ಚಂಡೀಗಢ: ಹರಿಯಾಣದ ಮಹಿಳೆಯೊಬ್ಬಳು ಪತಿಗೆ ಮೂರು ಬಾರಿ ತಲಾಖ್ ಹೇಳಿ ಪ್ರಿಯಕರನೊಂದಿಗೆ ಓಡಿಹೋಗಿದ್ದಾಳೆ.
ಆನ್ಹೆದಿ ನಿವಾಸಿಯ ಷಾಜಿಯಾ ಮೂವರು ಮಕ್ಕಳ ತಾಯಿಯಾಗಿದ್ದು, ಪತಿ ಅಬ್ಬಾಸ್ ಗೆ ಕಾಗದದ ಮೇಲೆ ಮೂರು ಬಾರಿ ತಲಾಖ್ ಎಂದು ಬರೆದು ವಿಚ್ಛೇದನ ನೀಡಿ, ಪ್ರಿಯಕರನ ಜೊತೆ ಓಡಿಹೋಗಿದ್ದಾಳೆ. ಪ್ರಿಯಕರ ಷಾಜಿಯಾಳ ಸೋದರಳಿಯ ಎಂದು ವರದಿಯಾಗಿದೆ.
ಷಾಜಿಯಾ ತನ್ನ ಪತಿಗೆ ನಾನು ನನ್ನ ಇಚ್ಛೆಯಿಂದ ವಿಚ್ಛೇದನ ನೀಡಲು ಬಯಸುತ್ತೇನೆ. ಮದುವೆಯಾದಗಿನಿಂದಲೇ ನನಗೆ ಹಿಂಸೆ ನೀಡುತ್ತಿದ್ದ. ಹಾಗಾಗಿ ನಾನು ಈ ಮನೆಯಲ್ಲಿ ಇರಲು ಇಷ್ಟಇಲ್ಲದ ಕಾರಣ ಹೋಗುತ್ತಿದ್ದೇನೆ ಎಂದು ಷಾಜಿಯಾ ಪತ್ರದಲ್ಲಿ ಬರೆದಿದ್ದಾಳೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply