ಹೆಚ್‍ಡಿಕೆ ಸ್ಥಿತಿ ಎಳೆಯಲಾರದ ಎತ್ತು ಬೆಳೆ ಮೇಲೆ ಬಿತ್ತು ಎಂಬಂತಾಗಿದೆ: ಅಶ್ವಥ್ ನಾರಾಯಣ್

ಚಿತ್ರದುರ್ಗ: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಸ್ಥಿತಿ ಎಳೆಯಲಾರದ ಎತ್ತು ಬೆಳೆ ಮೇಲೆ ಬಿತ್ತು ಎಂಬಂತಾಗಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶ್ವಥ್ ನಾರಾಯಣ ಹೇಳಿದ್ದಾರೆ.

ಜಿಲ್ಲೆಯ ಹೊಸದುರ್ಗ ಪಟ್ಟಣದಲ್ಲಿ ಸೇವೆ ಸಮರ್ಪಣಾ ಕಾರ್ಯಕ್ರಮದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆರ್‍ಎಸ್‍ಎಸ್ ಹಾಗೂ ಬಿಜೆಪಿಯ 4 ಸಾವಿರ ಜನ ಐಎಎಸ್ ಹಾಗೂ ಐಪಿಎಸ್ ಆಗಿದ್ದಾರೆ ಎಂದು ಹೇಳಿರುವ ಕುಮಾರಸ್ವಾಮಿಯವರಿಗೆ ತಿರುಗೇಟು ನೀಡಿದರು. ಎಳೆಯಲಾರದ ಎತ್ತು ಬೆಳೆ ಮೇಲೆ ಬಿತ್ತು ಎಂಬ ಸ್ಥಿತಿ ಹೆಚ್‍ಡಿಕೆಯವರದ್ದಾಗಿದೆ. ಅವರ ಕುಟುಂಬದಲ್ಲಿ ತಾತ, ಮಗ, ಮಗಳು, ಸೊಸೆ, ಅಳಿಯಂದಿರು, ಮೊಮ್ಮಕ್ಕಳು ಶಾಸಕ, ಸಂಸದ, ವಿಧಾನ ಪರಿಷತ್ ಸದಸ್ಯ ಹಾಗೂ ಸಿಎಂ ಆಗಿಬಹುದು ಎಂದರು. ಇದನ್ನೂ ಓದಿ: RSS ನ 4 ಸಾವಿರ ಐಎಎಸ್, ಐಪಿಎಸ್ ಅಧಿಕಾರಿಗಳಿದ್ದಾರೆ- ಬಿಜೆಪಿ ವಿರುದ್ಧ ಎಚ್‍ಡಿಕೆ ವಾಗ್ದಾಳಿ

ಹೆಚ್ ಡಿಕೆ ತಮ್ಮ ಸರ್ಕಾರ ಪತನದ ಮಾಹಿತಿ ಪಡೆಯುವಲ್ಲೇ ವಿಫಲರಾಗಿದ್ದರು. ಆರ್‍ಎಸ್‍ಎಸ್ ಬಗ್ಗೆ ಟೀಕೆ ಮಾಡಿ ಅಲ್ಪಸಂಖ್ಯಾತರ ಓಲೈಕೆ ಮಾಡಲು ಮುಂದಾಗಿದ್ದಾರೆ. ಇದೊಂದು ಬೇಜವಬ್ದಾರಿ ಹೇಳಿಕೆಯಾಗಿದೆ. 2000ದಲ್ಲಿ ಮಾಜಿ ಪ್ರಧಾನಿ ದೇವೇಗೌಡರೇ ಆರ್‍ಎಸ್‍ಎಸ್ ಬಗ್ಗೆ ಹೊಗಳಿದ್ದರು. ತುರ್ತು ಪರಿಸ್ಥಿತಿ ಹೇರಿ 25 ವರ್ಷವಾಗಿದ್ದ ಸಂದರ್ಭದಲ್ಲಿ ಹೊಗಳಿದ್ದರು. ಆದರೆ ಈ ಕುಮಾರಸ್ವಾಮಿಯವರು ಸಾರ್ವಜನಿಕ ಜೀವನದಲ್ಲಿ ಹೋರಾಟದ ರಾಜಕಾರಣ ಮಾಡಲಿ, ಅದನ್ನು ಬಿಟ್ಟು ಓಲೈಕೆಯ ರಾಜಕರಣ ಮಾಡುವುದನ್ನು ಕುಮಾರಸ್ವಾಮಿ ಬಿಡಲಿ ಎಂದು ವ್ಯಂಗ್ಯವಾಡಿದರು.

Comments

Leave a Reply

Your email address will not be published. Required fields are marked *