ಸಿಎಂಗಾಗಿ ಬರಿಗಾಲಿನಲ್ಲಿ ಚಾಮುಂಡಿ ಬೆಟ್ಟವೇರಿದ ಅಂಗವಿಕಲೆ- ಇತ್ತ 101 ಕಾಯಿ ಒಡೆದ ಅಭಿಮಾನಿ

ಮೈಸೂರು/ತುಮಕೂರು: ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾದ ಹಿನ್ನೆಯಲ್ಲಿ ಬರಿ ಕಾಲಿನಲ್ಲಿ ಚಾಮುಂಡಿ ಬೆಟ್ಟವನ್ನು ಅಂಗವಿಕಲ ಮಹಿಳೆಯೊಬ್ಬರು ಹತ್ತಿ ತನ್ನ ಹರಕೆಯನ್ನು ಪೂರ್ಣಗೊಳಿಸಿದ್ದಾರೆ.

ಕಲಬುರಗಿ ಮೂಲದ ಅಂಗವಿಕಲೆ ಸಂಗೀತಾ ಅವರು ಹರಕೆ ತೀರಿಸಿದ ಮಹಿಳೆ. ಕುಮಾರಸ್ವಾಮಿ ಅಭಿಮಾನಿ ಆಗಿರುವ ಸಂಗೀತ, 2006 ರಲ್ಲಿ ಕುಮಾರಸ್ವಾಮಿ ಸಿಎಂ ಆಗಿದ್ದ ವೇಳೆ ಜನತಾದರ್ಶನದಲ್ಲಿ ಅವರನ್ನು ಭೇಟಿಯಾಗಿದ್ದರು. ಅಂಗವಿಕಲ ಕೋಟಾದಲ್ಲಿ ಮೆಟ್ರೋದಲ್ಲಿ ಸಂಗೀತಾರಿಗೆ ಕುಮಾರಸ್ವಾಮಿ ಉದ್ಯೋಗಕ್ಕೆ ನೆರವು ನೀಡಿದ್ದರು.

ಹೆಚ್‍ಡಿಕೆ ನೇತೃತ್ವದ 20-20 ಸರ್ಕಾರ ಪತನವಾದ ವೇಳೆ. ಮತ್ತೊಮ್ಮೆ ಕುಮಾರಸ್ವಾಮಿ ಸಿಎಂ ಆದರೆ ಮೆಟ್ಟಿಲು ಮೂಲಕ ಬೆಟ್ಟ ಹತ್ತುವ ಹರಕೆಯನ್ನು ಸಂಗೀತ ಕಟ್ಟಿಕೊಂಡಿದ್ದರು. ಅದರಂತೆ ಇವತ್ತು ಸಂಗೀತಾ ಕುಟುಂಬ ಸಮೇತ ಚಾಮುಂಡಿ ಬೆಟ್ಟ ಹತ್ತಿದರು.

ಇನ್ನು ಎಚ್‍ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿರುವುದಕ್ಕೆ ತುಮಕೂರಿನಲ್ಲಿ ಅವರ ಅಭಿಮಾನಿಯೊಬ್ಬರು ದೇವರಿಗೆ 101 ಕಾಯಿ ಒಡೆಯುವ ಮೂಲಕ ಹರಕೆ ತೀರಿಸಿದ್ದಾರೆ. ಸದಾಶಿವ ನಗರದ ಮಂಜುನಾಥ್ ಶೆಟ್ಟಿಹಳ್ಳಿ ಆಂಜನೇಯಸ್ವಾಮಿಗೆ 101 ಕಾಯಿ ಒಡೆಯುವ ಮೂಲಕ ಹರಕೆ ತೀರಿಸಿದ್ದಾರೆ.

ಕುಮಾರಸ್ವಾಮಿ ಮುಖ್ಯಮಂತ್ರಿ ಆದರೆ ಶೆಟ್ಟಿಹಳ್ಳಿ ಆಂಜನೇಯನಿಗೆ 101 ತೆಂಗಿನಕಾಯಿ ಒಡೆಯುತ್ತೇನೆಂದು ಹರಕೆ ಹೊತ್ತಿದ್ದರು. ಅದರಂತೆ 101 ತೆಂಗಿನಕಾಯಿಯನ್ನು ಹೊಡೆದು ಮಿಕ್ಕ ಹಣವನ್ನು ದೇವರ ಹುಂಡಿಗೆ ಹಾಕಿದ್ದಾರೆ. ಅಷ್ಟೇ ಅಲ್ಲದೇ ಅವರು ಮಖ್ಯಮಂತ್ರಿಯಾಗುವವರೆಗೂ ಕೇಶ ಮುಂಡನ ಮಾಡಿಸೋಲ್ಲ ಎಂದು ಹರಕೆ ಮಾಡಿದ್ದರು. ಹಾಗಾಗಿ ಸ್ನೇಹಿತರೊಂದಿಗೆ ಗುರುವಾರದಂದು ಪಾದಯಾತ್ರೆಯ ಮೂಲಕ ಧರ್ಮಸ್ಥಳಕ್ಕೆ ತೆರಳಿ ತನ್ನ ಹರಕೆಯನ್ನು ತೀರಿಸಲಿದ್ದಾರೆ,

Comments

Leave a Reply

Your email address will not be published. Required fields are marked *