‘ಮನೆಯಲ್ಲಿ ಸಾವಾಗಿದೆ’- ಸುಳ್ಳು ಹೇಳಿ ಹೈದರಾಬಾದ್‍ನಿಂದ ಹಾಸನಕ್ಕೆ ಬಂದ ಟೆಕ್ಕಿ

ಹಾಸನ: ಮನೆಯಲ್ಲಿ ಸಾವಾಗಿದೆ ಎಂದು ಸುಳ್ಳು ಹೇಳಿ ಹೈದರಬಾದ್‍ನಿಂದ ಹಾಸನಕ್ಕೆ ಟೆಕ್ಕಿಯೊಬ್ಬ ಬಂದಿರುವ ವಿಚಾರ ಈಗ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೇ ಹೈದರಾಬಾದ್‍ನಲ್ಲಿ ಆತನಿದ್ದ ಬಿಲ್ಡಿಂಗ್‍ನಲ್ಲಿ ವಾಸವಿದ್ದ ವ್ಯಕ್ತಿಯೊಬ್ಬರಿಗೆ ಕೊರೊನಾ ಪಾಸಿಟಿವ್ ಇತ್ತು ಎಂಬ ಅನುಮಾನ ಆತಂಕಕ್ಕೆ ಕಾರಣವಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಾಸನದ ಎಸ್‍ಪಿ ಶ್ರೀನಿವಾಸ್ ಗೌಡ, ಜಿಲ್ಲೆಯಲ್ಲಿ 21 ಕಡೆ ಚೆಕ್ ಪೋಸ್ಟ್ ಹಾಕಿದ್ದೇವೆ. ಅಗತ್ಯ ದಾಖಲೆ ಇಲ್ಲದಿದ್ದರೆ ಜಿಲ್ಲೆಯೊಳಗೆ ಯಾರನ್ನೂ ಬಿಡುವುದಿಲ್ಲ. ಆದರೆ ಮನೆಯಲ್ಲಿ ಸಾವಾಗಿದೆ ಎಂದು ಹೇಳಿದಾಗ ಮಾನವೀಯತೆಯಿಂದ ಬಿಡುತ್ತೇವೆ. ಅದನ್ನು ಕೆಲವರು ದುರುಪಯೋಗ ಪಡಿಸಿಕೊಳ್ಳುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಹಾಸನ ಟೆಕ್ಕಿ ಹೈದರಾಬಾದ್‍ನಲ್ಲಿ ವಾಸವಿದ್ದ ಬಿಲ್ಡಿಂಗ್‍ನಲ್ಲಿ ಒಬ್ಬರಿಗೆ ಕೊರೊನಾ ಪಾಸಿಟಿವ್ ಇತ್ತು ಎಂಬ ಸಂಶಯದ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದೇವೆ. ಟೆಕ್ಕಿಯ ವೈದ್ಯಕೀಯ ಪರೀಕ್ಷೆ ನಡೆಸಿದ್ದು, ಇದುವರೆಗೂ ಯಾವುದೇ ಸೋಂಕಿನ ಲಕ್ಷಣ ಕಂಡು ಬಂದಿಲ್ಲ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.

Comments

Leave a Reply

Your email address will not be published. Required fields are marked *