ಹಾಸನ: ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಜಮೀನಿನಲ್ಲಿ ಕೆಲಸ ಮಾಡಲು ಹೋಗಿದ್ದ ರೈತರೊಬ್ಬರನ್ನು ಸೊಂಡಿಲಿನಿಂದ ಎತ್ತಿ ಎಸೆದು, ಅವರ ಕಾಲನ್ನು ತುಳಿದು ಕಾಡಾನೆ ದಾಳಿ ನಡೆಸಿದೆ.
ಹಾಸನದ ಸಕಲೇಶಪುರ ತಾಲೂಕಿನ ವಡೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ವಡೂರು ಗ್ರಾಮದ ರೈತ ಮಂಜುನಾಥ್ ಆನೆ ದಾಳಿಗೊಳಗಾಗಿದ್ದಾರೆ. ಇಂದು ಮುಂಜಾನೆ ಜಮೀನಿನಲ್ಲಿ ಕೆಲಸ ಮಾಡಲು ಮಂಜುನಾಥ್ ತೆರಳುತ್ತಿದ್ದರು. ಈ ವೇಳೆ ಏಕಾಏಕಿ ದಾಳಿ ನಡೆಸಿರುವ ಒಂಟಿ ಸಲಗ ಮಂಜುನಾಥ್ ಅವರನ್ನು ಸೊಂಡಿಲಿನಿಂದ ಎತ್ತಿ ಎಸೆದು, ಅವರ ಬಲಗಾಲನ್ನು ತುಳಿದು ಹಾಕಿದೆ.

ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವ ಮಂಜುನಾಥ್ ಅವರನ್ನು ಚಿಕಿತ್ಸೆಗಾಗಿ ಸಕಲೇಶಪುರ ಕ್ರಾಫರ್ಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆನೆಯನ್ನು ಗ್ರಾಮದಿಂದ ಓಡಿಸುವ ಪ್ರಯತ್ನ ನಡೆಸಿದರು.

Leave a Reply