ಭಾರತದ ವಿಶ್ವಕಪ್ ತಂಡದಲ್ಲಿ ಹಾರ್ದಿಕ್ ಪಾಂಡ್ಯ ಒಬ್ಬ ಪ್ರಮುಖ ಆಟಗಾರ – ಸುರೇಶ್ ರೈನಾ

ನವದೆಹಲಿ: ಈ ಬಾರಿಯ ವಿಶ್ವಕಪ್ ಟೂರ್ನಿಗೆ ಆಯ್ಕೆಯಾಗಿರುವ ಭಾರತದ ತಂಡದಲ್ಲಿ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಒಬ್ಬ ಪ್ರಮುಖ ಆಟಗಾರ ಎಂದು ಟೀಂ ಇಂಡಿಯಾದ ಆಟಗಾರ ಸುರೇಶ್ ರೈನಾ ಹೇಳಿದ್ದಾರೆ.

ಐಪಿಎಲ್ 12 ಅವೃತ್ತಿಯಲ್ಲಿ ಉತ್ತಮ ಫಾರ್ಮ್‍ನಲ್ಲಿದ್ದ ಹಾರ್ದಿಕ್ ಪಾಂಡ್ಯ ಅವರು ಇದೇ ಆಟವನ್ನು ವಿಶ್ವಕಪ್‍ನಲ್ಲಿ ತೋರಿದರೆ ಅದು ಭಾರತ ತಂಡಕ್ಕೆ ವರದಾನವಾಗಲಿದೆ ಎಂದು ರೈನಾ ಅಭಿಪ್ರಾಯಪಟ್ಟಿದ್ದಾರೆ.

ಹಾರ್ದಿಕ್ ಪಾಂಡ್ಯ ಅವರ ಬಗ್ಗೆ ಮೆಚ್ಚುಗೆಯ ಮಾತನಾಡಿರುವ ರೈನಾ, ಮೇ 30 ರಿಂದ ಇಂಗ್ಲೆಂಡ್‍ನಲ್ಲಿ ಆರಂಭ ಆಗಲಿರುವ ವಿಶ್ವಕಪ್‍ನಲ್ಲಿ ಭಾರತ ತಂಡಕ್ಕೆ ಹಾರ್ದಿಕ್ ಪಾಂಡ್ಯ ಪ್ರಮುಖ ಆಟಗಾರನಾಗುತ್ತಾರೆ ಎಂದು ನನಗೆ ನಂಬಿಕೆ ಇದೆ. ಹಾರ್ದಿಕ್ ಪಾಂಡ್ಯ ತನೊಬ್ಬ ಉತ್ತಮ ಆಲ್ ರೌಂಡರ್ ಎಂದು ಐಪಿಎಲ್‍ನಲ್ಲಿ ಸಾಬೀತು ಮಾಡಿದ್ದಾರೆ. ಇದೇ ರೀತಿಯಲ್ಲಿ ಆಟವಾಡಿದರೆ ಈ ಬಾರಿಯ ವಿಶ್ವಕಪ್‍ನಲ್ಲಿ ಭಾರತ ತಂಡಕ್ಕೆ ಕೀ ಪ್ಲೇಯರ್ ಆಗುತ್ತಾರೆ ಎಂದು ಹೇಳಿದ್ದಾರೆ.

ಐಪಿಎಲ್‍ನಲ್ಲಿ ಇದ್ದ ಲಯದಲ್ಲೇ ವಿಶ್ವಕಪ್‍ನಲ್ಲಿ ಬ್ಯಾಟ್ ಬೀಸಿದರೆ ಪಾಂಡ್ಯ ಭಾರತ ತಂಡದ ಗೇಮ್ ಚೇಂಜರ್ ಆಗಲಿದ್ದಾರೆ. ಫೀಲ್ಡಿಂಗ್‍ನಲ್ಲಿ ಮತ್ತು ಬ್ಯಾಟಿಂಗ್‍ನಲ್ಲಿ ತಂಡಕ್ಕೆ ಉತ್ತಮ ಕೊಡುಗೆ ನೀಡಲಿದ್ದಾರೆ ಮತ್ತು ಯಾವುದೇ ಸಮಯದಲ್ಲದರೂ ಬಂದ ಬ್ಯಾಟ್ ಬೀಸುವ ಸಾಮರ್ಥ್ಯ ವನ್ನು ಹೊಂದಿದ್ದಾರೆ. ತಂಡಕ್ಕೆ ಬೌಲರ್‍ಗಳ ಸಮಸ್ಯೆಯಾದಾಗ ನಿರ್ಣಾಯಕ ಓವರಗಳನ್ನು ಬೌಲ್ ಮಾಡಲು ಪಾಂಡ್ಯ ಸೂಕ್ತವಾದ ಬೌಲರ್. ಈ ಎಲ್ಲಾ ವಿಭಾಗದಲ್ಲೂ ಉತ್ತಮ ಆಟವಾಡುವ ಪಾಂಡ್ಯ ಭಾರತ ತಂಡಕ್ಕೆ ವರದಾನವಾಗಲಿದ್ದಾರೆ ಎಂದು ಹೇಳಿದ್ದಾರೆ.

ಐಪಿಎಲ್‍ನಲ್ಲಿ ಮುಂಬೈ ಇಂಡಿಯನ್ಸ್ ಪರ ಮ್ಯಾಚ್ ವಿನ್ನಿಂಗ್ ಆಟವಾಡಿದ ಹಾರ್ದಿಕ್ ಪಾಂಡ್ಯ ಆಡಿದ 15 ಪಂದ್ಯಗಳಲ್ಲಿ 190 ಭರ್ಜರಿ ಸ್ಟ್ರೈಕ್ ರೇಟ್‍ನೊಂದಿಗೆ 402 ರನ್ ಸಿಡಿಸಿದ್ದರು ಇದರಲ್ಲಿ 38 ಬೌಡಂರಿ ಮತ್ತು 29 ಸಿಕ್ಸರ್ ಹೊಡೆದಿದ್ದರು. ಬೌಲಿಂಗ್‍ನಲ್ಲೂ ಮಿಂಚಿದ್ದ ಈ 25 ವರ್ಷದ ಆಲ್ ರೌಂಡರ್ 16 ಪಂದ್ಯಗಳಲ್ಲಿ 14 ವಿಕೆಟ್ ಸಾಧನೆ ಮಾಡಿದ್ದರು.

Comments

Leave a Reply

Your email address will not be published. Required fields are marked *