ಆಮ್‍ಸ್ಟರ್ ಡ್ಯಾಮ್‍ಗೆ ಹಾರಿದ ಚಿಟ್ಟೆ ಹರ್ಷಿಕಾ!

ಬೆಂಗಳೂರು: ಒಂದಷ್ಟು ಕಾಲ ಚಿತ್ರರಂಗದಿಂದ ಮರೆಯಾದಂತಿದ್ದ ಹರ್ಷಿಕಾ ಪೂಣಚ್ಚ ಚಿಟ್ಟೆ ಚಿತ್ರದ ಮೂಲಕ ಮರಳಿ ಬಂದಿದ್ದಾರೆ. ಈ ಚಿತ್ರವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಇದರ ಜೊತೆಗೇ ಹರ್ಷಿಕಾರ ಪಾತ್ರ ಮತ್ತು ಅಭಿನಯವನ್ನೂ ಕೂಡಾ ಮೆಚ್ಚಿಕೊಂಡಿದ್ದಾರೆ. ರೀಎಂಟ್ರಿ ಕೊಟ್ಟ ಘಳಿಗೆಯಲ್ಲಿಯೇ ಇಂಥಾದ್ದೊಂದು ಗೆಲುವು ಸಿಕ್ಕಿದ್ದರಿಂದ ಹರ್ಷಿಕಾ ಖುಷಿಗೊಂಡಿದ್ದಾರೆ.

ಈ ಖುಷಿಯನ್ನು ಡಿಫರೆಂಟಾಗಿ ಸೆಲೆಬ್ರೇಟ್ ಮಾಡೋ ಇರಾದೆಯಿಂದ ಸೀದಾ ಆಮ್‍ಸ್ಟರ್ ಡ್ಯಾಮ್‍ಗೆ ಹಾರಿದ್ದಾರಂತೆ. ಈ ವಿಚಾರವನ್ನು ಖುದ್ದು ಹರ್ಷಿಕಾ ಸಾಮಾಜಿಕ ಜಾಲತಾಣಗಳ ಮೂಲಕ ಜಾಹೀರು ಮಾಡಿದ್ದಾರೆ.

https://twitter.com/actressharshika/status/1021661279453425664

ಆಮ್‍ಸ್ಟರ್ ಡ್ಯಾಮ್‍ಗೆ ಹರ್ಷಿಕಾ ಕೆಲ ಸ್ನೇಹಕೂಟದೊಂದಿಗೆ ತೆರಳಿದ್ದಾರೆ. ಅಲ್ಲಿನ ಸುಂದರವಾದ ವಾತಾವರಣದಲ್ಲಿ ಇವರೆಲ್ಲರೊಂದಿಗೆ ಅವರು ಚೆಂದದ್ದೊಂದು ಪಾರ್ಟಿ ಆಯೋಜಿಸಿದ್ದಾರಂತೆ. ಅಚಾನಕ್ಕಾಗಿ ಬಹುಕಾಲದಿಂದ ಹಂಬಲಿಸಿದ್ದ ಗೆಲುವೊಂದು ಸಿಕ್ಕು ಬಿಟ್ಟರೆ ಮನಸು ಚಿಟ್ಟೆಯಾಗಿ ಹಾರಾಡುತ್ತದಲ್ಲಾ, ಅಂಥಾದ್ದೇ ಮೂಡಿನಲ್ಲಿರುವ ಹರ್ಷಿಕಾ ಖುಷಿಗೆ ಎಣೆಯಿಲ್ಲದಂತಾಗಿದೆ.

ಚಿಟ್ಟೆ ಚಿತ್ರದ ನಂತರ ಹಲವಾರು ಕನ್ನಡ ಚಿತ್ರಗಳ ಅವಕಾಶಗಳು ಹರ್ಷಿಕಾರನ್ನು ಅರಸಿ ಬರಲಾರಂಭಿಸಿವೆಯಂತೆ. ಆದರೆ ಅವೆಲ್ಲವನ್ನೂ ಪರಿಶೀಲಿಸಿ ಈ ಪಾರ್ಟಿ ಮುಗಿಸಿಕೊಂಡು ಬಂದ ನಂತರವಷ್ಟೇ ಹರ್ಷಿಕಾ ಹೊಸಾ ಚಿತ್ರಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳೋ ತೀರ್ಮಾನ ಮಾಡಿದಂತಿದೆ.

Comments

Leave a Reply

Your email address will not be published. Required fields are marked *