ಶಿವಣ್ಣ ತೊಟ್ಟುಕೊಂಡ ಡಿಫರೆಂಟ್ ‘ಕವಚ’!

ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಯಾವ ಚಿತ್ರದಲ್ಲಿ ಯಾವ ಪಾತ್ರಗಳನ್ನೇ ಮಾಡಿದರೂ ಅದರಲ್ಲೊಂದು ವಿಶೇಷತೆ ಇದ್ದೇ ಇರುತ್ತೆ. ಅವರ ಇದುವರೆಗಿನ ಸಿನಿಮಾ ಗ್ರಾಫ್ ಗಮನಿಸಿದರೆ ಅಲ್ಲಿ ಇಂಥಾ ವಿಶೇಷತೆಗಳ ಕುರುಹುಗಳೇ ಢಾಳಾಗಿ ಕಾಣ ಸಿಗುತ್ತವೆ. ಇದೇ ಡಿಸೆಂಬರ್ ಏಳನೇ ತಾರೀಕಿನಂದು ಬಿಡುಗಡೆಯಾಗಲು ರೆಡಿಯಾಗಿ ನಿಂತಿರೋ ಕವಚ ಚಿತ್ರವೂ ಆ ಸಾಲಿನಲ್ಲಿ ಸ್ಥಾನ ಪಡೆದುಕೊಳ್ಳೋ ಲಕ್ಷಣಗಳಿವೆ!

 

ಎಂ. ವಿ ಸತ್ಯನಾರಾಯಣ ಮತ್ತು ಎ.ಸಂಪತ್ ಜಂಟಿಯಾಗಿ ನಿರ್ಮಾಣ ಮಾಡಿರೋ ಕವಚವನ್ನು ಜಿವಿಆರ್ ವಾಸು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿನ ಪಾತ್ರವೂ ಕೂಡಾ ಶಿವಣ್ಣನ ಬಣ್ಣದ ಬದುಕಿಗೆ ಬೇರೆಯದ್ದೇ ರಂಗು ತುಂಬಲಿದೆಯಂತೆ. ಯಾಕೆಂದರೆ ಇಲ್ಲಿ ಅವರು ಚಾಲೆಂಜಿಂಗ್ ಆದ ಅಂಧನ ಪಾತ್ರವನ್ನು ನಿರ್ವಹಿಸಿದ್ದಾರಂತೆ.

ಕ್ರೈಂ ಬೇಸಿನ ಮನಮಿಡಿಯುವ ಕಥಾ ಹಂದರವನ್ನು ಹೊಂದಿರೋ ಕವಚ, ಮಲೆಯಾಳಂನಲ್ಲಿ ಮೋಹನ್ ಲಾಲ್ ನಟಿಸಿದ್ದ ಒಪ್ಪಂ ಚಿತ್ರದಿಂದ ಸ್ಫೂರ್ತಿ ಪಡೆದುಕೊಂಡ ಕಥಾ ಹಂದರವನ್ನು ಹೊಂದಿದೆ. ಕವಚದಲ್ಲಿ ಶಿವಣ್ಣನಿಗೆ ಇಶಾ ಕೊಪ್ಪೀಕರ್ ಜೋಡಿಯಾಗಿ ನಟಿಸಿದ್ದಾರೆ. ಬೇಬಿ ಮೀನಾಕ್ಷಿ ಮುಖ್ಯ ಪಾತ್ರಕ್ಕೆ ಜೀವ ತುಂಬಿದ್ದಾರೆ. ತಬಲಾ ನಾಣಿ, ರವಿ ಕಾಳೆ, ವಸಿಷ್ಠ ಸಿಂಹ ಮುಂತಾದವರ ತಾರಾಗಣವಿರೋ ಕವಚ ಇದೇ ಡಿಸೆಂಬರ್ ಏಳನೇ ತಾರೀಕಿನಂದು ಬಿಡುಗಡೆಯಾಗಲಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *