ತಿರುಪತಿ ತಿಮ್ಮಪ್ಪ ಕನಸಲ್ಲಿ ಹೇಳಿದ್ದಕ್ಕೆ 1 ರೂ.ಗೆ ಒಂದು ಸೀರೆ ಹಂಚ್ತಿರೋ ಎಚ್‍ಡಿಕೆ ಅಭಿಮಾನಿ

ಬೀದರ್: ಎಲ್ಲಾದ್ರೂ ಒಂದು ರೂಪಾಯಿಗೆ ಒಂದು ಸೀರೆ ಸಿಗಲು ಸಾಧ್ಯವೆ…? ಇಲ್ಲ ಅನ್ನೋದಾದ್ರೆ ಇಲ್ಲಿ ಕೇಳಿ. ನೀವು ಗಡಿ ಜಿಲ್ಲೆ ಬೀದರ್‍ಗೆ ಬಂದ್ರೆ ಖಂಡಿತವಾಗಿ ಒಂದು ರೂಪಾಯಿಗೆ ಒಂದು ಸೀರೆಯನ್ನ ಪಡೆಯಬಹುದು. ಅದರಲ್ಲೂ ಒಂದು ವೇಳೆ ವೋಟರ್ ಐಡಿ ತೋರಿಸಿದ್ರೆ ಸೀರೆ ಉಚಿತ.

2018ಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‍ಡಿ ಕುಮಾರಸ್ವಾಮಿ ಮತ್ತೊಮ್ಮೆ ಸಿಎಂ ಆಗಲಿ ಎಂದು ಅವರ ಅಭಿಮಾನಿಯೊಬ್ಬರು ಒಂದು ರೂಪಾಯಿಗೆ ಒಂದು ಸೀರೆ ನೀಡುತ್ತಿದ್ದಾರೆ. ಬೀದರ್‍ನ ಸೃಷ್ಠಿ-ದೃಷ್ಠಿ ಸ್ಯಾರಿ ಸೆಂಟರ್‍ನ ಮಾಲೀಕರಾದ ಚಂದ್ರಶೇಖರ್ ಪಸರ್ಗೆ, ಒಂದು ರೂಪಾಯಿಗೆ ಒಂದು ಸೀರೆಯನ್ನು ಕೊಡುಗೆಯಾಗಿ ನೀಡುತ್ತಿದ್ದಾರೆ.

15 ದಿನಗಳ ಕಾಲ ಬಂಪರ್ ಆಫರ್ ನೀಡುತ್ತಿದ್ದು, ಮಹಿಳಾ ಮಣಿಯರು ಕ್ಯೂನಲ್ಲಿ ನಿಂತು ಸೀರೆ ಖರೀದಿಸುತ್ತಿದ್ದಾರೆ. ಕುಮಾರಸ್ವಾಮಿಗಾಗಿ 5 ಲಕ್ಷ ಸೀರೆ ಹಂಚು ಎಂದು ಚಂದ್ರಶೇಖರ್ ಅವರಿಗೆ ತಿರುಪತಿ ವೆಂಕಟೇಶ್ವರ ಕನಸಿನಲ್ಲಿ ಬಂದು ಹೇಳಿದ್ದಾನಂತೆ. ಅಲ್ಲದೆ ಮತ್ತೊಮ್ಮೆ ಎಚ್‍ಡಿಕೆ ಸಿಎಂ ಆಗಲಿ ಎಂದು ತಿರುಪತಿಗೆ ಹರಕೆ ಹೊತ್ತುಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *