ಕೇಂದ್ರ ಸಚಿವ ಸೋಮಣ್ಣ ಕಾಲಿಗೆ ಬಿದ್ದ ಹಾಸನ ಡಿಸಿ

ಹಾಸನ: ಅರಸೀಕೆರೆ (Arasikere) ತಾಲೂಕಿನ ಕೋಡಿಮಠಕ್ಕೆ ಕೇಂದ್ರ ಸಚಿವ ವಿ ಸೋಮಣ್ಣ (V Somanna) ಭೇಟಿ ನೀಡಿದ ವೇಳೆ ಹಾಸನದ ನೂತನ ಡಿಸಿ (Hassan DC) ಸೋಮಣ್ಣ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ.

ಸ್ವಾಮೀಜಿ ಭೇಟಿಗೆ ಸಚಿವರು ಆಗಮಿಸುತ್ತಲೇ ನೂತನ ಡಿಸಿ ಕೆಎಸ್ ಲತಾಕುಮಾರಿ (KS Lathakumari) ಸೋಮಣ್ಣ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ. ಬಳಿಕ ಸರ್ ನಿಮ್ಮನ್ನು ನೋಡಿ ಬಹಳ ಖುಷಿಯಾಯಿತು. ನೀವು ನಮಗೆ ಬಹಳ ಬೇಕಾದವರು ಎಂದು ಹೇಳಿದರು. ಇದನ್ನೂ ಓದಿ: ಕುದಿಯುವ ಸಾಂಬಾರ್ ಮೈಮೇಲೆ ಬಿದ್ದು ಎರಡೂವರೆ ವರ್ಷದ ಬಾಲಕಿ ಸಾವು

ಈ ವೇಳೆ ಮಾತನಾಡಿದ ಸೋಮಣ್ಣ, ನೀವು ಒಳ್ಳೆಯ ಕೆಲಸಗಾರರು. ಒಳ್ಳೆಯ ಕೆಲಸ ಮಾಡುತ್ತೀರಿ. ಯಾರ ಬಾಯಿಗೂ ಬೀಳೋದು ಬೇಡ. ಬೇಲೂರು-ಹಾಸನ 503 ಎಕರೆ ಭೂ ಸ್ವಾದೀನ ಮಾಡಬೇಕು. ಇದು ನಿಮ್ಮ ಅವಧಿಯಲ್ಲೇ ಆಗಬೇಕು ಎಂದು ಸೂಚನೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ನಿಮ್ಮ ಆದೇಶ ಖಂಡಿತಾ ಆಗುತ್ತೆ ಸರ್ ಎಂದರು. ಇದನ್ನೂ ಓದಿ: 14.89 ಲಕ್ಷಕ್ಕೆ ಹೋಂಡಾ ಸಿಟಿ ಸ್ಪೋರ್ಟ್ ಎಡಿಷನ್ ಬಿಡುಗಡೆ – ಕಾರ್‌ನಲ್ಲಿ ಏನು ಬದಲಾವಣೆಯಾಗಿದೆ?