು ಮಾತನಾಡುವಾಗ ಪದೇ, ಪದೇ ಮಾತನಾಡುತ್ತ ತೊಂದರೆ ಕೊಡುತ್ತಿದ್ದ ವ್ಯಕ್ತಿಯ ವಿರುದ್ಧ ಜೆಡಿಎಸ್ ನಾಯಕ ಹೆಚ್‍ಡಿ.ರೇವಣ್ಣ ಆಕ್ರೋಶ ಹೊರಹಾಕಿದ ಘಟನೆ ಹಾಸನದಲ್ಲಿ ನಡೆದಿದೆ.

ಹಾಸನದ ಹೆಚ್.ಆಲದಹಳ್ಳಿ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮಕ್ಕೆ ಹೆಚ್‍ಡಿ.ರೇವಣ್ಣ ಆಗಮಿಸಿದ್ದರು. ಈ ವೇಳೆ ಅವರು ಮಾಧ್ಯಮದವರ ಜೊತೆ ಪಾಣಿ, ಇನ್ಕಮ್ ಸರ್ಟಿಫಿಕೇಟ್, ಖಾಸಗಿ ಶಾಲೆ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಸ್ಥಳೀಯ ವ್ಯಕ್ತಿಯೊಬ್ಬ ಪದೇ ಪದೇ ರೇವಣ್ಣ ಮಾತಿಗೆ ಅಡ್ಡಿಪಡಿಸುತ್ತಿದ್ದ. ಈ ವೇಳೆ ತಾಳ್ಮೆ ಕಳೆದುಕೊಂಡ ಹೆಚ್.ಡಿ.ರೇವಣ್ಣ, ಯಾವನು ಅವನು ಎತ್ತಿಹಾಕಿ ಎಂದರು. ಇದನ್ನೂ ಓದಿ:  ನಿಮ್ಮ ಅಂತ್ಯಕಾಲವೂ ಆರಂಭವಾಗಿದೆ – ಸಿದ್ದರಾಮಯ್ಯ ವಿರುದ್ಧ ಹೆಚ್‍ಡಿಕೆ ಟ್ವೀಟ್ ವಾರ್

ಇದಕ್ಕೆ ಪ್ರತಿಯಾಗಿ ಸ್ಥಳೀಯ ವ್ಯಕ್ತಿ ನನ್ನೇ ಎತ್ತಾಕಿ ಅಂತೀರಾ ಎಂದು ಮರು ಪ್ರಶ್ನೆ ಮಾಡಿದ್ದ. ಅದಕ್ಕೆ ರೇವಣ್ಣ, ನಾನು ಹಳ್ಳಿ ರೈತರ ಬಗ್ಗೆ ಮಾತನಾಡುತ್ತಿದ್ದೇನೆ, ಈ ವೇಳೆ ತಾಳ್ಮೆಯಿಂದ ಇರಬೇಕು ಎಂದು ಸೂಚಿಸಿದರು. ಇದಕ್ಕೂ ಬಗ್ಗದ ಆತ ನಾನೂ ಕೂಡ ರೈತನ ಮಗ ಎಂದು ಮಧ್ಯೆ, ಮಧ್ಯೆ ಮಾತಾಡುತ್ತಲೇ ಇದ್ದ. ಇದರಿಂದ ತಾಳ್ಮೆ ಕಳೆದುಕೊಂಡ ರೇವಣ್ಣ, ನೀವೇ ಎತ್ತಾಕ್ತಿರಾ, ಇಲ್ಲಾ ನಾನೇ ಎತ್ತಿ ಹಾಕ್ಲಾ ಎಂದು ಪೊಲೀಸರಿಗೆ ಗದರಿಸದರು. ಈ ವೇಳೆ ವ್ಯಕ್ತಿಯನ್ನು ದೂರ ಎಳೆದೊಯ್ಯುತ್ತಿದ್ದ ಪೊಲೀಸರು ಮತ್ತು ಸ್ಥಳೀಯರನ್ನು ನೋಡಿದ ರೇವಣ್ಣ, ಆ ವ್ಯಕ್ತಿಯನ್ನು ವಾಪಸ್ ಕರೆಸಿ ಸಮಾಧಾನದಿಂದ ವರ್ತಿಸುವಂತೆ ತಿಳಿ ಹೇಳಿದರು. ಇದನ್ನೂ ಓದಿ: ಮಾಜಿ ಮಂತ್ರಿ ಎನ್.ಎಚ್ ಶಿವಶಂಕರರೆಡ್ಡಿ ವಿರುದ್ಧ ನಿಂದನೆ ಆರೋಪ -ಆಡಿಯೋ ವೈರಲ್

Comments

Leave a Reply

Your email address will not be published. Required fields are marked *