ಮಂತ್ರಾಲಯದಲ್ಲಿ ಹರಿಪ್ರಿಯಾ ಸೆಲ್ಫಿಗೆ ಮುಗಿಬಿದ್ದ ಅಭಿಮಾನಿಗಳು!

ರಾಯಚೂರು: ನೆಚ್ಚಿನ ನಟ, ನಟಿಯರು ಕಣ್ಣ ಮುಂದೆ ಬಿದ್ದರೆ ಸಾಕು, ಅಭಿಮಾನಿಗಳು ಅವರ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬೀಳುತ್ತಾರೆ. ಅದರಲ್ಲೂ ನೆಚ್ಚಿನ ನಟಿರ ಜೊತೆ ಸೆಲ್ಫಿ ತೆಗೆಸಿಕೊಳ್ಳಲು ಹುಡುಗರು ತುದಿಗಾಲ ಮೇಲೆ ನಿಂತಿರುತ್ತಾರೆ.

ಇಂತಹದ್ದೇ ಪರಿಸ್ಥಿತಿಯನ್ನು ಇಂದು ನಟಿ ಹರಿಪ್ರಿಯಾ ಎದುರಿಸಿದ್ದಾರೆ. ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿ ದರ್ಶನಕ್ಕೆ ಬಂದಿದ್ದ ನಟಿ ಹರಿಪ್ರಿಯಾ ಜೊತೆ ಸೆಲ್ಫಿ ಕ್ಲಿಕ್ಕಿಸಲು ಮಹಿಳೆಯರು, ಯುವಕರು ಮುಗಿಬಿದ್ದಿದ್ದರು.

ಬುಧವಾರ ರಾತ್ರಿ ಮಂತ್ರಾಲಯಕ್ಕೆ ಆಗಮಿಸಿದ್ದ ನಟಿ ಹರಿಪ್ರಿಯಾ, ರಾಘವೇಂದ್ರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದರು. ಮಠದ ಪ್ರಾಂಗಣದಲ್ಲಿ ಪ್ರದಕ್ಷಿಣೆ ಹಾಕಿದರು. ಪ್ರತಿ ವರ್ಷ ಕುಟುಂಬ ಸಮೇತ ಮಂತ್ರಾಲಯಕ್ಕೆ ಆಗಮಿಸುವ ಹರಿಪ್ರಿಯಾ ಈ ಬಾರಿ ತಾಯಿ ಹಾಗೂ ಸಹೋದರನ ಜೊತೆ ಬಂದಿದ್ದರು. ದೇವಸ್ಥಾನದಿಂದ ಹರಿಪ್ರಿಯಾ ಹೊರಬರುತ್ತಿದ್ದಂತೆ ಅವರ ಜೊತೆ ಸೆಲ್ಫಿ ತೆಗೆಸಿಕೊಳ್ಳಲು ನಾ ಮುಂದು ನೀ ಮುಂದು ಎಂದು ಅಭಿಮಾನಿಗಳು ಸುತ್ತುವರೆದರು.

Comments

Leave a Reply

Your email address will not be published. Required fields are marked *