ಮಂಡ್ಯ: ಫಿಲಂ ಸೆಲೆಬ್ರಟಿಗಳು ಎಂದ್ರೆ ಸಾಕು ಅವರು ಐಷಾರಾಮಿ ಜೀವನ ನಡೆಸುತ್ತಾರೆ. ಅವರು ಫೈವ್ ಸ್ಟಾರ್ ಹೊಟೇಲ್‍ಗಳನ್ನು ಮಾತ್ರ ಇಷ್ಟ ಪಡುತ್ತಾರೆ ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಆದರೆ ಕನ್ನಡ ಚಿತ್ರರಂಗದ ಮೇರು ನಟರೊಬ್ಬರಿಗೆ ಸಾಮಾನ್ಯರಲ್ಲಿ ಸಾಮಾನ್ಯ ಜನರು ತಿಂಡಿ ತಿನ್ನುವ ಶೆಡ್ ಹೊಟೇಲ್ ಎಂದರೆ ಫುಲ್ ಪೆವರೆಟ್.
ಹೌದು. ಹಲಗೂರಿನಲ್ಲಿರುವ ಬಾಬು ಶೆಡ್ ಹೊಟೇಲ್ ಎಂದರೆ ಶಿವರಾಜ್‍ಕುಮಾರ್ ಅವರಿಗೆ ಫುಲ್ ಫೆವರೆಟ್ ಆಗಿದೆ. ಈ ಭಾಗದಲ್ಲಿ ಹೋಗುವಾಗ ಈ ಹೊಟೇಲಿಗೆ ಶಿವಣ್ಣ ಮಿಸ್ ಮಾಡದೇ ಭೇಟಿ ಕೊಡುತ್ತಾರೆ. ಇಲ್ಲಿ ಮಾಡುವ ದೋಸೆ, ಚಿತ್ರಾನ್ನ ಎಂದರೆ ಶಿವಣ್ಣ ಇಷ್ಟಪಟ್ಟು ತಿನ್ನುತ್ತಾರೆ. ಹಲವು ವರ್ಷಗಳಿಂದ ಶಿವರಾಜ್‍ಕುಮಾರ್ ಈ ಹೊಟೇಲ್‍ಗೆ ಬರುತ್ತಿದ್ದು, ಶೆಡ್ ಹೊಟೇಲ್ ಎಂದು ಭೇದ ಮಾಡದೇ ಇಲ್ಲಿನ ಜನರನ್ನು ಹಾಗೂ ತಿಂಡಿಯನ್ನು ಇಷ್ಟಪಡುತ್ತಾರೆ.

ಕಳೆದ 60 ವರ್ಷಗಳಿಂದ ಬಾಬು ಹೊಟೇಲ್ ಹಲಗೂರಿನಲ್ಲಿದ್ದು, ಅವರ ತಂದೆ ವೀರಭದ್ರಪ್ಪ ಅವರು ಈ ಹೊಟೇಲ್‍ನ್ನು ಪ್ರಾರಂಭ ಮಾಡದ್ದರು. ಈಗ ಬಾಬು ಅವರು ಈ ಹೊಟೇಲ್ ನಡೆಸುತ್ತಿದ್ದು, ಸುತ್ತಮುತ್ತಲು ಬಾಬು ಹೊಟೇಲ್ ಎಂದೇ ಫೇಮಸ್ ಆಗಿದೆ. ಇಲ್ಲಿನ ಶುಚಿ ಮತ್ತು ರುಚಿಗಾಗಿ ಜನರು ಮುಗಿ ಬೀಳುತ್ತಾರೆ. ಇದೇ ಕಾರಣಕ್ಕೆ ಹ್ಯಾಟ್ರಿಕ್ ಹೀರೋ ಶಿವಣ್ಣ ಈ ಭಾಗದಲ್ಲಿ ಬಂದರೆ ಬಾಬು ಹೊಟೇಲ್‍ಗೆ ಮಿಸ್ ಮಾಡದೆ ಹೋಗುತ್ತಾರೆ.

ಶಿವರಾಜ್‍ಕುಮಾರ್ ಅವರು ಮುತ್ತತ್ತಿ, ಮಲೆಮಹದೇಶ್ವರಬೆಟ್ಟ, ಸಿಂಗನಲ್ಲೂರು, ಗಾಜನೂರು, ಮೈಸೂರು ಭಾಗಗಳಿಗೆ ಹೋಗುವ ವೇಳೆ ಇದೇ ರಸ್ತೆಯಲ್ಲಿ ಹೋಗುತ್ತಾರೆ. ಹೋಗುವ ವೇಳೆ ತಮ್ಮ ಸ್ನೇಹಿತರೊಂದಿಗೆ ಹಾಗೂ ಕುಟುಂಬಸ್ಥರೊಂದಿಗೆ ಈ ಬಾಬು ಹೊಟೇಲ್‍ಗೆ ಹೋಗಿ ಇಲ್ಲಿ ತಯಾರಾಗುವ ತಿಂಡಿಯನ್ನು ಸವಿಯುತ್ತಾರೆ. ತಿಂಡಿ ತಿಂದ ನಂತರ ಶಿವಣ್ಣ ತಮ್ಮ ತಟ್ಟೆಯನ್ನು ತಾವೇ ಎತ್ತು ಹಾಕುತ್ತಾರೆ. ಶಿವಣ್ಣ ಅವರ ಈ ಸರಳತೆಗೆ ಇಲ್ಲಿನ ಜನರು ಸಹ ಮಾರು ಹೋಗಿದ್ದಾರೆ.

Leave a Reply